PM Kisan
ರೈತರು (Farmers) ಈ ದೇಶದ ಬೆನ್ನೆಲುಬು ಹೀಗಾಗಿ ರೈತರಿಗಾಗಿ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುತ್ತವೆ. ರೈತರಿಗೆ ಸರ್ಕಾರದ ಕಡೆಯಿಂದ ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯ, ಸಬ್ಸಿಡಿ ಬೆಲೆಯಲ್ಲಿ ಯಂತ್ರೋಪಕರಣಗಳು, ಕೃಷಿ ಪರಿಕರ ಮತ್ತು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ನೆರವು ಹಾಗೂ ಕೃಷಿ ಕ್ಷೇತ್ರಕ್ಕೆ ಹೊಂದಿಕೊಂಡಂತ ಉಪ ಕಸುಬುಗಾಳಿಗಾಗಿ ಕೂಡ ನೆರವು ಇತ್ಯಾದಿ ಅನೇಕ ಸೌಲಭ್ಯಗಳು ಸಿಗುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ವಂಚನೆ ಕಡಿಮೆಯಾಗಿ ಫಲಾನುಭವಿಗಳಿಗೆ ನೇರವಾಗಿ ಅನುದಾನ ತಲುಪಿಸುವಂತಹ ಅನೇಕ ಅಗತ್ಯ ಕ್ರಮಗಳನ್ನು ಕೂಡ ಕೈಕೊಳ್ಳುತ್ತಿದೆ. ಈ ರೀತಿಯಾಗಿ ಸದ್ಯಕ್ಕೆ ಇಡೀ ದೇಶದ ರೈತರು ಕಾಯುತ್ತಿರುವ ವಿಶೇಷ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PMKSY) ಯೋಜನೆಯ 18ನೇ ಕಂತಿನ ಹಣದ ಬಿಡುಗಡೆ ಕುರಿತ ಅಪ್ಡೇಟ್ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಕೊಡುತ್ತಿದ್ದೇವೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮೊದಲ ಬಾರಿಗೆ ಪ್ರಧಾನಿಗಳಾಗಿದ್ದಾಗ ರೈತನಿಗೂ ಕೂಡ ಸಹಾಯಧನವನ್ನು ನೀಡುವಂತಹ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದರು. ಐದು ಹೆಕ್ಟೇರ್ ಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವಂತಹ ರೈತನ ಖಾತೆಗೆ ನೇರವಾಗಿ DBT ಮೂಲಕ ಈ ಯೋಜನೆಯಡಿ ವಾರ್ಷಿಕವಾಗಿ ರೂ.6,000ಗಳನ್ನು ಪ್ರತಿ ನಾಲ್ಕು ತಿಂಗಳ ಅಂತರದಲ್ಲಿ ಮೂರು ಕಂತುಗಳಂತೆ ಪ್ರತಿ ಬಾರಿ ತಲಾ ರೂ.2,000 ಜಮೆ ಮಾಡಲಾಗುತ್ತಿದೆ.
ಈ ಸುದ್ದಿ ಓದಿ:- Gruhalakshmi: ಈ ಜಿಲ್ಲೆ ಮಹಿಳೆಯರಿಗೆ ಜುಲೈ ತಿಂಗಳ ಗೃಹಲಕ್ಷ್ಮಿ ಹಣ 2000 ಜಮೆ ಆಗಿದೆ.!
ಇದುವರೆಗೂ ಯಶಸ್ವಿಯಾಗಿ 17 ಕಂತಿನ ಹಣವು ಅರ್ಹ ರೈತರಿಗೆ ತಲುಪಿದೆ. ಅತಿ ದೊಡ್ಡ ಬಜೆಟ್ ನ ಯೋಜನೆ ಇದಾಗಿದ್ದು ಈ ಯೋಜನೆಯಲ್ಲೂ ಕೂಡ ನೈಜಾಂಶ ಮರೆ ಮಾಚಿ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನೇಕರು ಸರ್ಕಾರದ ಹಣ ವಂಚಿಸುತ್ತಿದ್ದಾರೆ ಎನ್ನುವ ಮಾಹಿತಿ ಆರ್ಥಿಕ ಇಲಾಖೆಗೆ ತಿಳಿದು ಬಂದಿದೆ. ಹೀಗಾಗಿ 18ನೇ ಕಂತಿನ ಹಣ ಪಡೆಯಲು ಕೆಲವು ಕಂಡಿಷನ್ ಹೇರಲಾಗಿದೆ.
ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಕಡೆಯಿಂದ 18ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಆದರೆ ಈ ಹಣವನ್ನು ಪಡೆಯುವುದಕ್ಕೆ ರೈತರು ಕಡ್ಡಾಯವಾಗಿ ತಮ್ಮ ಇ-ಕೆವೈಸಿ (e-KYC) ಪೂರ್ತಿ ಗೊಳಿಸಿರಬೇಕು. ಪ್ರತಿ ಬಾರಿಯೂ ಕೂಡ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿ, ಅನರ್ಹರನ್ನು ಯೋಜನೆಯಿಂದ ಕೈ ಬಿಡುವ ನಿರ್ಧಾರಕ್ಕೆ ಬರಲಾಗಿದೆ ಮತ್ತು ಅದಕ್ಕಾಗಿ ಇ-ಕೆವೈಸಿ ಕಡ್ಡಾಯ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ನೀವು ಈ ಯೋಜನೆಯ ಫಲಾನುಭವಿಗಳಾಗಿದ್ದು ಇನ್ನೂ ಸಹ ಈ ಯೋಜನೆಯ ಪೂರ್ತಿಗೊಳಿಸದೇ ಇದ್ದಲ್ಲಿ ಕೂಡಲೇ ಈ ಕೆಲಸವನ್ನು ಪೂರ್ತಿಗೊಳಿಸಿ.
ವಿಧಾನ:-
* ಮೊದಲಿಗೆ https://pmkisan.gov.in ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
* ಆಧಾರ್ ಸಂಖ್ಯೆ ಕೇಳಲಾಗುತ್ತದೆ, ರೈತನ ಆಧಾರ್ ಸಂಖ್ಯೆ ನಮೂದಿಸಿ ನೀಡಿರುವ ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಿ, ಸರ್ಚ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ ಆಗ ರೈತನ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕೇಳಲಾಗುತ್ತದೆ ನೀವು ಮೊಬೈಲ್ ಸಂಖ್ಯೆ ಹಾಕಿದರೆ OTP ಜನರೇಟ್ ಆಗುತ್ತದೆ. OTP ಎಂಟ್ರಿ ಮಾಡಿ ಸಬ್ಮಿಟ್ ಮಾಡುವ ಮೂಲಕ ಇ-ಕೆವೈಸಿ ಪೂರ್ತಿಗೊಳಿಸಿ.
ಈ ಸುದ್ದಿ ಓದಿ:- LIC Recruitment: LIC ಯಿಂದ 7000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ:- 40,000
* ಹತ್ತಿರದಯಾವುದೇ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಇ-ಕೆವೈಸಿ ಪೂರ್ತಿಗೊಳಿಸಬಹುದು.
* ಇದರ ಜೊತೆಗೆ ರೈತನು ತನ್ನ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ & NPCI ಮ್ಯಾಪಿಂಗ್ ಮಾಡಿಸುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದಲ್ಲಿ DBT ಮೂಲಕ ಹಣ ತಲುಪಿಸಲು ಸಮಸ್ಯೆಯಾಗುತ್ತದೆ.
* ಈಗಾಗಲೆ ರಾಜ್ಯ ಸರ್ಕಾರವು ಕೂಡ ರೈತನು ತನ್ನ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಮಾಡಬೇಕು, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆಯುವುದು ಕಡ್ಡಾಯ ಎಂದು ತಿಳಿಸಿದೆ. ಇಲ್ಲವಾದಲ್ಲಿ ರೈತನಿಗೆ ಸರ್ಕಾರದಿಂದ ನೀಡಲಾಗುವ ಬೆಳೆ ಪರಿಹಾರ, ಬರ ಪರಿಹಾರ ಮತ್ತು ಕೃಷಿ ಚಟುವಟಿಕೆಯ ಇನ್ನಿತರ ಯೋಜನೆ ಅನುದಾನ ತಲುಪುವುದಿಲ್ಲ ಎನ್ನುವ ಸೂಚನೆ ನೀಡಿದೆ. ಹಾಗಾಗಿ ನಿರ್ಲಕ್ಷಿಸಿದೆ ಇದನ್ನು ಕೂಡ ಪೂರ್ತಿಗೊಳಿಸಿ.