PM Kaushal Vikas Yojan
ದೇಶದಲ್ಲಿ ನಿರುದ್ಯೋಗ(Unemployment)ದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ, ಕೇಂದ್ರ ಸರ್ಕಾರ(Central Govt)ವು ಯುವಕರಿಗೆ(youths) ಸ್ವಂತ ಉದ್ಯಮ(Own business) ಶುರು ಮಾಡಲು ಸಪೋರ್ಟ್ ಮಾಡುತ್ತಿದೆ. ಹೌದು, ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿರುವ ಸಮಯದಲ್ಲಿ, ಕೇಂದ್ರ ಸರ್ಕಾರವು ಯುವಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಕೇಂದ್ರ ಸರ್ಕಾರವು ಪಿಎಂ ಕೌಶಲ್ ವಿಕಾಸ್ ಯೋಜನೆ(PM Kaushal Vikas Yojana) ಎಂಬ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯು 10 ನೇ ತರಗತಿ ಅರ್ಹತೆಯೊಂದಿಗೆ 8,000 ರೂ.ಗಳ ವೇತನವನ್ನು ಸುಲಭವಾಗಿ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.
ಈ ಯೋಜನೆಯ ಮೂಲಕ ಯುವಕರು ತಮ್ಮದೇ ಆದ ಸ್ವಂತ ಉದ್ಯಮ ಅಥವಾ ಸ್ವಂತ ಉದ್ಯೋಗ ಶುರು ಮಾಡಲು ಉಚಿತವಾಗಿ ತರಬೇತಿ ಕೊಡುವುದರ ಜೊತೆಗೆ 8000 ಕೂಡ ಕೊಡಲಾಗುತ್ತದೆ ಈ ಯೋಜನೆಯ ಬಗ್ಗೆ ಇಂದು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.!
ಈ ಸುದ್ದಿ ಓದಿ:- Work From Home: SSLC ಪಾಸ್ ಆದವರಿಗೆ ಜಿಯೋ ಸಂಸ್ಥೆಯಿಂದ ವರ್ಕ್ ಫ್ರಮ್ ಹೋಂ ಕೆಲಸ.! ವೇತನ 30000/-
ಪಿಎಂ ಕೌಶಲ್ ವಿಕಾಸ್ ಯೋಜನೆಯ ಮೂಲಕ, ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುವುದು ಮತ್ತು ಅವರ ಕೌಶಲ್ಯಗಳನ್ನು ಹೆಚ್ಚಿಸಲಾಗುವುದು. ಈ ಯೋಜನೆಯು ಯುವಕರಿಗೆ ಉದ್ಯೋಗವನ್ನು ಸುಲಭಗೊಳಿಸುವಲ್ಲಿ ಬಹಳ ದೂರ ಹೋಗುತ್ತದೆ ಎಂದು ಹೇಳಬಹುದು.
ನಮ್ಮ ದೇಶದ ನಾಗರಿಕರು ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಎಲ್ಲಾ 40 ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತಿದ್ದರೂ, ಮನೆಯಲ್ಲಿಯೇ ಇದ್ದು ಆನ್ಲೈನ್ನಲ್ಲಿ ತರಬೇತಿ ಪಡೆಯುವಾಗಲೂ ತರಬೇತಿಯನ್ನು ಸುಲಭವಾಗಿ ಪೂರ್ಣಗೊಳಿಸಲು ಅವಕಾಶವಿದೆ ಎಂದು ಹೇಳಬಹುದು.
ಪಿಎಂ ಕೌಶಲ್ ವಿಕಾಸ್ ಯೋಜನೆ ಎಂದರೇನು?
ದೇಶದ ಯುವ ಪೀಳಿಗೆಗಾಗಿ ಜಾರಿಗೆ ತಂದಿರುವ ಈ ಯೋಜನೆಯ ಸೌಲಭ್ಯವನ್ನು ಹುಡುಗರು ಮತ್ತು ಹುಡುಗಿಯರು ಇಬ್ಬರು ಕೂಡ ಪಡೆದುಕೊಳ್ಳಬಹುದು. ಚೆನ್ನಾಗಿ ಓದಿರುವವರಿಗೆ ಆದ್ಯತೆ ಕೊಡಲಾಗುತ್ತಿದೆ ದೇಶದ ಎಲ್ಲಾ ರಾಜ್ಯದವರು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿಭಿನ್ನ ರೀತಿಯ ತರಬೇತಿಗೆ ಬೇರೆ ಬೇರೆ ಕಾಲದ ಮಿತಿಯನ್ನು ಫಿಕ್ಸ್ ಮಾಡಲಾಗಿದ್ದು, ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅರಿಸಿಕೊಂಡು, ಕಳಿತುಕೊಳ್ಳಬಹುದು. ಈ ಯೋಜನೆಯ ಮೂಲಕ ಕೆಲಸಕ್ಕಾಗಿ ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿಯಲ್ಲಿ ತರಬೇತಿಗಳನ್ನು ಅಟೆಂಡ್ ಮಾಡಬಹುದು. ಯುವಕ ಯುವತಿಯರಿಗೆ ಇದೊಂದು ಒಳ್ಳೆಯ ಅವಕಾಶ ಆಗಿದೆ.
ಈ ಸುದ್ದಿ ಓದಿ:-7th pay commission: 7ನೇ ವೇತನ ಆಯೋಗ ಜಾರಿಯಾದರೆ ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ ಗೊತ್ತ.? ಇಲ್ಲಿದೆ ನೋಡಿ ಪಟ್ಟಿ.!
ಸ್ಕಿಲ್ ಇಂಡಿಯಾ ಡಿಜಿಟಲ್ನಲ್ಲಿ ಪ್ರಾಯೋಗಿಕ ಕೋರ್ಸ್ ಮಾಡಿದ ಯುವಕರು ಮತ್ತು ಮಹಿಳೆಯರು ತಿಂಗಳಿಗೆ 8000 ರೂ.ಗಳನ್ನು ಗಳಿಸುವ ಅವಕಾಶವನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಈ ಯೋಜನೆಯಡಿ ಕೋರ್ಸ್ ಪೂರ್ಣಗೊಳಿಸಿದವರು ಕೇಂದ್ರ ಸರ್ಕಾರದಿಂದ ಪ್ರಮಾಣಪತ್ರವನ್ನು ಸಹ ಪಡೆಯಬಹುದು. (https://www.pmkvyofficial.org/home-page) ಯೋಜನೆಯ ಸಂಪೂರ್ಣ ವಿವರಗಳನ್ನು ವೆಬ್ಸೈಟ್ ಮೂಲಕ ಪ್ರವೇಶಿಸಬಹುದು.
ಅಗತ್ಯ ದಾಖಲೆಗಳು
– ವಿದ್ಯಾರ್ಹತೆಗೆ ಸರ್ಟಿಫಿಕೇಟ್
– ಆಧಾರ್ ಕಾರ್ಡ್
– ಪ್ಯಾನ್ ಕಾರ್ಡ್
– ಬ್ಯಾಂಕ್ ಪಾಸ್ ಬುಕ್
– ಅಡ್ರೆಸ್ ಪ್ರೂಫ್
– ಕ್ಯಾಸ್ಟ್ ಸರ್ಟಿಫಿಕೇಟ್
– ಇನ್ಕಮ್ ಸರ್ಟಿಫಿಕೇಟ್
– ಏಜ್ ಪ್ರೂಫ್
– ಫೋನ್ ನಂಬರ್
– Employment ID
ಮೂಲಭೂತ ಮಾನದಂಡ
– ಚೆನ್ನಾಗಿ ಓದಿರುವ ವಿದ್ಯಾವಂತರಿಗೆ ಅವರ ಕೌಶಲ್ಯವನ್ನು ಹೆಚ್ಚಿಸಿಕೊಂಡು, ಅವರ ಕೆಲಸಕ್ಕೆ ಸಹಾಯ ಮಾಡುವ ಯೋಜನೆ ಇದಾಗಿದ್ದು, ಅಭ್ಯರ್ಥಿಗಳು ಶಿಕ್ಷಣ ಪಡೆದಿರುವುದು ಮುಖ್ಯ ಆಗಿರುತ್ತದೆ.
– ಭಾರತದ ಎಲ್ಲಾ ರಾಜ್ಯದವರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಬಹುದು.
– ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳು ಕೂಡ ಅರ್ಜಿ ಸಲ್ಲಿಸುವ ವ್ಯಕ್ತಿಯ ಬಳಿ ಇರಲೇಬೇಕು.
– ಅರ್ಜಿ ಸಲ್ಲಿಸುವ ಹುಡುಗ ಮತ್ತು ಹುಡುಗಿಯರ ವಯಸ್ಸು 18 ವರ್ಷ ತುಂಬಿರಬೇಕು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
– ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಹೋಮ್ ಪೇಜ್ ನಲ್ಲಿ, ಪಿಎಂ ಕೌಶಲ್ ವಿಕಾಸ್ ಯೋಜನೆ ಎನ್ನುವ ಆಪ್‌ನ ಮೇಲೆ ಕ್ಲಿಕ್ ಮಾಡಬೇಕು.
– ಈಗ ಹೊಸ ಪೇಜ್ ಓಪನ್ ಆಗುತ್ತದೆ, ಇದರಲ್ಲಿ ಮೊದಲಿಗೆ ನೀವು ಯೋಜನೆಗೆ ರಿಜಿಸ್ಟರ್ ಮಾಡಬೇಕು.
ಈ ಯೋಜನೆಯಲ್ಲಿ ಹೊಸದಾಗಿ ನೀವು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
– ಮೊದಲು ನಿಮ್ಮ ಡೀಟೇಲ್ಸ್ ಹಾಕಿ, ಪೋರ್ಟಲ್ ನಲ್ಲಿ ಕೌಶಲ್ ವಿಕಾಸ್ ಯೋಜನೆಗೆ ರಿಜಿಸ್ಟರ್ ಮಾಡಿ, ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಪಡೆಯಿರಿ.
ಈ ಸುದ್ದಿ ಓದಿ:-One Nation One Rate: ಆಭರಣಪ್ರಿಯರಿಗೆ ಗುಡ್ ನ್ಯೂಸ್ ದೇಶಾದ್ಯಂತ ಚಿನ್ನಕ್ಕೆ ಒಂದೇ ದರ ನಿಗದಿ ಹೊಸ ನಿಯಮ ಜಾರಿ.!
– ಬಳಿಕ ಅಪ್ಲಿಕೇಶನ್ ಫಾರ್ಮ್ ಬರುತ್ತದೆ, ಅದನ್ನು ಫಿಲ್ ಮಾಡಿ. ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ, ಬೇಕಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
– ಇದೆಲ್ಲಾ ಆದ ನಂತರ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ. ಇಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ ಆಗುತ್ತದೆ.