PGCIL Recruitmen
ವಿದ್ಯುತ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬಯಸುವ ಎಲ್ಲ ಯುವ ಜನತೆಗೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ( PGCIL Recruitment) ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ, ಕಂಪನಿಯು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುಕೊಳ್ಳುತ್ತಿದೆ.
ಈ ಸಂಬಂಧ ಅರ್ಹ ಆಸಕ್ತರಿಂದ ಅರ್ಜಿ ಕೂಡ ಆಹ್ವಾನ ಮಾಡಿದೆ. ಇವು ತರಬೇತಿ ಹುದ್ದೆಗಳಾಗಿದ್ದು ಈ ತರಬೇತಿಯಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಬೇಕಾದ ಎಲ್ಲಾ ಟ್ರೈನಿಂಗ್ ನೀಡಿ, ತರಬೇತಿ ಭತ್ಯೆ ಕೂಡ ನೀಡಲಾಗುತ್ತಿದೆ.
ಹಾಗಾಗಿ ರಾಜ್ಯದ ಯುವಜನತೆ ಪಾಲಿಗೆ ಒಂದು ಅತ್ಯದ್ಭುತ ಅವಕಾಶ ಎಂದರೂ ತಪ್ಪಾಗಲಾರದು. ಈ ಬಗ್ಗೆ ನೀವು ಆಸಕ್ತರಾಗಿದ್ದರೆ ಕಂಪನಿ ನೋಟಿಫಿಕೇಶನ್ ನಲ್ಲಿರುವ ಪ್ರಮುಖ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಅಂಕಣವನ್ನು ಕೊನೆಯವರೆಗೂ ಓದಿ ಮತ್ತು ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ( PGCIL)
ಉದ್ಯೋಗ ಸಂಸ್ಥೆ:- ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)
ಹುದ್ದೆ ಹೆಸರು:- ವಿವಿಧ ಮಾದರಿ ಹುದ್ದೆಗಳು
ಹುದ್ದೆಗಳ ವಿವರ:-
* ಡಿಪ್ಲೋಮೋ ಟ್ರೈನಿ
* ಜೂನಿಯರ್ ಆಫೀಸರ್ ಟ್ರೈನಿ
* ಅಸಿಸ್ಟೆಂಟ್ ಟ್ರೈನಿ
ಒಟ್ಟು ಹುದ್ದೆಗಳ ಸಂಖ್ಯೆ:- 800 ಹುದ್ದೆಗಳು
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಸಾರವಾಗಿ ಮಾಸಿಕವಾಗಿ ರೂ. 21,500 ರಿಂದ ರೂ. 1,17,500 ರವರೆಗೆ ವೇತನ ಸಿಗುತ್ತದೆ
ಉದ್ಯೋಗ ಸ್ಥಳ:- ಬೆಂಗಳೂರು ಸೆರೆದಂತೆ ದೇಶದ ವಿವಿಧೆಡೆ
ಶೈಕ್ಷಣಿಕ ವಿದ್ಯಾರ್ಹತೆ :-
* ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮಾ, B.E, M.E, M.Tech ಉತ್ತೀರ್ಣರಾಗಿರಬೇಕು
* ಡಿಪ್ಲೊಮಾ ಟ್ರೈನಿ (ಸಿವಿಲ್) ವಿಭಾಗಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧ ಪಟ್ಟ ಕ್ಷೇತ್ರದಲ್ಲಿ ಡಿಪ್ಲೋಮಾ, B.E, M. E, M. Tech ಪಡೆದಿರಬೇಕು.
* ಜೂನಿಯರ್ ಆಫೀಸರ್ ಟ್ರೈನಿ (HR) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವಿ B.Com, BBA, BBS, ಪಿಜಿ ಡಿಗ್ರಿ, ಡಿಪ್ಲೋಮಾ ಪಾಸ್ ಮಾಡಿರಬೇಕು
* ಜೂನಿಯರ್ ಆಫೀಸರ್ ಟ್ರೈನಿ (F&A) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು CA, CAM, ಉತ್ತೀರ್ಣರಾಗಿರಬೇಕು
* ಸಹಾಯಕ ಟ್ರೇನಿ (F&A) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು B.com, CA, CMA, ಉತ್ತೀರ್ಣರಾಗಿರಬೇಕು
ವಯೋಮಿತಿ:-
* ಕನಿಷ್ಠ ವಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ 27 ವರ್ಷಗಳು
ಅರ್ಜಿ ಶುಲ್ಕ:-
+ ಸಾಮಾನ್ಯ ಹಾಗೂ OBC ಅಭ್ಯರ್ಥಿಗಳಿಗೆ ರೂ. 200
* SC / ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* PGCIL ಅಧಿಕೃತ ವೆಬ್ಸೈಟ್ ಗೆ ತೆರಳಿ ಅರ್ಜಿ ಫಾರಂ ಭರ್ತಿ ಮಾಡಿ ಸಬ್ಮಿಟ್ ಮಾಡಿ
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಇರುತ್ತದೆ
* ಆಯ್ಕೆ ಆದವರಿಗೆ ಸ್ಕಿಲ್ ಟೆಸ್ಟ್
* ದಾಖಲೆಗಳ ಪರಿಶೀಲನೆ
* ನೇರ ಸಂದರ್ಶನ ನಡೆಸಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 12 ಅಕ್ಟೋಬರ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 12 ನವೆಂಬರ್ 2024.