Post Office:‌ 1 ಲಕ್ಷ ಠೇವಣಿ ಇಟ್ಟರೆ 50 ಸಾವಿರ ಬಡ್ಡಿ ಸಿಗುತ್ತೆ.! ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್

Post Office

ಒಂದಿಷ್ಟು ಹಣವನ್ನು ಭದ್ರತಾ ಠೇವಣಿ (Fixed Deposit) ಇಟ್ಟು, ಅತಿ ಹೆಚ್ಚು ಬಡ್ಡಿ (More interest) ಪಡೆಯುವ ಜೊತೆಗೆ, ಅದೇ ರೀತಿಯ ವಿಶ್ವಾಸಾರ್ಹವಾಗಿರುವ ಜಾಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ಬ್ಯಾಂಕ್‌ಗಳಿಗಿಂತಲೂ(Bank) ಅತಿ ಹೆಚ್ಚು ಬಡ್ಡಿ ಸಿಗುವುದು ಎಂದು ಅದು ಅಂಚೆ ಕಚೇರಿ(Post Office) ಮಾತ್ರ. ಕೆಲವು ಸಹಕಾರಿ ಸಂಸ್ಥೆಗಳು(Cooperative Institutions) ಬಡ್ಡಿಯನ್ನು(interest) ಹೆಚ್ಚಿಗೆ ನೀಡಿದರೂ ಅದರಲ್ಲಿ ಹೂಡಿಕೆ (investment) ಮಾಡುವುದು ಅಷ್ಟೇ ತೊಂದರೆ ಇದೆ.

WhatsApp Group Join Now
Telegram Group Join Now

ಮೋಸ, ವಂಚನೆಗಳ ಹೆಚ್ಚಾಗುತ್ತವೆ. ಯಾವಾಗ ಈ ಸಂಸ್ಥೆಗಳು ಜಾಗ ಖಾಲಿ ಮಾಡಿಕೊಂಡು ಹೋಗುತ್ತದೆ ಎನ್ನುವುದನ್ನು ಹೇಳುವುದೇ ಕಷ್ಟ. ಆದ್ದರಿಂದ, ನಿಮ್ಮ ಹಣ(money) ಸಂಪೂರ್ಣ ಸುರಕ್ಷಿತವಾಗಿ ಇರಬೇಕು ಜೊತೆಗೆ ಹೆಚ್ಚಿಗೆ ಬಡ್ಡಿ ಸಿಗಬೇಕು ಎಂದರೆ, ಅಂಚೆ ಕಚೇರಿಗಿಂತಲೂ ಮತ್ತೊಂದು ಜಾಗವಿಲ್ಲ.

ಹಾಗಿದ್ದರೆ, ನೀವು ಎಫ್‌ಡಿ ಇಟ್ಟರೆ ಎಷ್ಟು ಹಣ ನಿಮಗೆ ಸಿಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಅಷ್ಟಕ್ಕೂ ಅಂಚೆ ಕಚೇರಿಯಲ್ಲಿ ಹಲವಾರು ಯೋಜನೆಗಳು ಇವೆ. ಆದರೆ, ಇಲ್ಲಿ ನಿಮಗೆ ಸಾಮಾನ್ಯ ಬಡ್ಡಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಅಂಚೆ ಕಚೇರಿಯಲ್ಲಿ ನೀವು ಒಂದು ವರ್ಷದಿಂದ ಐದು ವರ್ಷಗಳವರೆಗೆ ಎಫ್‌ಡಿ ಇಡಬಹುದು. ಇದಕ್ಕೆ ಆದಾಯ ತೆರಿಗೆ ಕಾಯ್ದೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಇರುತ್ತದೆ. ಹಾಗಿದ್ದರೆ, ನೀವು ಎಷ್ಟಿಟ್ಟರೆ ನಿಮಗೆ ಎಷ್ಟು ಹಣ ಸಿಗುತ್ತದೆ ಎನ್ನುವುದನ್ನು ನೋಡೋಣ.

1 ವರ್ಷಕ್ಕೆ ನಿಮಗೆ ಶೇಕಡಾ 6.90, ಎರಡು ವರ್ಷಕ್ಕೆ ಶೇಕಡಾ 7, ಮೂರು ವರ್ಷಕ್ಕೆ 7.10% ಹಾಗೂ ಐದು ವರ್ಷಕ್ಕೆ 7.50% ಬಡ್ಡಿ ಸಿಗುತ್ತದೆ. ಇದನ್ನು ಗಮನಿಸಿದರೆ, ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನಿಮಗೆ ಎಲ್ಲಕ್ಕಿಂತಲೂ ಹೆಚ್ಚಿನ ಬಡ್ಡಿದರ ಅಂದರೆ, 7.5% ಬಡ್ಡಿ ಸಿಗುತ್ತದೆ. ಇದು ಎಲ್ಲಾ ಬ್ಯಾಂಕ್‌ಗಳಿಗಿಂತಲೂ ಅಧಿಕ ದರ ಬಡ್ಡಿಯಾಗಿದೆ.

ಅಂದರೆ, ನೀವು ಒಂದು ಲಕ್ಷ ರೂಪಾಯಿಗಳನ್ನು ಐದು ವರ್ಷಗಳವರೆಗೆ ಎಫ್‌ಡಿ ಇಟ್ಟರೆ, ನಿಮಗೆ ಒಂದು ಲಕ್ಷದ ಜೊತೆಗೆ ಹೆಚ್ಚುವರಿಯಾಗಿ 44,995 ರೂಪಾಯಿಗಳು ಸಿಗುತ್ತವೆ. ಒಂದು ವೇಳೆ ನೀವು ಐದು ಲಕ್ಷ ರೂಪಾಯಿ ಐದು ವರ್ಷಕ್ಕೆ ಇಟ್ಟಿದ್ದೇ ಆದಲ್ಲಿ ನಿಮಗೆ 2 ಲಕ್ಷದ 26 ಸಾವಿರದ 647 ರೂಪಾಯಿ ಬಡ್ಡಿ ಸಿಗುತ್ತದೆ. ಅಂದರೆ ನಿಮ್ಮ ಕೈಗೆ ಐದು ವರ್ಷಕ್ಕೆ ₹7,26,647 ಸಿಗುತ್ತದೆ.

ಐದು ಲಕ್ಷದಷ್ಟು ಹಣ ಇಡುವುದು ಕಷ್ಟ ಎಂದಾದರೆ, ಮೂರು ವರ್ಷದ ಅವಧಿಗೆ ನೀವು ಒಂದು ಲಕ್ಷ ರೂಪಾಯಿ ಎಫ್‌ಡಿ ಇಟ್ಟರೆ ನಿಮಗೆ ₹ 1,23,661 ಹಾಗೂ ಐದು ವರ್ಷಕ್ಕೆ ₹ 1,45,329 ಸಿಗುತ್ತದೆ. ಎರಡು ಲಕ್ಷ ರೂಪಾಯಿಗಳನ್ನು ಇಟ್ಟರೆ ಮೂರು ವರ್ಷಕ್ಕೆ ₹ 2,47,322 ಮತ್ತು ಐದು ವರ್ಷಕ್ಕೆ ₹ 2,90,659 ಸಿಗುತ್ತದೆ.

ಐದು ಲಕ್ಷ ರೂಪಾಯಿ ಇಟ್ಟರೆ, ಮೂರು ವರ್ಷಕ್ಕೆ ₹ 6,18,304 ಮತ್ತುಐದು ವರ್ಷಕ್ಕೆ ₹ 7,26,647 ಸಿಗುತ್ತದೆ. ನಿಮ್ಮಲ್ಲಿ ಇನ್ನೂ ಹೆಚ್ಚಿನ ದುಡ್ಡು ಇದ್ದು, 10 ಲಕ್ಷ ರೂಪಾಯಿ ಠೇವಣಿ ಇಟ್ಟರೆ ನಿಮಗೆ ಐದು ವರ್ಷಕ್ಕೆ 14,53,294 ರೂಪಾಯಿ ಸಿಗುತ್ತದೆ. ಹತ್ತಿರದ ಅಂಚೆ ಕಚೇರಿಯನ್ನು ನೇರವಾಗಿ ಭೇಟಿ ಮಾಡಿದರೆ ಹಲವು ಯೋಜನೆಗಳ ಮಾಹಿತಿ ಪಡೆದುಕೊಳ್ಳಬಹುದು.

ಫಿಕ್ಸಿಡ್‌ ಡೆಪಾಸಿಟ್‌ ಪ್ರಯೋಜನ?

ಜನರು ತಮ್ಮ ಹಣವನ್ನು ಉಳಿತಾಯ ಮಾಡುವ ವಿಚಾರ ಬಂದಾಗ ಅಧಿಕ ಮಂದಿ ಫಿಕ್ಸಿಡ್‌ ಡೆಪಾಸಿಟ್‌ ಮೇಲೆ ಅಧಿಕ ಗಮನ ಹರಿಸುತ್ತಾರೆ. ನಾವು ಹೂಡಿಕೆ ಮಾಡಿ ಬಡ್ಡಿಯನ್ನು ಪಡೆಯುವ ಹಾಗೂ ನಾವು ಹೂಡಿಕೆ ಮಾಡಿದ ಹಣವು ಸುರಕ್ಷಿತವಾಗಿದೆ ಎಂಬ ನೆಮ್ಮದಿಯಿಂದ ಇರಲು ಜನರು ಅಧಿಕವಾಗಿ ಫಿಕ್ಸಿಡ್‌ ಡೆಪಾಸಿಟ್‌ ಮಾಡುತ್ತಾರೆ. ಇದು ಹೆಚ್ಚಾಗಿ ಜನರ ಭವಿಷ್ಯಕ್ಕೆ ಸುರಕ್ಷಿತೆಯನ್ನು ಒದಗಿಸುತ್ತದೆ.

ಇನ್ನು ಫಿಕ್ಸಿಡ್‌ ಡೆಪಾಸಿಟ್‌ನಲ್ಲಿ ಶಾರ್ಟ್ ಟರ್ಮ್, ಲಾಂಗ್‌ ಟರ್ಮ್, ಮಿಡ್‌ ಟರ್ಮ್ ಎಂದು ವಿವಿಧ ಅವಧಿಗಳಿವೆ. ಸಾಲದ ಹೂಡಿಕೆದಾರರು ವಾರ್ಷಿಕ ಬಡ್ಡಿದರವನ್ನು 7 ದಿನಗಳಿಂದ 10 ವರ್ಷಗಳವರೆಗಿನ ಬದಲಾಗುತ್ತಿರುವ ಮೆಚ್ಯೂರಿಟಿ ಸಮಯಕ್ಕೆ ಈ ಫಿಕ್ಸಿಡ್ ಡೆಪಾಸಿಟ್‌ ಮೇಲೆ ಪಡೆಯಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment