PM Vishwakarma
ಕೇಂದ್ರ ಸರ್ಕಾರ(Central Govt)ವು ಸಾಕಷ್ಟು ಯೋಜನೆ(Scheme)ಗಳನ್ನು ಜಾರಿ ಮಾಡಿದ್ದು, ಹಲವು ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪುತ್ತಿವೆ. ಅವುಗಳಲ್ಲಿ ಪ್ರಮುಖವಾದುದು ವಿಶ್ವಕರ್ಮ ಯೋಜನೆ (Vishwakarma Scheme) ಕೂಡ ಒಂದು. ಹೌದು, ವಿಶ್ವಕರ್ಮ ಯೋಜನೆ ಇತ್ತೀಚಿನ ದಿನಗಳಲ್ಲಿ ದೇಶದ ಸಾಕಷ್ಟು ಜನರಿಗೆ ಅನುಕೂಲ ಆಗುತ್ತಿದೆ.
ಈ ಸುದ್ದಿ ಓದಿ:- Railway Jobs: ರೈಲ್ವೇ ಇಲಾಖೆಯಲ್ಲಿ 7951 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ:- 35,400/-
ಈ ಯೋಜನೆ ಮೂಲಕ ಸಾಲ(loan ನೀಡಲಾಗುತ್ತಿದ್ದು, ಕಡಿಮೆ ಬಡ್ಡಿ(Low interest) ಮೂಲಕ ಮರುಪಾವತಿ(Reimbursement) ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಹಾಗಿದ್ರೆ, ಈ ಯೋಜನೆಗೆ ಅರ್ಜಿ ಸಲ್ಲಿಕೆ(Application submission) ಮಾಡುವುದು ಹೇಗೆ? ಯಾರೆಲ್ಲಾ ಅರ್ಹರು ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ವಿಶ್ವಕರ್ಮ ಯೋಜನೆ (PM Vishwakarma Scheme)
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಈ ಪಿಎಂ ವಿಶ್ವಕರ್ಮ ಯೋಜನೆಯನ್ನು ಆರಂಭ ಮಾಡಲಾಗಿದೆ. ಈ ಯೋಜನೆಯಲ್ಲಿ ಕುಶಲಕರ್ಮಿಗಳು ತಮ್ಮ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ಪಡೆಯಬಹುದಾಗಿದೆ. ಈ ಯೋಜನೆಯಡಿ ಸುಮಾರು 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ.
ಹಂತ ಹಂತವಾಗಿ ಹಣ ಬಿಡುಗಡೆ
ಆರಂಭದಲ್ಲಿ ಮೊದಲ ಕಂತಿನ ಭಾಗವಾಗಿ ಶೇಕಡಾ 5 ರಷ್ಟು ಬಡ್ಡಿಯಲ್ಲಿ 1 ಲಕ್ಷ ರೂ.ಗಳ ಸಾಲ ನೀಡಲಾಗುತ್ತದೆ. ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವರಿ ಮಾಡಿದರೆ ಎರಡನೇ ಹಂತದಲ್ಲಿ 2 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಅದರಂತೆ ಅದನ್ನು ಮರುಪಾವತಿ ಮಾಡಿದ್ರೆ ನಂತರ 3 ಲಕ್ಷ ರೂ.ಗಳ ಸಾಲವನ್ನು ನೀಡಲಾಗುತ್ತದೆ.
ನಿಮ್ಮ ಹತ್ತಿರದ ಬೆಂಗಳೂರು, ಒನ್ ಗ್ರಾಮ ಒನ್, ಡಿಜಿಟಲ್ ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟು ಈಗಲೇ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದು. ಇದರೊಂದಿಗೆ ಇತರ ಪ್ರಯೋಜನಗಳ ಪಟ್ಟಿ, ಯಾರೆಲ್ಲ ಅರ್ಹರು ಎಂದು ತಿಳಿಯಿರಿ.
ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆ ಬೇಕು.?
- – ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ
– ಆಧಾರ್
– ಪಡಿತರ ಚೀಟಿ
– ಪ್ಯಾನ್ ಕಾರ್ಡ್
– ಮೊಬೈಲ್ ಸಂಖ್ಯೆ
– ಇ-ಮೇಲ್ ಐಡಿ
– ವಾಸಸ್ಥಳ ಮತ್ತು ಜಾತಿ ಪ್ರಮಾಣಪತ್ರ
– ಬ್ಯಾಂಕ್ ಖಾತೆ
– ಪಾಸ್ಬುಕ್
ವಿಶ್ವಕರ್ಮ ಯೋಜನೆಯ ಲಾಭ ಯಾರಿಗೆ ಸಿಗಲಿದೆ.?
- – ಕಮ್ಮಾರ
– ಅಕ್ಕಸಾಲಿಗ
– ಚಮ್ಮಾರ
– ಕ್ಷೌರಿಕ
– ವಾಷರ್ಮನ್
– ಟೈಲರ್
– ಶಿಲ್ಪಿ
– ಬಡಗಿ
– ದೋಣಿ ನಿರ್ಮಿಸುವವರು
– ಆಯುಧ ತಯಾರಕರು
– ಬೀಗ ತಯಾರಕರು
– ಮೀನುಗಾರರು
– ಸುತ್ತಿಗೆ ಮತ್ತು ಟೂಲ್ಕಿಟ್ ತಯಾರಕರು
– ಬುಟ್ಟಿ, ಚಾಪೆ, ಪೊರಕೆ ತಯಾರಕರು
– ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು ಸೇರಿದಂತೆ ಇನ್ನೂ ಹಲವರು.
ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು
- * ವಿಶ್ವಕರ್ಮ ಸಹೋದರ ಮತ್ತು ಸಹೋದರಿಯರಿಗೆ ರೂ. 3 ಲಕ್ಷದವರೆಗೆ ಆಧಾರರಹಿತ ಸಾಲ ವಿತರಣೆ.
* ರೂ. 15 ಸಾವಿರವರೆಗಿನ ಟೂಲ್ ಕಿಟ್. ಕೌಶಲ್ಯಾಭಿವೃದ್ಧಿಗೆ 5 ದಿನಗಳ ತರಬೇತಿ ಮತ್ತು ದೈನಂದಿನ ರೂ. 500 ಸಂಭಾವನೆ.
* ಸಂಪೂರ್ಣ ತಯಾರಾದ ಉತ್ಪನ್ನಗಳಿಗೆ ಕ್ವಾಲಿಟಿ ಸರ್ಟಿಫಿಕೇಶನ್, ಬ್ರಾಂಡಿಂಗ್ ಮತ್ತು ಜಾಹೀರಾತು ಮಾದರಿಯಲ್ಲಿ ಮಾರ್ಕೆಟಿಂಗ್ ನೆರವು.
* ಬಡ್ಡಿ ದರ 5%ನಂತೆ ಮೊದಲ ಬಾರಿಗೆ ರೂ 1ಲಕ್ಷ ಸಾಲ, 18 ತಿಂಗಳೊಳಗೆ ರೂ 1ಲಕ್ಷ ಹಿಂತಿರುಗಿದರೆ ಇನ್ನೂ 2 ಲಕ್ಷ ಸಾಲ ವಿತರಣೆ ಸೌಲಭ್ಯ.