PF Account
ಸರ್ಕಾರಿ ಅಥವಾ ಖಾಸಾಗಿ ವಲಯದಲ್ಲಿ ಉದ್ಯೋಗ ಮಾಡುತ್ತಿರುವವರು ಇದೀಗ ಒಂದೇ ಕ್ಲಿಕ್‌ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದಾದ ಆಯ್ಕೆ ಲಭ್ಯವಿದೆ.! ಹಾಗಾಗಿ, ಈಗ ಸುಲಭವಾಗಿ ‘ಯುಎಎನ್’ ನಂಬರ್ ಮೂಲಕ ಎಸ್ಎಂಎಸ್ ಮುಖಾಂತಹ ಇಪಿಎಫ್ ಹಣವನ್ನು ಚೆಕ್ ಮಾಡಬಹುದು.
ಯಾವುದೇ ಸರ್ಕಾರಿ ಅಥವಾ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡಿದರೂ ಸರಿಯೇ ಸೇವಿಂಗ್ಸ್ ಅಂತಾ PF ಹಣ ಒಂದು ಕಡೆ ಜಮಾ ಆಗುತ್ತಿರುತ್ತದೆ. ಇದೊಂದು ಉದ್ಯೋಗಿಗಳಿಗೆ ಸಮಾಧಾನಕರ ವಿಚಾರ. ತಿಂಗಳಿಗೆ ಬರುವ ಸಂಬಳದಲ್ಲಿ ಸ್ವಲ್ಪ ಹಣ ಪಿಎಫ್ ಖಾತೆಗೆ ಕಡಿತವಾಗಿ ನಿಮ್ಮ ಕೈಯಲ್ಲಿ ಉಳಿದ ಹಣ ಸಿಗುತ್ತದೆ.
ಮುಂದಿನ ಭವಿಷ್ಯಕ್ಕೆ ಸಹಾಯ ಆಗಲು ಈ ಹಣವೂ ಬಹಳ ಉಪಯೋಗ ಆಗಲಿದೆ. ಪ್ರತಿ ತಿಂಗಳು 1,000 ಅಥವಾ 2,000 ಹೀಗೆ ಕಡಿತವಾಗುವ ಹಣ ನಿಜವಾಗಿಯೂ ಪಿಎಫ್ ಖಾತೆಗೆ ಹೋಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗ ನೀವು ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಇಂದ ತಿಳಿಯಬಹುದು. ನಿಮ್ಮ ಪಿಎಫ್ ಖಾತೆಯ balance ಸಹ ನೀವು ನೋಡಬಹುದು.
ಉದ್ಯೋಗಿಗಳಿಗೆ ನಿವೃತ್ತಿ ಯೋಜನೆ ಕಡ್ಡಾಯವಾಗಿದೆ. ಉದ್ಯೋಗಿಗಳ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ (ಇಪಿಎಫ್) ಯೋಜನೆಯನ್ನು ತಂದಿದೆ. ಉದ್ಯೋಗಿ ಸೇವೆ ಸಲ್ಲಿಸುವವರೆಗೆ, ಉದ್ಯೋಗದಾತ ಮತ್ತು ಉದ್ಯೋಗಿ ಕೊಡುಗೆಗಳನ್ನು ಸೇರಿಸಲಾಗುತ್ತದೆ. ಆದರೆ ಅನೇಕ ಉದ್ಯೋಗಿಗಳಿಗೆ ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು ಎಂದು ತಿಳಿದಿಲ್ಲ.
ಇತ್ತೀಚಿನವರೆಗೂ, ಕಂಪನಿಗಳು ನೀಡಿದ ಇಪಿಎಫ್ ಹೇಳಿಕೆಯಲ್ಲಿ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲಾಗುತ್ತಿತ್ತು. ಆದರೆ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯು ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತದೆ. ಉದ್ಯೋಗಿಗಳು ಪಿಎಫ್ ಖಾತೆಯ ಬಾಕಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ಪಿಎಫ್ ಖಾತೆಯ ಪೂರ್ಣ ವಿವರ ನೋಡುವುದು ಹೇಗೆ?: ನೀವು ಅಪ್ಲಿಕೇಶನ್ ಮೂಲಕ ಹಾಗೂ ಸಂದೇಶ ಕಳಿಸುವ ಮೂಲಕ ಹಾಗೂ EPFO portal ನಿಂದ ಪಿಎಫ್ ಖಾತೆಯ ವಿವರಗಳನ್ನು ಪಡೆಯಬಹುದು.
ಮೊಬೈಲ್ ಅಪ್ಲಿಕೇಶನ್ ಮೂಲಕ ಪಿಎಫ್ ವಿವರ ಪಡೆಯುವ ಹಂತಗಳು
ಹಂತ 1. ಮೊದಲು ಪ್ಲೇ ಸ್ಟೋರ್ ಗೆ ಹೋಗಿ ಉಮಾಂಗ್(UMANG) ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ನಿಮ್ಮ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆ ಹಾಗೂ password ಹಾಕಿ ಲಾಗ್ ಇನ್ ಆಗಿ.
ಹಂತ 2:- ನಿಮ್ಮ UAN ನಂಬರ್ ಹಾಕಬೇಕು. ನಿಮ್ಮ ಖಾತೆಗೆ ನೋಂದಣಿ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ನಮೂದಿಸಿ.
ಹಂತ 3:- ಅಪ್ಲಿಕೇಶನ್ ಬಲಭಾಗದಲ್ಲಿ ಸದಸ್ಯರ ಐಡಿ ಎಂಬ option ಕ್ಲಿಕ್ ಮಾಡಬೇಕು. ನಿಮ್ಮ ಇ ಪಾಸ್ಬುಕ್ ಡೌನ್ಲೋಡ್ ಮಾಡಿಕೊಳ್ಳಿ.
ಪಿಎಫ್ ಕಚೇರಿ ಸೂಚಿಸಿ
ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ನೀಡಿ ಮೊಬೈಲ್ ಸಂಖ್ಯೆ ದಾಖಲಿಸಿದ ನಂತರ ಪಿಎಫ್ ಅಕೌಂಟ್ ಹೊಂದಿರುವ ರಾಜ್ಯ ಮತ್ತು ನಿಮ್ಮ ಕಚೇರಿ ಪ್ರದೇಶವನ್ನು ಸೂಚಿಸಿ.!
ಒಟಿಪಿ ದಾಖಲಿಸಿ ಮಾಹಿತಿ ಪಡೆಯಿರಿ.!!
ರಾಜ್ಯ ಮತ್ತು ನಿಮ್ಮ ಕಚೇರಿ ಪ್ರದೇಶವನ್ನು ನೀಡಿದ ನಂತರ ಅಲ್ಲಿರುವ captcha ಕೋಡ್ ನಮೂದಿಸಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ ಪಿನ್ ನಂಬರ್ ಬರಲಿದೆ. ಒಟಿಪಿ ದಾಖಲಿಸಿ ಪೂರ್ಣ ವಿವರ ಪಡೆಯಬಹುದು.
ಸಂದೇಶದ ಮೂಲಕ ಪಿಎಫ್ ಖಾತೆಯ ಮಾಹಿತಿ ಪಡೆಯಿರಿ
“EPFO UAN” ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ SMS ಕಳುಹಿಸಿ. ನಿಮಗೆ ಯಾವ ಭಾಷೆಯಲ್ಲಿ SMS ಪಡೆಯಬಹುದು. ನಿಮ್ಮ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಟೈಪ್ ಮಾಡಿ SMS ಕಳುಹಿಸಬೇಕು. ಉದಾಹರಣೆಗೆ ನಿಮಗೆ ಕನ್ನಡ ಭಾಷೆಯಲ್ಲಿ ವಿವರ ಬೇಕು ಎಂದರೆ “EPFO UAN KAN” ಎಂದು ಟೈಪ್ ಮಾಡಿ SMS ಕಳುಹಿಸಿ. ನೀವು ವಿವರಗಳನ್ನು ಪಡೆಯಲು UAN ಸಂಖ್ಯೆಯನ್ನು ನಿಮ್ಮ KYC ಗೆ ಲಿಂಕ್ ಮಾಡಬೇಕಾಗಿ ಇರುತ್ತದೆ.
ಪಿಎಫ್ ಖಾತೆಯ ಮಾಹಿತಿ ಪಡೆಯುವ ಮೂರನೇ ವಿಧಾನ: EPFO ಪೋರ್ಟಲ್ ಗೆ ಹೋಗಿ ಲಾಗಿನ್ ಮಾಡಿ. ನಮ್ಮ ಸೇವಾಗಳು ಎಂಬ ಆಪ್ಷನ್ ಕ್ಲಿಕ್ ಮಾಡಿ. drop-down menu ಗೆ ಹೋಗಿ “ಉದ್ಯೋಗಗಳಿಗಾಗಿ” ಎಂಬ ಆಯ್ಕೆ ಒತ್ತಿ. ನಂತರ ಸದಸ್ಯ PassBook ಎಂಬಲ್ಲಿ ಹೋಗಿ UAN ಸಂಖ್ಯೆ ಮತ್ತು pasaword ಹಾಕಿ. ನಂತರ ಅಲ್ಲಿ ಕೇಳುವ ಮಾಹಿತಿಗಳನ್ನು ಸರಿಯಾದ ಕ್ರಮದಲ್ಲಿ ತುಂಬಬೇಕು. ನಂತರ ನಿಮಗೆ ಪಿಎಫ್ ಖಾತೆಯ ಪೂರ್ಣ ದೊರೆಯುತ್ತದೆ.
ಪಿಎಫ್ ಖಾತೆ ವಿಲೀನ ಹೇಗೆ?
UAN ಸಂಖ್ಯೆ ಜತೆ EPFO ಚಂದಾದಾರರು ಒಟ್ಟು 10 ಖಾತೆಗಳನ್ನು ವಿಲೀನ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ 120ಕ್ಕೂ ಹೆಚ್ಚು EPFO ಕಚೇರಿಗಳಿಗೆ ಅತಿ ಶೀಘ್ರದಲ್ಲಿ ಈ ಸೌಲಭ್ಯ ಅಳವಡಿಸುವಂತೆ ನಿರ್ದೇಶನ ನೀಡಲಾಗಿದ್ದು, ಆನ್‌ಲೈನಿನಲ್ಲಿಯೂ ಶೀಘ್ರವೇ ಈ ಸೇವೆ ಬರಲಿದೆ.
ಡಿಜಿಟಲ್ ರೀತಿ ಅನುಮೋದನೆಯಾಗಿರಬೇಕು.!!
ನಿಮ್ಮ ಉದ್ಯೋಗ ಸಂಸ್ಥೆಯಿಂದ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ಡಿಜಿಟಲ್ ರೀತಿಯಲ್ಲಿ ಅನುಮೋದನೆಯಾಗಿದ್ದರೆ ಮಾತ್ರ ಈ ಮಾಹಿತಿ ನಿಮಗೆ ಸಿಗಲಿದೆ. ಇಪಿಎಫ್ ಖಾತೆಗಳ ಬಗ್ಗೆ ಕನ್ನಡದಲ್ಲೂ ಮಾಹಿತಿ ಸಿಗಲಿದ್ದು, ಹೆಚ್ಚಿನ ಮಾಹಿತಿಗೆ 1800118005 ಸಹಾಯವಾಣಿಯನ್ನು ಸಂಪರ್ಕಿಸಿ.!!
UAN ಸಂಖ್ಯೆ ಎಂದರೇನು?
ಯುಎಎನ್ ಸಂಖ್ಯೆ ಉದ್ಯೋಗಿಗಳ ಭವಿಷ್ಯ ನಿಧಿಗೆ ಒದಗಿಸುವ 12 ಅಂಕೆಗಳ ವಿಶಿಷ್ಟ ನಂಬರ್ ಆಗಿದೆ. ಈ ವಿಶಿಷ್ಟ ನಂಬರ್ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನೀಡುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು UAN ಅನ್ನು ದೃಢೀಕರಣ ಮಾಡುತ್ತದೆ. 12 ಅಂಕೆಗಳ ವಿಶಿಷ್ಟ ನಂಬರ್ ಪ್ರತಿ ಉದ್ಯೋಗಿಗೆ ಅವರು ಉದ್ಯೋಗಕ್ಕೆ ಸೇರಿದ ತಕ್ಷಣದಿಂದ ಅವರ ಜೀವನದುದ್ದಕ್ಕೂ ಒಂದೇ ಆಗಿರುತ್ತದೆ, ಅವರು ಹೊಸ ಕಂಪನಿ ಅಥವಾ ಬೇರೆ ಬಗೆಯ ಉದ್ಯೋಗಕ್ಕೆ ಹೋದರು ಈ ಸಂಖ್ಯೆ ಮಾತ್ರ ಬದಲಾಗುವುದಿಲ್ಲ. ಈ ಹಣವನ್ನು ನಿಮ್ಮ ಅಗತ್ಯಗಳಿಗೆ ತೆಗೆದುಕೊಳ್ಳುವ ಹಕ್ಕು ಇರುತ್ತದೆ.