PM Kisan: ಪಿ.ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯೇ ನೋಡಿ

PM Kisan

ಕೇಂದ್ರ ಸರ್ಕಾರದ(Central Govt) ಮಹತ್ವಾಕಾಂಕ್ಷೆಯ ರೈತರಿಗೆ(farmers) ಆರ್ಥಿಕ ಸಹಾಯಧನ (Financial assistance) ಒದಗಿಸುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana – PMKSY) ಅಡಿಯಲ್ಲಿ ಇಂದು 18ನೇ ಕಂತಿನ ಹಣವನ್ನು(18th installment money) ನೇರವಾಗಿ ರೈತರ ಬ್ಯಾಂಕ್ ಖಾತೆ(Farmer’s Bank Account) ವರ್ಗಾಯಿಸಲಾಯಿತು.

WhatsApp Group Join Now
Telegram Group Join Now

ಇದನ್ನು ಸ್ವಾಗತಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು(Union Minister Prahlad Joshi), ಸಹಾಯಧನ ಬಗ್ಗೆ ವಿವರಿಸಿದ್ದಾರೆ. ಹೌದು, ಪ್ರಧಾನಮಂತ್ರಿ ಕಿಸಾನ್ ಯೋಜನೆ 18ನೇ ಕಂತನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಹಣ ಶನಿವಾರ ರೈತರ ಖಾತೆಗೆ ಬಂದಿದೆ. 9.4 ಕೋಟಿಗೂ ಹೆಚ್ಚು ರೈತರು ನೇರ ವರ್ಗಾವಣೆ (ಡಿಬಿಟಿ) ಮೂಲಕ 20 ಸಾವಿರ ಕೋಟಿ ರೂ.ಗೂ ಹೆಚ್ಚು ಲಾಭ ಪಡೆದಿದ್ದಾರೆ.

ಮಹಾರಾಷ್ಟ್ರದ ವಾಶಿಮ್‌ನಲ್ಲಿ ಪ್ರಧಾನಿ ಮೋದಿ ಅವರು ಯೋಜನೆಯ 18 ನೇ ಕಂತನ್ನು ಬಿಡುಗಡೆ ಮಾಡಿದರು. ಭೂಮಿ ಹೊಂದಿರುವ ರೈತರಿಗೆ ಪ್ರತಿ ವರ್ಷ ಮೂರು ಸಮಾನ ಕಂತುಗಳಲ್ಲಿ ಆರು ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಯೋಜನೆಯ ಕಂತು ಬಿಡುಗಡೆ ಆದ ಬಳಿಕ ಶನಿವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರ ಸಂಜೀವಿನಿ ಆಗಿದೆ ಎಂದು ಬಣ್ಣಿಸಿದ್ದಾರೆ.

9.4 ಕೋಟಿ ರೈತರಿಗೆ 20 ಸಾವಿರ ಕೋಟಿ ವರ್ಗಾವಣೆ

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 18 ನೇ ಕಂತಿನಡಿ 20,000 ಕೋಟಿ ಹಣವನ್ನು ನೇರ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇಂದು ಈ ಕಂತನ್ನು ಅರ್ಹ ಒಟ್ಟು 9.4 ಕೋಟಿ ಫಲಾನುಭವಿ ರೈತರು ಪಡೆದುಕೊಂಡಿದ್ದಾರೆ. ಇದರಲ್ಲಿ ಕರ್ನಾಟಕದ 47.12 ಲಕ್ಷ ರೈತರು 942 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಸಚಿವರು ಲೆಕ್ಕ ಕೊಟ್ಟಿದ್ದಾರೆ.

ಯೋಜನೆಯ ಉದ್ದೇಶವೇನು?

ಭೂಮಿ ಹೊಂದಿರುವ ರೈತರಿಗೆ ಪ್ರತಿ ವರ್ಷ ಮೂರು ಸಮಾನ ಕಂತುಗಳಲ್ಲಿ ಆರು ಸಾವಿರ ರೂ. ಗಳನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಅರ್ಹ ರೈತರ ಖಾತೆಗಳಿಗೆ ಈವರೆಗೆ ಒಟ್ಟು 3.45 ಲಕ್ಷ ಕೋಟಿ ರೂ. ಗಳನ್ನು ಜಮೆ ಮಾಡಲಾಗಿದೆ. ಈ ಯೋಜನೆಯ ಉದ್ದೇಶವು ದೇಶದ ಎಲ್ಲಾ ಭೂಹಿಡುವಳಿ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ನೀಡುವ ಮೂಲಕ ಅವರ ಆದಾಯವನ್ನು ಹೆಚ್ಚಿಸುವುದು ಮತ್ತು ಕೃಷಿ ಕ್ಷೇತ್ರವನ್ನು ಬಲಪಡಿಸುವುದೇ ಆಗಿದೆ.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸುವುದು ಹೇಗೆ?

– ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಸೈಟ್‌ಗೆ ಹೋಗಿ (https://pmkisan.gov.in/).
– ಇಲ್ಲಿಗೆ ಹೋಗಿ ಮತ್ತು ರೈತ ಮೂಲೆಯ ಆಯ್ಕೆಯನ್ನು ಆರಿಸಿ.
– ಹೊಸ ಪುಟ ತೆರೆಯುತ್ತದೆ. ಇದರಲ್ಲಿ ಫಲಾನುಭವಿಗಳ ಪಟ್ಟಿಯ ಮೇಲೆ ಕ್ಲಿಕ್ ಮಾಡಿ.
– ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರನ್ನು ಆಯ್ಕೆಮಾಡಿ.
– ಇದರ ನಂತರ ಪಡೆಯಿರಿ ವರದಿ ಕ್ಲಿಕ್ ಮಾಡಿ.

– ಇದರ ನಂತರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ತೆರೆಯಲಾಗುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ನೋಡಬೇಕು. ಹೆಸರಿದ್ದರೆ ಯೋಜನೆಯ ಲಾಭ ಸಿಗುತ್ತದೆ. ಹೆಸರು ಇಲ್ಲದಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಕಂತುಗಳನ್ನು ಸ್ವೀಕರಿಸಲು ನಿಮ್ಮ eKYC ಅನ್ನು ಪೂರ್ಣಗೊಳಿಸುವುದು ಹೇಗೆ?

PM-KISAN ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಲು, ರೈತರು ತಮ್ಮ eKYC ಅನ್ನು ಪೂರ್ಣಗೊಳಿಸಬೇಕಿದೆ. ಇದರಲ್ಲಿ ನಿಮಗೆ ಮೂರು ಆಯ್ಕೆಗಳು ಇವೆ. ಒಂದು ಓಟಿಪಿ ಆಧಾರಿತ eKYC. PM-KISAN ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಇದನ್ನು ಮಾಡಬಹುದಾಗಿದೆ.

ಬಯೋಮೆಟ್ರಿಕ್ eKYC ಇದನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC)ಮತ್ತು ರಾಜ್ಯ ಸೇವಾ ಕೇಂದ್ರಗಳಲ್ಲಿ (SSK) ಮಾಡಿಸಬಹುದಾಗಿದೆ. ಮುಖದ ದೃಢೀಕರಣ ಆಧಾರಿತ eKYCಯನ್ನು ನೀವು ಮೊಬೈಲ್ ಆಪ್‌ ಮೂಲಕ ಪೂರ್ಣ ಗೊಳಿಸಬೇಕಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment