Pink bus
ಶಕ್ತಿ ಯೋಜನೆ ಯಶಸ್ಸಿನ ಬೆನ್ನಲ್ಲೇ, ಮಹಿಳಾ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಾರಿಗೆ ಇಲಾಖೆ ಚರ್ಚೆ ನಡೆಸಿದೆ. ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ಬಸ್ಗಳನ್ನ ಮೀಸಲಿಡುವ ಬಗ್ಗೆ ಚಿಂತನೆ ನಡೆಸಿದೆ. ಹೌದು, 2023ರ ಜೂನ್ 11ರಂದು ಶಕ್ತಿ ಯೋಜನೆ ಜಾರಿಯಾದ ನಂತರ, ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಅಧಿಕಗೊಂಡಿದೆ.
ಈಗಾಗಲೇ ರಾಜ್ಯಾದ್ಯಂತ ಕಾಂಗ್ರೆಸ್‌ನ ಶಕ್ತಿ ಗ್ಯಾರಂಟಿ ಯೋಜನೆ (guarantee schemes) ಹೆಚ್ಚು ಫೇಮಸ್ ಆಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ನಿರೀಕ್ಷೆಗೂ ಮೀರಿ ಧನಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಎಂದೆಂದೂ ಕೇಳರಿಯದ ರೀತಿಯಲ್ಲಿ, ಮಹಿಳಾ ಪ್ರಯಾಣಿಕರಿಂದ ರಸ್ತೆ ಸಾರಿಗೆ ಉಪಯೋಗ ಆಗಿದೆ ಎನ್ನಬಹುದು.
ಹೌದು, ನಿರೀಕ್ಷೆಗೂ ಮೀರಿ ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಬಸ್ (free bus) ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಬಡವರ್ಗದ ಜನರು ನಿತ್ಯ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವುದರ ಮೂಲಕ ತಿಂಗಳಿಗೆ ಒಂದಿಷ್ಟು ಹಣ ಉಳಿತಾಯ ಮಾಡಲು ಕೂಡ ಸಾಧ್ಯವಾಗಿದೆ.
ಪ್ರತಿ ರಾಜ್ಯದಲ್ಲಿಯೂ ಕೂಡ ಶಕ್ತಿ ಯೋಜನೆ ಜಾರಿಗೆ ತರಬೇಕು, ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಲು ಸರ್ಕಾರ ಅವಕಾಶ ಕೊಡಬೇಕು ಎನ್ನುವಷ್ಟರ ಮಟ್ಟಿಗೆ ರಾಜ್ಯ ಸರ್ಕಾರದ ಈ ಯೋಜನೆ ಸಕಾರಾತ್ಮಕ ಪರಿಣಾಮ ಬೀರಿದೆ ಎನ್ನಬಹುದು.
ರಾಜ್ಯದಲ್ಲಿ ಉಚಿತ ಪಿಂಕ್ ಬಸ್ ಸೌಲಭ್ಯ
ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸುಮಾರು 259 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ದಾಖಲೆ ಸಿಕ್ಕಿದೆ. ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ಶಕ್ತಿ ಯೋಜನೆ ಆರಂಭವಾದ ನಂತರ ಬಸ್ಗಳಲ್ಲಿ ಪ್ರಯಾಣಿಕರ ನಡುವೆ ನೂಕು ನುಗ್ಗಲು ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಈಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಬಹುದು.
ಮಹಿಳೆಯರಿಗಾಗಿಯೇ ಪ್ರತ್ಯೇಕ ಬಸ್
ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಿದ ನಂತರ ಹಿಂದಿನ ಪ್ರಯಾಣಗಳಿಗೆ ಹೋಲಿಸಿದರೆ ಈ ಬಾರಿ ಮಹಿಳೆಯರು ಹಸುಗಳಲ್ಲಿ ಪ್ರಯಾಣ ಮಾಡುವ ಸಂಖ್ಯೆ ಜಾಸ್ತಿಯಾಗಿದೆ ಎಲ್ಲಾ ಬಸ್ಸುಗಳಲ್ಲಿಯೂ ಮಹಿಳೆಯರಿಗೆ ಇರುವ ಒಂದು ಎರಡು ಮೀಸಲಾಗಿರುವ ಸೀಟ್ನಲ್ಲಿ ಎಲ್ಲ ಮಹಿಳೆಯರು ಪ್ರಯಾಣಿಸಲು ಸಾಧ್ಯವಿಲ್ಲ ಹೀಗಾಗಿ ಪ್ರಯಾಣದ ವೇಳೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ.
ಇದನ್ನು ಗಮನಿಸಿರುವ ಸರ್ಕಾರ ಹಳೆಯ ಮಾದರಿಯಲ್ಲಿ ಅಂದರೆ ಈ ಹಿಂದೆ ಬಿ ಎಂ ಟಿ ಸಿ ಬಸ್ (BMTC) ಗಳನ್ನು ಪ್ರತ್ಯೇಕವಾಗಿ ಮಹಿಳೆಯರಿಗೆ ಮೀಸಲಿಡಲಾಗಿತ್ತು. ಅದೇ ಮಾದರಿಯಲ್ಲಿ ಪ್ರತಿದಿನ ಉಚಿತವಾಗಿ ಪ್ರಯಾಣಿಸುವ 60 ರಿಂದ 63 ಲಕ್ಷ ಮಹಿಳೆಯರಿಗಾಗಿ ಪ್ರತೀಕ ಪಿಂಕ್ ಬಸ್ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.
ಅದರಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಿದ ಮಹಿಳೆಯರ ಪ್ರಮಾಣ 48.39 ಕೋಟಿಯಷ್ಟಿದೆ. ಈ ಕಾರಣದಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬಸ್ ಪರಿಚಯಿಸುವ ಉದ್ದೇಶವಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಬಿಎಂಟಿಸಿ ಕೆಎಸ್ಆರ್ಟಿಸಿ (KSRTC) ಸೇರಿದಂತೆ ನಾಲ್ಕು ನಿಗಮಗಳ ಅಡಿಯಲ್ಲಿ ಪ್ರತ್ಯೇಕ ಬಸ್ ಸೇವೆ ಪಡೆದುಕೊಳ್ಳಲಿದ್ದಾರೆ. ಈ ಉಚಿತ ಬಸ್ ಗಳನ್ನು ಪ್ರತ್ಯೇಕವಾಗಿ ಮಹಿಳೆಯರಿಗೆ ಮೀಸಲಿಟ್ಟರೆ ಈಗ ರಸ್ತೆಯಲ್ಲಿ ಓಡಾಡುವ ರಾಜ್ಯ ಸಾರಿಗೆ ಬಸ್ಗಳಲ್ಲಿ ಟಿಕೆಟ್ ಕೊಟ್ಟು ಪ್ರಯಾಣ ಮಾಡುವವರಿಗೆ ಸ್ವಲ್ಪ ಅನುಕೂಲವಾಗಬಹುದು.
ರಾಜ್ಯ ಸರ್ಕಾರ ಈಗಾಗಲೇ ರಾಜ್ಯಕ್ಕೆ ಸಾವಿರ ಖರೀದಿ ಮಾಡಲು ನಿರ್ಧರಿಸಿದ್ದು ನೂರು ಬಸ್ಸುಗಳು ಆಗಲೇ ರೋಡಿಗೆ ಇಳಿದಿವೆ. ಹೀಗಾಗಿ ಪಿಂಕ್ ಪಾಸ್ ಮಹಿಳೆಯರಿಗಾಗಿ ಸರ್ಕಾರ ಮೀಸಲಿಟ್ಟಿದ್ದು, ಇದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲಿದೆ.
ಪಿಂಕ್ ಬಸ್
ಬಿಎಂಟಿಸಿ ಈ ವರ್ಷದಲ್ಲಿ 1 ಸಾವಿರಕ್ಕೂ ಹೆಚ್ಚಿನ ಬಸ್‌ಗಳನ್ನು ಖರೀದಿ ಮತ್ತು ಜಿಸಿಸಿ ಆಧಾರದಲ್ಲಿ ಪಡೆಯಲು ಮುಂದಾಗಿದೆ. ಅವುಗಳಲ್ಲಿ ಕೆಲವು ಬಸ್‌ಗಳನ್ನು ಪಿಂಕ್ ಬಸ್‌ಗಳನ್ನಾಗಿ ಮಾಡಿ ಅವುಗಳನ್ನು ಮಹಿಳಾ ಪ್ರಯಾಣಿಕರಿಗಾಗಿಯೇ ಮೀಸಲಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಇನ್ನೂ ಪ್ರಾಥಮಿಕ ಹಂತದಲ್ಲಿದೆ.
ಅಧಿಕಾರಿಗಳು ಸಭೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ ಒಪ್ಪಿಗೆ ಪಡೆಯಬೇಕಿದೆ ಎನ್ನುತ್ತಾರೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ. ಈಗಾಗಲೇ ದೇಶದಲ್ಲಿ ಪಿಂಕ್ ಬಸ್ ವ್ಯವಸ್ಥೆ ಹಲವು ನಗರಗಳಲ್ಲಿ ಜಾರಿಯಲ್ಲಿವೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.
ಹಿಂದೆಯೂ ಪ್ರಯತ್ನ: 2006-07ರಲ್ಲಿ ಮಹಿಳೆಯರಿಗಾಗಿಯೇ ಬಿಎಂಟಿಸಿಯಿಂದ ಗುಲಾಬಿ ಬಸ್ ಆರಂಭಿಸಲಾಗಿತ್ತು. ಆದರೆ, ಮಹಿಳೆಯರಿಂದ ಉತ್ತಮ ಸ್ಪಂದನೆ ದೊರೆಯದೇ ಇದ್ದಿದ್ದರಿಂದ ಯೋಜನೆ ಸ್ಥಗಿತಗೊಂಡಿತ್ತು. 2017ರಲ್ಲಿ ಮತ್ತೊಮ್ಮೆ ಗುಲಾಬಿ ಬಸ್ ಚರ್ಚೆ ಮುನ್ನೆಲೆಗೆ ಬಂದಿತ್ತು. ಅದು ಮುಂದುವರಿದು 2019ರಲ್ಲಿ ‘ನಿರ್ಭಯಾ’ ಯೋಜನೆಯಡಿ 47 ಗುಲಾಬಿ ಬಸ್ ಖರೀದಿಸಲು ನಿರ್ಧರಿಸಲಾಗಿತ್ತು. ಕೋವಿಡ್ ಮತ್ತಿತರ ಕಾರಣದಿಂದ ಖರೀದಿ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಮತ್ತೆ ಗುಲಾಬಿ ಬಸ್ ಚರ್ಚೆ ಮುನ್ನೆಲೆಗೆ ಬಂದಿದೆ.
ರಜೆ ಸಮಯದಲ್ಲಿ ಹೆಚ್ಚುವರಿ ಬಸ್
ಶಕ್ತಿ ಯೋಜನೆ ಜಾರಿಯಾದ ಮೇಲೆ ಧಾರ್ಮಿಕ ಕೇಂದ್ರಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ. ಇವರ ಜೊತೆಯಲ್ಲಿ ಪುರುಷರೂ ಪ್ರಯಾಣಿಸುತ್ತಿದ್ದು, ಬಸ್ ಗಳಿಗೆ ಬೇಡಿಕೆ ಇದೆ.
ಶಕ್ತಿ ಯೋಜನೆ ಜಾರಿಯಾದ ಮೇಲೆ ಧಾರ್ಮಿಕ ಕೇಂದ್ರಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮಹಿಳೆಯರ ಪ್ರಮಾಣ ಹೆಚ್ಚಳವಾಗಿದೆ. ಈ ಸಮಯದಲ್ಲಿ ಬಸ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಬೇಡಿಕೆಗೆ ಅನುಗುಣವಾಗಿ ನಾಲ್ಕು ನಿಗಮಗಳಿಂದ ಹೆಚ್ಚುವರಿ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.