PMJJY
ಕೇಂದ್ರ ಸರ್ಕಾರ(Central Govt)ದ ಸಾಮಾಜಿಕ ಭದ್ರತೆ ಯೋಜನೆ(Social Security Scheme)ಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ (Pradhan Mantri Jeevan Jyoti Bima Yojana- PMJJY), ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಗಳಡಿ (Pradhan Mantri Suraksha Bima Yojana- PMSBY) ಜಿಲ್ಲೆಯಲ್ಲಿ ಹೆಚ್ಚಿನ ನಾಗರೀಕರು ನೋಂದಣಿಗೆ ಕ್ರಮವಹಿಸಬೇಕು ಎಂದು ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ನೋಂದಣಿ ಮತ್ತು ಇಲಾಖೆಗಳಲ್ಲಿ ಕ್ಲೇಮ್ ಮಾಡದೆ ಇರುವ ಖಾತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸುದ್ದಿ ಓದಿ:- Gruha Lakshmi: ಇಂದು ಈ 12 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಬಿಡುಗಡೆ.!
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ 18 ರಿಂದ 50 ವಯಸ್ಸಿನವರೆಗಿನ ನಾಗರೀಕರು 436 ರೂ.ಗಳ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ 18 ರಿಂದ 70 ವಯಸ್ಸಿನವರೆಗಿನ ನಾಗರೀಕರು 20 ರೂ. ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಯಾವುದೇ ರೀತಿಯ ಮ.ರಣ ಸಂಭವಿಸಿದರೂ ಅವರ ವಾರಸುದಾರಿಗೆ ಪ್ರತಿ ಯೋಜನೆಯಡಿ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ(Insurance facility) ದೊರೆಯಲಿದೆ.
ಹಾಗಾಗಿ, ಜಿಲ್ಲೆಯ ಎಲ್ಲ ಇಲಾಖೆಗಳ ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ಜಿಲ್ಲೆಯ ಪ್ರತಿಯೊಬ್ಬ ಅರ್ಹ ನಾಗರೀಕರು ಎರಡು ಯೋಜನೆಗಳಲ್ಲಿ ನೋಂದಣಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ನೀಡಬೇಕು ಎಂದು ತಾಕೀತು ಮಾಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ಬಾಬು ಮಾತನಾಡಿ, ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ 18 ರಿಂದ 50 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಪಿಎಂಜೆಜೆಬಿವೈ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಯಡಿ ವಾರ್ಷಿಕ ರೂ.436 ಪ್ರೀಮಿಯಂನಲ್ಲಿ ರೂ.2 ಲಕ್ಷದ ಲೈಫ್ ಇನ್ಶೂರೆನ್ಸ್ ಕವರೇಜ್ ಪಡೆಯಬಹುದಾಗಿದೆ.
ಈ ಸುದ್ದಿ ಓದಿ:- WhatsApp ಬಳಸುವಾಗ ಈ ರೀತಿ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಖಾಲಿಯಾಗುತ್ತೆ ಎಚ್ಚರ.!
ಈ ಯೋಜನೆಗೆ ನಾಮಿನಿ ಕಡ್ಡಾಯವಾಗಿದ್ದು, ನಾಮಿನಿಯ ಜನ್ಮ ದಿನಾಂಕ ಅತ್ಯವಶ್ಯಕವಾಗಿ ಬೇಕು. 55 ವರ್ಷದ ಒಳಗೆ ಯಾವುದೇ ಮರಣ ಸಂಭವಿಸಿದರೂ ಸಂಬಂಧಪಟ್ಟವರಿಗೆ ವಿಮೆ ಸೌಲಭ್ಯ ದೊರೆಯಲಿದೆ ಎಂದರು.
ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯು ಅಪಘಾತ ವಿಮೆಯಾಗಿದ್ದು, 18 ರಿಂದ 70 ವಯಸ್ಸಿನವರೆಗಿನ ನಾಗರೀಕರು ರೂ.20/- ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಈ ಯೋಜನೆಯಡಿಯೂ ರೂ.2 ಲಕ್ಷದ ವಿಮಾ ಸೌಲಭ್ಯ ದೊರೆಯಲಿದೆ ಎಂದರು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2015 ರಲ್ಲಿ ಪ್ರಾರಂಭಿಸಿದರು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2015 ರಲ್ಲಿ ಪ್ರಾರಂಭಿಸಿದರು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಅರ್ಹತೆ
1. ವಯಸ್ಸಿನ ಮಿತಿ: ದಾಖಲಾತಿ ದಿನಾಂಕದಂದು 18 ವರ್ಷದಿಂದ (ಪೂರ್ಣಗೊಂಡ) 70 ವರ್ಷ ವಯಸ್ಸಿನ ವ್ಯಕ್ತಿಗಳು (ಜನ್ಮದಿನದ ಹತ್ತಿರ ವಯಸ್ಸು) ಅರ್ಹರಾಗಿರುತ್ತಾರೆ.
2. ಬ್ಯಾಂಕ್ ಖಾತೆಯನ್ನು ಉಳಿಸುವುದು: ನೀವು ಭಾಗವಹಿಸುವ ಬ್ಯಾಂಕ್ ಅಥವಾ ಭಾರತದಲ್ಲಿ ಪೋಸ್ಟ್ ಆಫೀಸ್‌ನಲ್ಲಿ ಮಾನ್ಯವಾದ ಉಳಿತಾಯ ಖಾತೆಯನ್ನು ಹೊಂದಿರಬೇಕು. ಸ್ವಯಂಚಾಲಿತ ಪ್ರೀಮಿಯಂ ಕಡಿತಕ್ಕೆ ಇದು ನಿರ್ಣಾಯಕವಾಗಿದೆ ಮತ್ತು ತಡೆರಹಿತ ದಾಖಲಾತಿಯನ್ನು ಖಚಿತಪಡಿಸುತ್ತದೆ
.
3. ಉದ್ಯೋಗ: PMSBY ಪ್ರಾಥಮಿಕವಾಗಿ ಅಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳನ್ನು ಗುರಿಯಾಗಿಸುತ್ತದೆ, ಆದರೂ ವಿನಾಯಿತಿಗಳು ಅಸ್ತಿತ್ವದಲ್ಲಿರಬಹುದು. ನಿಮ್ಮ ಉದ್ಯೋಗದ ಆಧಾರದ ಮೇಲೆ ನಿರ್ದಿಷ್ಟ ಅರ್ಹತೆಯ ವಿವರಗಳಿಗಾಗಿ ನಿಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಅನ್ನು ಪರಿಶೀಲಿಸಲಾಗಿದೆ.
4. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ: ಅರ್ಜಿ ಪ್ರಕ್ರಿಯೆ
PMSBY ಗಾಗಿ ಅರ್ಜಿ ಸಲ್ಲಿಸುವುದು ಅನುಕೂಲಕರವಾದ ರೀತಿಯಲ್ಲಿ ಇದನ್ನು ಎರಡು ವಿಭಿನ್ನ ವಿಧಾನಗಳನ್ನು ಪೂರ್ಣಗೊಳಿಸಬಹುದು.