PMAY Scheme: ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!

PMAY Scheme

ವ್ಯಕ್ತಿಯೊಬ್ಬನಿಗೆ ಆಹಾರ, ಶಿಕ್ಷಣ, ಆರೋಗ್ಯ ಇದೆಲ್ಲ ಎಷ್ಟು ಮುಖ್ಯವೋ ಅದೇ ರೀತಿ ಸ್ವಂತ ಮನೆ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ ಇದನ್ನು ಮೂಲಭೂತ ಅವಶ್ಯಕತೆ ಎನ್ನಲಾಗಿದೆ. ಒಂದು ವೇಳೆ ನಮಗೆ ನಮ್ಮ ಕುಟುಂಬಕ್ಕೆ ಸ್ವಂತ ಮನೆ ಇಲ್ಲದೆ ಇದ್ದರೆ ಬದುಕು ಅಭದ್ರತೆಯಿಂದ ಕೂಡಿರುತ್ತದೆ. ದುಡಿದ ಹಣದಲ್ಲಿ ಹೆಚ್ಚಿನ ಮೊತ್ತವನ್ನು ಬಾಡಿಗೆ ಕಟ್ಟುವುದಕ್ಕೆ ಕಳೆಯಬೇಕಾಗುತ್ತದೆ.

WhatsApp Group Join Now
Telegram Group Join Now

ನಮ್ಮ ಭಾರತ ದೇಶವು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ ನಮ್ಮ ದೇಶದಲ್ಲಿ ಇನ್ನೂ ಸಹ ಎಷ್ಟೋ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಇಂತಹ ಪರಾಶ್ರಯದಲ್ಲೇ ಬದುಕುತ್ತಿವೆ. ಅಂತವರಿಗೆಲ್ಲಾ ಕೇಂದ್ರ ಸರ್ಕಾರದ ಕಡೆಯಿಂದ ಅನುಕೂಲತೆ ಸಿಗುತ್ತಿದೆ. ಪ್ರಧಾನ ಮಂತ್ರಿ ಅವರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (Pradhan Mantri Avas Yojane) ನೆರವನ್ನು ಪಡೆದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರು ತಮ್ಮ ಸ್ವಂತ ಮನೆಗೆ ಕನಸನ್ನು ನನಸಾಗಿಸಿಕೊಳ್ಳಬಹುದು. ಈ ಕುರಿತಾದ ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಬಡ ಹಾಗೂ ಮಧ್ಯಮ ವರ್ಗದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮೊದಲನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಸಮಯದಲ್ಲಿಯೇ 2015ರಲ್ಲಿ 2022ರೊಳಗೆ ಪ್ರತಿಯೊಬ್ಬರೂ ಸ್ವಂತ ಮನೆಯಲ್ಲಿ ವಾಸಿಸುವಂತಾಗಬೇಕು ಎನ್ನುವ ದೂರ ದೃಷ್ಟಿ ಇಟ್ಟುಕೊಂಡು ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಪರಿಚಯಿಸಿದರು. ಆದರೆ ನಡುವೆ ದೇಶ ಎದುರಿಸಿದ ಕರೋನ ಲಾಕ್ ಡೌನ್ ಅನಿರೀಕ್ಷಿತ ಸಂದಿಗ್ಧ ಪರಿಸ್ಥಿತಿಗಳ ಪರಿಣಾಮವಾಗಿ ಇದನ್ನು ಇನ್ನಷ್ಟು ವರ್ಷಗಳಿಗೆ ವಿಸ್ತರಿಸಿದೆ ಹಾಗೂ ತೀವ್ರ ಗತಿಯಲ್ಲಿ ಈ ಯೋಜನೆ ಅಭಿವೃದ್ಧಿಪಡಿಸಲು ಶ್ರಮಿಸಲಾಗುತ್ತಿದೆ.

ಪ್ರತಿ ವರ್ಷ ಬಜೆಟ್ ಮಂಡನೆ ಆದಾಗಲೂ ಸಹ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ ದೊಡ್ಡ ಮೊತ್ತವನ್ನು ಮಂಜೂರು ಮಾಡಲಾಗುತ್ತದೆ. ಅದೇ ರೀತಿಯಾಗಿ 2024-25ನೇ ಸಾಲಿನ ಬಜೆಟ್ ಸಮಯದಲ್ಲೂ ಕೂಡ ಆವಾಸ್ ಯೋಜನೆ (PM Awas Yojana) ಗಾಗಿ 80,671 ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಲಾಗಿದೆ.

ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕಾಗಿ ಅಥವಾ ಖರೀದಿ ಮಾಡುವುದಕ್ಕಾಗಿ ಈ ಯೋಜನೆಯಡಿ ಗರಿಷ್ಠ 2.67 ಲಕ್ಷ ನೆರವು ಪಡೆಯಬಹುದು ಮತ್ತು ರೂ.12 ಲಕ್ಷ ದವರೆಗೆ 6.50% ಪಟ್ಟಿ ದರದಲ್ಲಿ ಸಬ್ಸಿಡಿ ಲೋನ್ ಪಡೆಯಬಹುದು, ಈ ಮೊತ್ತವನ್ನು 18 ಲಕ್ಷಕ್ಕೆ ವಿಸ್ತರಿಸಲು ಚಿಂತಿಸಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾಶಕಂಡೀಷನ್ಸ್ ಇದೆ. ಅಪ್ಲೈ ಮಾಡುವುದು ಹೇಗೆ? ಸಲ್ಲಿಸಬೇಕಾದ ದಾಖಲೆಗಳೇನು? ಎನ್ನುವ ವಿವರ ಹೀಗಿದೆ.

ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-

* ಕುಟುಂಬದ ಯಾವ ಸದಸ್ಯರಿಗೂ ಸ್ವಂತ ಮನೆ ಇರಬಾರದು
* ಆರ್ಥಿಕವಾದ ಹಿಂದುಳಿದ ಕುಟುಂಬಗಳ ವಾರ್ಷಿಕ ಆದಾಯವು 3 ಲಕ್ಷದ ಒಳಗಿರಬೇಕು
* ಕುಟುಂಬದ 18 ವರ್ಷದ ಮೇಲ್ಪಟ್ಟ ಸದಸ್ಯ ಅರ್ಜಿ ಸಲ್ಲಿಸಬಹುದು

ಬೇಕಾಗುವ ದಾಖಲೆಗಳು:-

* ಅರ್ಜಿದಾರನ ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಕುಟುಂಬದ ರೇಷನ್ ಕಾರ್ಡ್
* ಮನೆ ಕಟ್ಟಿಸಲು ನಿಗದಿಪಡಿಸುತ್ತಿರುವ ಸ್ಥಳದ ವಿವರ
* ಮನೆ ಖರೀದಿಸುವುದಾದರೆ ಪ್ರಾಪರ್ಟಿಗೆ ಸಂಬಂಧಪಟ್ಟ ದಾಖಲೆಗಳು
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
* ಇನ್ನಿತರ ಪ್ರಮುಖ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-

* pmay ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು
* ಹತ್ರದಲ್ಲಿರುವ ಯಾವುದೇ ಬ್ಯಾಂಕ್ ನಲ್ಲಿಯೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ
* ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ವೆಬ್ಸೈಟ್ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment