PF Balance ಮೊಬೈಲ್ ನಲ್ಲಿ PF ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ವಿಧಾನ.!

PF

ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕರಿಗೂ ಕೂಡ ಅವನ ಮೂಲ ವೇತನದಲ್ಲಿ 12% ಕಡಿತವಾಗಿ EPF ಖಾತೆಗೆ ಜಮೆ ಆಗುತ್ತದೆ. ಹಾಗೆಯೇ ಉದ್ಯೋಗದಾತನು ಕೂಡ ಇಷ್ಟೇ ಪಾಲಿನ ಶೇರ್ ನೀಡುತ್ತಾರೆ. ನೀವು ಕೆಲಸ ಬಿಟ್ಟಾಗ ಇದನ್ನು ಕ್ಲೈಮ್ ಮಾಡಿ ಪಡೆದುಕೊಳ್ಳಬಹುದು ಅಥವಾ ಮತ್ತೊಂದು ಕಡೆ ಕೆಲಸ ಮಾಡಿದಾಗ ಇದನ್ನು ಮುಂದುವರಿಸಬಹುದು,

ಒಂದು ವೇಳೆ ನಡುವೆ ನಿಮಗೆ ಹಣಕಾಸಿನ ಅವಶ್ಯಕತೆ ಇದ್ದರೆ ಇದರಲ್ಲಿ ಸ್ವಲ್ಪ ಪ್ರಮಾಣವನ್ನು ಕೂಡ ಹಿಂಪಡೆಯಬಹುದು. 10 ವರ್ಷಗಳ ಕಾಲ ನೀವು ಈ ಹಣವನ್ನು ಪಡೆಯದೆ ಖಾತೆ ಮುಂದುವರೆಸಿದ್ದಲ್ಲಿ ಪಿಂಚಣಿಗೂ ಸಹ ಹೋಗುತ್ತದೆ. 60 ವರ್ಷಗಳಾದ ಬಳಿಕ ನಿಮ್ಮ ಉಳಿತಾಯದ ಆಧಾರದ ಮೇಲೆ ನೀವು ಪಿಂಚಣಿಯನ್ನು ಕೂಡ ಪಡೆಯಬಹುದು.

WhatsApp Group Join Now
Telegram Group Join Now

ಇಷ್ಟೆಲ್ಲಾ ಅನುಕೂಲ ಇರುವ ಈ EPF ಖಾತೆಗೆ ಪಾಸ್ ಬುಕ್ (PF account details) ಏನು ನೀಡುವುದಿಲ್ಲ, ಆದರೂ ನೀವು ಖಾತೆಯ ಡಿಟೇಲ್ಸ್ ತೆಗೆದುಕೊಳ್ಳುವುದು ಮುಖ್ಯ . ನಮ್ಮ PF ಖಾತೆಯ ಬ್ಯಾಲೆನ್ಸ್ ತಿಳಿದುಕೊಳ್ಳುವುದಕ್ಕೆ ಹಲವಾರು ವಿಧಾನಗಳಿವೆ. ಇದರಲ್ಲಿ ಸುಲಭವಾದ ಎರಡು ವಿಧಾನಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

1. Miss call :- 011 – 022901406 ಈ ಸಂಖ್ಯೆಗೆ ಮಿಸ್ ಕಾಲ್ ನೀಡಿದರೆ EPFO ಕಡೆಯಿಂದ ನಿಮಗೆ SMS ರಿಪ್ಲೈ ಬರುತ್ತದೆ. ನೀವು ಮಿಸ್ ಕಾಲ್ ನೀಡಿದ ಒಂದು ನಿಮಿಷದ ಒಳಗಡೆ ನೀವು SMS ಪಡೆಯುತ್ತೀರಿ ಮತ್ತು ಆ SMS ನಲ್ಲಿ ನಿಮ್ಮ ಆ ತಿಂಗಳ EPF ಕಡಿತದ ಪಾಲು ಎಷ್ಟಿತ್ತು ಎನ್ನುವ ವಿವರ ಬರುತ್ತದೆ ಹಾಗೂ ಒಟ್ಟಾರೆಯಾಗಿ ಎಷ್ಟು ಹಣ ಖಾತೆಯಲ್ಲಿದೆ ಎನ್ನುವುದರ ವಿವರ ಬರುತ್ತದೆ ಆದರ ಡಿಟೇಲ್ ಆಗಿ ನೋಡಲು ಸಾಧ್ಯವಿಲ್ಲ.

2. Umang app :- ಈ ಆಪ್ ಮೂಲಕ ನೀವು ನಿಮ್ಮ ಖಾತೆಯ ಸಂಪೂರ್ಣ ವಿವರವನ್ನು ನಿಖರವಾಗಿ ಪಡೆಯಬಹುದು. ಉಮಾಂಗ್ ಆಪ್ ಮೂಲಕ EPF ಚೆಕ್ ಮಾಡಲು ಈ ವಿಧಾನಗಳನ್ನು ಅನುಸರಿಸಿ.
* ಮೊದಲಿಗೆ ಪ್ಲೇ ಸ್ಟೋರ್ ಗೆ ಹೋಗಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ. register , login ಎರಡು ಆಪ್ಷನ್ ಇರುತ್ತದೆ ಮೊದಲ ಬಾರಿಗೆ ಬಳಸುತ್ತಿದ್ದರೆ Mobile no. ಕೊಟ್ಟು ರಿಜಿಸ್ಟರ್ ಆಗಬೇಕು

* ರಿಜಿಸ್ಟರ್ ಆದ ನಂತರ ಲಾಗಿನ್ ಆಗಲು Password ಸೆಟ್ ಮಾಡಬಹುದು ಅಥವಾ generate OTP ಕೊಡಬಹುದು. OTP ಕೊಟ್ಟು Log in ಆದಮೇಲೆ Search ಬಾರ್ ನಲ್ಲಿ EPFO ಎಂದು ಟೈಪ್ ಮಾಡಿ ಸರ್ಚ್ ಕೊಡಿ
* EPFO ವಿಂಡೋಸ್ ಸಿಗುತ್ತದೆ ಅದನ್ನು ಸೆಲೆಕ್ಟ್ ಮಾಡಿ
* ಅದನ್ನು ಕ್ಲಿಕ್ ಮಾಡಿದಾಗ ನಿಮ್ಮ UAN ನಂಬರ್ ಕೇಳಲಾಗುತ್ತದೆ, ಎಂಟ್ರಿ ಮಾಡಿ get OTP ಕ್ಲಿಕ್ ಮಾಡಿ

* ನಿಮ್ಮ OTP Verify ಆಗುತ್ತಿದ್ದಂತೆ ನೀವು ನಿಮ್ UAN login ಗೆ login ಆಗುತ್ತೀರಿ. ಆ ಮೂಲಕ ನಿಮ್ಮ ಪಾಸ್ ಬುಕ್ ಚೆಕ್ ಮಾಡಬಹುದು. View ಎನ್ನುವ ಆಪ್ಷನ್ ಕ್ಲಿಕ್ ಮಾಡಿ ಡಿಟೇಲ್ ಆಗಿ ನೋಡಿ. Save ಮಾಡಿಕೊಳ್ಳುವ ಆಪ್ಷನ್ ಕೂಡ ಇರುತ್ತದೆ ಅದನ್ನು Pdf ಫಾರ್ಮೆಟ್ ಗೆ ಬದಲಾಯಿಸಿಕೊಳ್ಳುವ ಆಪ್ಷನ್ ಕೂಡ ಇರುತ್ತದೆ . ನಿಮ್ಮ ಪಾಸ್ ಬುಕ್ ನಲ್ಲಿ ಯಾವ ತಿಂಗಳು ನಿಮಗೆ ಎಷ್ಟು ಸಂಬಳ ಬಂದಿದೆ ಅದರಲ್ಲಿ ಎಷ್ಟು PF ಗಾಗಿ ಕಟ್ ಆಗಿದೆ, ಯಾವ ಯಾವ ಕಂಪನಿಗಳಲ್ಲಿ ಬ್ಯಾಲೆನ್ಸ್ ಇದೆ, ಯಾವುದು ಕ್ಲಿಯರ್ ಆಗಿದೆ ಇತ್ಯಾದಿ ಮಾಹಿತಿ ಡೀಟೇಲ್ ಆಗಿ ಸಿಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment