Phone pe
ಭಾರತವು ಡಿಜಿಟಲೀಕರಣದತ್ತ (Digital India) ಯಶಸ್ವಿಯಾಗಿ ಮುನ್ನುಗುತ್ತಿದೆ. ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ನಿಟ್ಟಿನಲ್ಲಿ ಹೊಸ ಪರ್ವವೇ ನಡೆದಿದೆ ಎಂದು ಹೇಳಬಹುದು. ಆಂಡ್ರಾಯ್ಡ್ ಫೋನ್ ಬಳಕೆ ಹೆಚ್ಚಾದಂತೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಅಮೆಜಾನ್ ಪೇ ಮುಂತಾದ UPI ಆಧಾರಿತ ಆಪ್ ಗಳ ಸೇವೆ ಮನೆಮನೆ ಗಳಿಗೂ ತಲುಪುವಂತಾಯಿತು.
ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಜನ ಆನ್ಲೈನ್ ವಹಿವಾಟಿಕೆ ಬಹುಬೇಗ ಒಗ್ಗಿಕೊಂಡಿರು. ಇಂದು ರಸ್ತೆ ಬಳಿ ವ್ಯಾಪಾರಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳ ವರೆಗೆ ನಾವು ಶಾಪಿಂಗ್ ನ್ನು ಕೈಯಲ್ಲಿ ಕ್ಯಾಶ್ ಇಲ್ಲದಿದ್ದರೂ ಅಕೌಂಟಲ್ಲಿ ದುಡ್ಡಿದ್ದರೆ ಕೈಯಲ್ಲಿರುವ ಮೊಬೈಲ್ ಮೂಲಕವೇ ಸುಲಭವಾಗಿ ವ್ಯವಹರಿಸಬಹುದು.
ಇದು ಖುಷಿ ಪಡುವ ಸಂಗತಿಯೇ ಮತ್ತು ಅನುಕೂಲಕರ ಸಂಗತಿಯೇ ಆಗಿದ್ದರು ಇದರೊಂದಿಗೆ ದಿನ ಕಳೆದಂತೆ ಅವಲಂಬನೆ ಹೆಚ್ಚಾದಷ್ಟು ಮತ್ತೊಂದು ರೀತಿಯ ಅ’ಪಾ’ಯ ಜನಸಾಮಾನ್ಯರನ್ನು ಕಾಡುತ್ತಿದೆ. ಅದೇನೆಂದರೆ ಈಗೀಗ ಆನ್ಲೈನ್ ನಲ್ಲಿ ಹಣ ಕಳೆದುಕೊಂಡು ವಂ’ಚ’ನೆಗೊಳಗಾದವರ ಸಂಖ್ಯೆ ವಿಪರೀತವಾಗಿ ಹೆಚ್ಚಾಗುತ್ತಿದೆ.
ಈ ಸುದ್ದಿ ಓದಿ:- Ration Card : ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದಿಯೇ ಇಲ್ಲವೇ ಈ ರೀತಿ ಚೆಕ್ ಮಾಡ್ಕೊಳಿ.!
ಹೀಗಾಗಿ ಆನ್ಲೈನ್ ಮೂಲಕ ವಹಿವಾಟು ನಡೆಸುವಂತಹ ಗ್ರಾಹಕರಿಗೆ ಸೈಬರ್ ಕ್ರೈಂ (Cyber Crime) ಬ್ರಾಂಚ್ ಪೊಲೀಸರು ಎಚ್ಚರಿಕೆ ಒಂದನ್ನು ನೀಡಿದ್ದಾರೆ. ಸಾಮಾನ್ಯವಾಗಿ ಆನ್ಲೈನ್ ನಲ್ಲಿ ಅದರಲ್ಲೂ ಫೋನ್ ಪೇ ಗೂಗಲ್ ಪೇ ಮೂಲಕ ಅಮಾಯಕ ರನ್ನು ಯಾಮರಿಸುವ ಹೊಸ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ.
ಈ ಖದೀಮರು ಮೊದಲಿಗೆ ಸ್ವಲ್ಪ ಹಣವನ್ನು ನಿಮ್ಮ ನಂಬರ್ ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಬಳಿಕ ನಾವು ನಂಬರ್ ಮಿಸ್ಸಾಗಿ ನಿಮ್ಮ ಖಾತೆಗೆ ಹಣ ಹಾಕಿ ಬಿಟ್ಟಿದ್ದೇವೆ ದಯವಿಟ್ಟು ಹಣದ ಅವಶ್ಯಕತೆ ಇದೆ ಈಗಲೇ ಅದನ್ನು ವಾಪಸ್ಸು ಕಳಿಸಿಕೊಡಿ ಎಂದು ಕರೆ ಮಾಡಿ ಬೇಡಿಕೊಳ್ಳುತ್ತಾರೆ.
ಈ ಬಗ್ಗೆ ದಯೆ ತೋರಿ ಹಣ ಕಳುಹಿಸಿದರೆ ಕುತ್ತು ಬರುವುದು ಖಂಡಿತ ಯಾಕೆಂದರೆ ಇದು ಹೊಸ ರೀತಿಯಾಗಿ ವಂ’ಚಿ’ಸು’ವ ಜಾಲವಾಗಿದೆ ನೀವೇನಾದರೂ ಯಾಮಾರಿ ಅವರ ಮಾತಿಗೆ ಮರುಳಾಗಿ ನಿಮ್ಮ ಮೊಬೈಲ್ ನಿಂದ ಅವರು ಹೇಳಿದ ನಂಬರ್ ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣದಲ್ಲಿ ಹ್ಯಾಕ್ ಆಗಿ ನಂತರ ಇಡೀ ಖಾತೆಯಲ್ಲಿರುವ ಹಣ ಲೂ’ಟಿಯಾಗುತ್ತದೆ.
ಈ ಸುದ್ದಿ ಓದಿ:- Pradhan Mantri Ujjwala Yojana: ಉಚಿತ ಗ್ಯಾಸ್ ವಿತರಣೆ ಆಸಕ್ತರು ಅರ್ಜಿ ಸಲ್ಲಿಸಿ.!
ಹಾಗಾಗಿ ಇಂತಹ ಕರೆಗಳಿಂದ ಎಚ್ಚರವಾಗಿರಿ ಎಂದು ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಅವರು ನೀಡಿದ ಮತ್ತೊಂದು ಸಲಹೆ ಏನೆಂದರೆ, ಹಣ ಹಿಂತಿರುಗಿಸಲು ಯಾವುದಾದರೂ ವಾಟ್ಸಾಪ್ ಸಂದೇಶ ಕಳುಹಿಸಿ ಲಿಂಕ್ ಕ್ಲಿಕ್ ಮಾಡಲು ಹೇಳಿದರೆ ಅಥವಾ ನೆಕ್ಸ್ಟ್ ಮೆಸೇಜ್ ಮಾಡಿ.
ಆ ಲಿಂಕ್ ಕ್ಲಿಕ್ ಮಾಡಲು ಹೇಳಿದರೆ ದಯವಿಟ್ಟು ಅದನ್ನು ನಂಬಬೇಡಿ ಒಂದು ವೇಳೆ ಅವರು ನಿಜವಾಗಿ ಹಣ ಕಳೆದುಕೊಂಡಿದ್ದರೆ ಸೂಕ್ತ ದಾಖಲೆಗಳ ಜೊತೆಗೆ ಹತ್ತಿರದಲ್ಲಿರುವ ಪೊಲೀಸ್ ಠಾಣೆಗೆ ಬಂದು ಹಣ ಪಡೆದುಕೊಂಡು ಹೋಗಲು ಹೇಳಿ ಎಂದು ತಿಳಿಸಿದ್ದಾರೆ ಕಾಲ ಬದಲಾದಂತೆ ಜನರ ಹೆಚ್ಚು ಸ್ಮಾರ್ಟ್ ಆದಂತೆ ಕಳ್ಳತನಕ್ಕೆ ವಂಚಕರು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ.
ಇನ್ನೊಬ್ಬರಿಗೆ ಆಗಿರುವ ಸಮಸ್ಯೆಯನ್ನು ನೋಡಿ ನಾವು ಎಚ್ಚೆತ್ತುಕೊಂಡು ಬದುಕುವುದೇ ಬುದ್ಧಿವಂತಿಕೆ. ಹಾಗಾಗಿ ಇನ್ನು ಮುಂದೆ ಇಂತಹ ವಿಚಾರಗಳ ಬಗ್ಗೆ ಎಚ್ಚರವಾಗಿರಿ ಹಾಗೂ ತಪ್ಪದೆ ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದ ಹಾಗೂ ಸ್ನೇಹಿತರೊಂದಿಗೆ ಶೇರ್ ಮಾಡುವ ಮೂಲಕ ಅವರಿಗೂ ಜಾಗೃತಿ ಮೂಡಿಸಿ.