PM Kissan: PM ಕಿಸಾನ್ 18ನೇ ಕಂತಿನ ಹಣ ಪಡೆಯಲು ರೈತರು ಈ ಕೆಲಸ ಮಾಡುವುದು ಕಡ್ಡಾಯ.!

PM Kissan

ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ನಮ್ಮ ದೇಶದ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು.

ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೂ (5 ಹೆಕ್ಟರ್ ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವವರು) ಕೂಡ ಸಹಾಯಧನ ನೀಡುವಂತಹ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PMKSY) ಎನ್ನುವ ವಿಶೇಷ ಯೋಜನೆಯನ್ನು 2009 ರ ಫೆಬ್ರವರಿಯಲ್ಲಿ ಜಾರಿಗೊಳಿಸಿದರು.

WhatsApp Group Join Now
Telegram Group Join Now

ಈ ಯೋಜನೆ ಮೂಲಕ ದೇಶದ 12 ಕೋಟಿ ರೈತರು ವಾರ್ಷಿಕವಾಗಿ ರೂ.6,000 ಸಹಾಯಧನವನ್ನು DBT ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಡೆಯುತ್ತಿದ್ದಾರೆ. ಪ್ರತೀ ನಾಲ್ಕು ತಿಂಗಳ ಅಂತರದಲ್ಲಿ ತಲಾ ರೂ.2,000 ಹಣ 3 ಕಂತುಗಳಲ್ಲಿ ರೈತರ ಖಾತೆಗೆ ಜಮೆಯಾಗುತ್ತಿದೆ.

ಈ ಸುದ್ದಿ ಓದಿ:- PDO ಹುದ್ದೆಗಳಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ

ಇದು ರೈತನಿಗೆ ಆ ಸಂದರ್ಭದಲ್ಲಿ ಎದುರಾಗುವ ರಾಸಾಯನಿಕ ಗೊಬ್ಬರ, ಕ್ರಿಮಿ -ಕೀಟನಾಶಕ ಖರೀದಿ, ಕೂಲಿ ಕಾರ್ಮಿಕರ ಖರ್ಚು ಇತ್ಯಾದಿಗಳನ್ನು ಪೂರೈಸಲು ಬೇಕಾದ ಹಣಕಾಸಿನ ಅಗತ್ಯತೆಯನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ. ಅಂತೆಯೇ ಈವರೆಗೆ ಯಶಸ್ವಿಯಾಗಿ ಯೋಜನೆಯ 17 ಕಂತುಗಳ ಹಣ ಬಿಡುಗಡೆಯಾಗಿ 18 ಕಂತಿನ (18th installment) ಬಿಡುಗಡೆ ಸಮಯವಾಗಿದೆ.

ಹೀಗಾಗಿ ಈ ಅಂಕಣದಲ್ಲಿ 18ನೇ ಕಂತಿನ ಹಣ ಬಿಡುಗಡೆ ದಿನಾಂಕದ ಜೊತೆಗೆ ಈ ಹಣ ಪಡೆಯಲು ಈ ಬಾರಿ ರೈತರಿಗೆ ವಿಧಿಸಲಾಗಿರುವ ಕೆಲವು ಕಂಡಿಷನ್ ಗಳ ಬಗ್ಗೆ ಕೂಡ ತಿಳಿಸುತ್ತಿದ್ದೇನೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರೊಡನೆ ಶೇರ್ ಮಾಡಿ.

2024-25ನೇ ಸಾಲಿನ ಮೊದಲನೇ ಕಂತು ಮತ್ತು ಈ ಯೋಜನೆಯ 17ನೇ ಕಂತು 18 ಜೂನ್, 2024 ರಂದು ಬಿಡುಗಡೆಯಾಗಿತ್ತು. ಈಗ 18ನೇ ಕಂತು ನವೆಂಬರ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಆಗುಲಿದೆ ಎನ್ನುವ ಮಾಹಿತಿಯು ಬಲವಾದ ಮೂಲಗಳಿಂದ ದೊರೆತಿದೆ.

ಈ ಸುದ್ದಿ ಓದಿ:- Labour Card: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 60,000 ಸಹಾಯಧನ.!

ಈ ಜೊತೆಗೆ ಗಮನಿಸಲೇಬೇಕಾದ ಮತ್ತೊಂದು ಅಂಶವೇನೆಂದರೆ ಪ್ರತಿ ಬಾರಿ ಕೂಡ ಲಕ್ಷಾಂತರ ರೈತರು ಈ ಹಣದಿಂದ ವಂಚಿತರಾಗುತ್ತಿದ್ದಾರೆ, ಹಾಗೂ ಅನರ್ಹ ರೈತರನ್ನು ಪತ್ತೆ ಹಚ್ಚಿ ಯೋಜನೆಯ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ.

ನೀವು 18ನೇ ಕಂತಿನ ಹಣವನ್ನು ಪಡೆಯಬೇಕೆಂದರೆ ಕೇಂದ್ರ ಸರ್ಕಾರದ ವಿಧಿಸಿರುವ ಈ ನಿಯಮಗಳನ್ನು ಪಾಲಿಸಿದ್ದೀರಿಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಿಮಗೂ ಕೂಡ ಮುಂದಿನ ಕಲ್ಪಿನ ಹಣ ತಲುಪದೇ ಹೋಗಬಹುದು ಅಥವಾ ತಡೆಹಿಡಿಯಲ್ಪಡಬಹುದು.

1. ಯೋಚನೆಯ ಹಣ ಪಡೆಯುತ್ತಿರುವ ರೈತರು ಇ-ಕೆವೈಸಿ ಅಪ್ಡೇಟ್ ಮಾಡಿಸಿರಬೇಕು
* PM Kisan app
* https://pmkisan.gov.in website
* ದಾಖಲೆಗಳೊಂದಿಗೆ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಕೂಡ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು

2. ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮಾಡಿಸಿದ್ದರೆ ಮಾತ್ರ DBT ಮೂಲಕ ಹಣ ತಲುಪುವುದು
3.ರೈತರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ತಮ್ಮ ಎಲ್ಲಾ ಜಮೀನಿನ RTC ಗಳನ್ನು ಲಿಂಕ್ ಮಾಡಿಸಿ, FRUITS ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆಯಬೇಕು ಆಗ ಮಾತ್ರ ರೈತರಿಗೆ ಸಿಗುವ ಬರ ಪರಿಹಾರ, ಬೆಳೆ ಪರಿಹಾರ, ಸಹಾಯಧನ, ಇತ್ಯಾದಿಗಳನ್ನು ಯೋಜನೆಗಳ ಅನುಕೂಲತೆ ಪಡೆಯಲು ಸಾಧ್ಯ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment