PM Ujjwal Yojana
ಕೇಂದ್ರ ಸರ್ಕಾರ(Central Govt)ದಿಂದ ಮಹಿಳೆಯರಿಗೆ (women) ಉಚಿತ(Free)ವಾಗಿ ಎಲ್ ಪಿ ಜಿ ಸಿಲಿಂಡರ್(LPG cylinder) ನೀಡಲಾಗುತ್ತಿದೆ. ಇದಕ್ಕಾಗಿ ಪಿಎಂ ಉಜ್ವಲ್ ಯೋಜನೆ(PM Ujjwal Yojana)ಯನ್ನು ಜಾರಿಗೊಳಿಸಲಾಗಿದೆ. ಹಾಗಾದ್ರೆ, ಈ ಯೋಜನೆಯ ಲಾಭ ಪಡೆಯಲು ಅರ್ಹತಾ ಮಾನದಂಡಗಳು(Eligibility Criteria) ಏನು? ದಾಖಲೆಗಳು (documents) ಏನೇನು ಬೇಕು ಎನ್ನುವ ಬಗ್ಗೆ ಈ ಲೇಖನದಲ್ಲಿ ನೋಡೋಣ ಬನ್ನಿ..
ಪಿಎಂ ಉಜ್ವಲ್ ಯೋಜನಾ 2.0 (PM Ujjwala Yojana 2.0) ಅಡಿ, ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಮಹಿಳೆಯರು ನೋಂದಾಯಿಸಿಕೊಳ್ಳಬೇಕಿದೆ. ಹೀಗೆ ನೋಂದಾಯಿಸಿಕೊಂಡಂತ ಅರ್ಹ ಮಹಿಳೆಯರಿಗೆ ಉಚಿತ ಸಿಲಿಂಡರ್ ಮತ್ತು ಒಲೆ(Free cylinder and) ನೀಡಲಾಗುತ್ತದೆ.
ಏನಿದು ಉಜ್ವಲ ಯೋಜನೆ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) 2016 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್ (ಅಡುಗೆ ಅನಿಲ) ಸಂಪರ್ಕ ಒದಗಿಸುವ ಗುರಿ ಹೊಂದಿದೆ.
ಈ ಯೋಜನೆಯನ್ನು 2018 ರ ಏಪ್ರಿಲ್‌ನಲ್ಲಿ ವಿಸ್ತರಿಸಲಾಗಿದ್ದು , ಇನ್ನೂ ಏಳು ವರ್ಗಗಳ (SC/ST, PMAY, AAY, ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ನಿವಾಸಿಗಳು, ದ್ವೀಪಗಳು) ಮಹಿಳಾ ಫಲಾನುಭವಿಗಳನ್ನು ಒಳಗೊಂಡಿದೆ. ಎರಡನೇ ಹಂತದಲ್ಲಿ 8 ಕೋಟಿ ಮಹಿಳಾ ಸದಸ್ಯರಿಗೆ LPG ಸಂಪರ್ಕ ನೀಡುವ ಗುರಿ ಹೊಂದಲಾಗಿದೆ.
ಏನಿದು ಉಜ್ವಲ – 2.0 ಯೋಜನೆ?
ಉಜ್ವಲ 2.0 ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ಸುಮಾರು 1 ಕೋಟಿ ಗ್ಯಾಸ್ ಸಂಪರ್ಕಗಳನ್ನು ಬಡವರಿಗೆ ಉಚಿತ ರೀಫಿಲ್ ಮತ್ತು ಸ್ಟೌವ್ ಜೊತೆಗೆ ವಿತರಿಸುತ್ತದೆ. ಈ ವರ್ಷದ ವಾರ್ಷಿಕ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22 ರಲ್ಲಿ 1 ಕೋಟಿ ಹೊಸ ಫಲಾನುಭವಿಗಳಿಗೆ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು. ಈ ಯೋಜನೆಯಡಿ 8 ಕೋಟಿ ಫಲಾನುಭವಿಗಳು ಈಗಾಗಲೇ ಪ್ರಯೋಜನ ಪಡೆದಿದ್ದಾರೆ.
ಅರ್ಹತಾ ಮಾನದಂಡಗಳು ಏನು?
– ಅರ್ಜಿದಾರರು ಮಹಿಳೆಯಾಗಿರಬೇಕು.
– ಅರ್ಜಿದಾರ ಮಹಿಳೆಯು ಮನೆಯ ಮುಖ್ಯಸ್ಥೆಯಾಗಿರಬೇಕು
– 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರವೇ ಅರ್ಜಿಯನ್ನು ಸಲ್ಲಿಸಬಹುದು.
ದಾಖಲೆಗಳು ಏನೇನು ಬೇಕು?
– ಆಧಾರ್ ಕಾರ್ಡ್
– ಬ್ಯಾಂಕ್ ಖಾತೆಯ ಪಾಸ್ ವಿವರ
– ಮೊಬೈಲ್ ಸಂಖ್ಯೆ
– ಪಾಸ್ ಪೋರ್ಟ್ ಅಳತೆಯ ಪೋಟೋ
– ಪಡಿತರ ಚೀಟಿ
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಉಜ್ವಲ ಯೋಜನೆ 2.0 ಗಾಗಿ ನೋಂದಾಯಿಸಲು ಹಲವಾರು ಮಾರ್ಗಗಳಿವೆ:
1. ಜನ ಸೇವಾ ಕೇಂದ್ರ: ನಿಮ್ಮ ಹತ್ತಿರದ ಜನ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ಸಹಾಯ ಪಡೆಯಿರಿ
– ಅಧಿಕೃತ ವೆಬ್ಸೈಟ್: pmuy.gov.in ಅಧಿಕೃತ ಉಜ್ವಲ ಯೋಜನೆ ವೆಬ್ಸೈಟ್ಗೆ ಭೇಟಿ ನೀಡಿ.
– “ಉಜ್ವಲ ಯೋಜನೆ 2.0 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
– ನಿಮ್ಮ ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
2. ಗ್ಯಾಸ್ ಡೀಲರ್: ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಲು ನೀವು ನಿಮ್ಮ ಸ್ಥಳೀಯ ಗ್ಯಾಸ್ ಡೀಲರ್ ಅನ್ನು ಭೇಟಿ ಮಾಡಬಹುದು.