Post office ಪೋಸ್ಟ್‌ ಆಫೀಸ್‌ ನಲ್ಲಿ ಕೇವಲ 1 ಲಕ್ಷ ಹೂಡಿಕೆ ಮಾಡಿ 44,995 ಬಡ್ಡಿ ಸಿಗುತ್ತೆ.!

Post office

ಈಗಿನ ಕಾಲದಲ್ಲಿ ಹಣಕಾಸಿನ ವಿಚಾರವಾಗಿ ಯಾರನ್ನು ಕೂಡ ನಂಬಲು ಸಾಧ್ಯವಿಲ್ಲ ಹಾಗಾಗಿ ನಾವು ಕಷ್ಟಪಟ್ಟು ದುಡಿದ ಹಣವನ್ನು ಜೋಪಾನ ಮಾಡಿಕೊಳ್ಳುವುದು ನಮ್ಮದೇ ಕರ್ತವ್ಯವಾಗಿದೆ. ಆದರೆ ಹಣವನ್ನು ಹಾಗೆ ಇಟ್ಟುಕೊಳ್ಳುವುದರಿಂದ ಅದು ಬೆಳೆಯುವುದಿಲ್ಲ ಅದನ್ನು ಹೂಡಿಕೆ (Investment) ಮಾಡಬೇಕಾಗುತ್ತದೆ ಇಂತಹ ಘಟ್ಟದಲ್ಲಿಯೇ ಎಚ್ಚರಿಕೆಯಿಂದ ಇರುವುದು ಅಗತ್ಯ.

ಈ ರೀತಿ ಹಣ ಹೆಚ್ಚಿಗೆ ಮಾಡಬೇಕು ಎಂದುಕೊಳ್ಳುವವರು ಹಣದ ಸುರಕ್ಷತೆ (Security) ಬಗ್ಗೆಯೂ ಕೂಡ ಗಮನ ಕೊಟ್ಟು ಅಂಚೆ ಕಚೇರಿ ಯೋಜನೆಗಳಲ್ಲಿ (Post office Schemes) ಹೂಡಿಕೆ ಮಾಡಬಹುದು. ಯಾಕೆಂದರೆ ಇಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರವೇ (Central Government) ಗ್ಯಾರಂಟಿ ಆಗಿರುತ್ತದೆ.

WhatsApp Group Join Now
Telegram Group Join Now

ಹಣಕ್ಕೆ ಭದ್ರತೆ ಜೊತೆಗೆ ಹೆಚ್ಚಿನ ಮೊತ್ತದ ಬಡ್ಡಿದರವೂ ಕೂಡ ಈಗ ಅಂಚೆ ಕಚೇರಿ ಯೋಜನೆಗಳಲ್ಲಿ ಸಿಗುತ್ತಿದೆ. ಅಂಚೆ ಕಚೇರಿ ಯೋಜನೆಯೊಂದರಲ್ಲಿ ನೀವು 1 ಲಕ್ಷ ಹೂಡಿಕೆ ಮಾಡಿ ರೂ.44,995 ಬಡ್ಡಿಯನ್ನೇ ಪಡೆಯಬಹುದು ಅದು ಹೇಗೆ ಇಲ್ಲಿದೆ ನೋಡಿ ವಿವರ ಅಂಚೆ ಕಚೇರಿಯಲ್ಲಿ ಸುಮಾರು 13ಕ್ಕೂ ಹೆಚ್ಚು ಉಳಿತಾಯ ಯೋಜನೆಗಳು ಇವೆ.

ಇವುಗಳಲ್ಲಿ ಪ್ರತಿ ತಿಂಗಳು ಸ್ವಲ್ಪ ಮತದ ಹಣವನ್ನು ಹೂಡಿಕೆ ದೀರ್ಘಕಾಲದಲ್ಲಿ ಲಾಭ ಮಾಡಬಹುದಾದಂತಹ RD, SSY, NPS, PPF ಒಂದು ಕಡೆಯಾದರೆ, ಒಂದೇ ಬಾರಿಗೆ ಹೂಡಿಕೆ ಮಾಡಿ ನಿಶ್ಚಿತ ಆದಾಯ ಪಡೆಯಬಹುದಾದಂತಹ FD, POMIS, SCSS, ಕಿಂಗ್ ಸಿ ಎಸ್ ಇಂತಹ ಯೋಜನೆಗಳು ಕೂಡ ಇದೆ. ಇವುಗಳಲ್ಲಿ FD ಯೋಜನೆ ಮೂಲಕ ನೀವು 1 ಲಕ್ಷ ಹೂಡಿಕೆಗೆ ರೂ.44,995 ರೂಗಳನ್ನು ಪಡೆಯಬಹುದು.

ಯೋಜನೆ ಹೆಸರು:- ಫಿಕ್ಸೆಡ್ ಡೆಪಾಸಿಟ್ ಯೋಜನೆ(Fixed Deposit Scheme)

* ಇದನ್ನು ಟೈಮ್ ಡೆಪಾಸಿಟ್ ಯೋಜನೆ ಎಂದು ಕೂಡ ಕರೆಯುತ್ತಾರೆ
* ಅಂಚೆ ಕಚೇರಿಯಲ್ಲಿ 1 ವರ್ಷಕ್ಕೆ, 2 ವರ್ಷಕ್ಕೆ, 3 ವರ್ಷಕ್ಕೆ ಹಾಗೂ 5 ವರ್ಷಕ್ಕೆ FD ಇಡುವ ಅವಕಾಶಗಳು ಇವೆ.
ಇದಕ್ಕೆ ಅನ್ವಯವಾಗುವ ಬಡ್ಡಿದರವನ್ನು ನೋಡುವುದಾದರೆ
1 ವರ್ಷಕ್ಕೆ 6.9%, 2 ವರ್ಷಕ್ಕೆ 7%, 3 ವರ್ಷಗಳಿಗೆ 7.1 % ಮತ್ತು 5 ವರ್ಷಕ್ಕೆ 7.5% ಇದೆ.

* 1 ವರ್ಷಕ್ಕೆ 1 ಲಕ್ಷ ರೂಪಾಯಿ FD ಮಾಡಿದರೆ 6.9% ಬಡ್ಡಿ ದರದಲ್ಲಿ ನೀವು ಮೆಚ್ಯೂರಿಟಿ ವೇಳೆಗೆ ಒಟ್ಟು 1,07,081 ರೂಪಾಯಿಗಳನ್ನು ಪಡೆಯುತ್ತೀರಿ. ಇದರಲ್ಲಿ ನಿಮಗೆ ಬಡ್ಡಿ ಮೊತ್ತವಾಗಿ ರೂ.7,081 ಸಿಗುತ್ತದೆ.

* 2 ವರ್ಷಗಳ ಅವಧಿಯ FD ಯೋಜನೆಯಲ್ಲಿ ನೀವು 1 ಲಕ್ಷ ಹೂಡಿಕೆ ಮಾಡಿದಾಗ 7% ಬಡ್ಡಿ ದರದಲ್ಲಿ ಮೆಚುರಿಟಿ ವೇಳೆ ಒಟ್ಟು ರೂ.1,14,888 ರೂಪಾಯಿಯನ್ನು ಪಡೆಯುತ್ತೀರಿ, ರೂ.14,888 ರೂಪಾಯಿ ಬಡ್ಡಿ ಮೊತ್ತವಾಗಿ ಪಡೆದಂತಾಗುತ್ತದೆ.

* 3 ವರ್ಷಗಳ ಅವಧಿಗೆ 1 ಲಕ್ಷ ಹೂಡಿಕೆ ಮಾಡಿದರೆ ನೀವು ಮೆಚ್ಯೂರಿಟಿಯಲ್ಲಿ 7.1% ಬಡ್ಡಿದರದಲ್ಲಿ ಒಟ್ಟು ರೂ.1,23,508 ರೂಪಾಯಿ ಪಡೆಯುತ್ತೀರಿ. ರೂ. 23,508 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ.

* 5 ವರ್ಷಗಳ ಅವಧಿಗೆ 1 ಲಕ್ಷ ರೂಪಾಯಿಯನ್ನು ಈ ಯೋಚನೆಯಲ್ಲಿ ಹೂಡಿಕೆ ಮಾಡಿದರೆ, 7.5% ಬಡ್ಡಿದರದ ಅನ್ವಯ ನೀವು ಮೆಚ್ಯೂರಿಟಿ ಸಂದರ್ಭದಲ್ಲಿ ರೂ.1,44,995 ಪಡೆಯುತ್ತೀರಿ ಬಡ್ಡಿ ರೂಪದಲ್ಲಿ ರೂ.44,995 ಲಾಭವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಸಂಪರ್ಕಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment