Post office ಪೋಸ್ಟ್ ಆಫೀಸ್ ನಲ್ಲಿ ಕೇವಲ 1500 ಹೂಡಿಕೆ ಮಾಡಿ ಸಾಕು 31 ಲಕ್ಷ ರಿಟರ್ನ್ಸ್ ಪಡೆಯಿರಿ.!

Post office

ಪ್ರಸ್ತುತವಾಗಿ ಪೋಸ್ಟ್ ಆಫೀಸ್ (Post office ) ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೇಫ್ ಎನಿಸಿದೆ. ಅಂಚೆ ಕಛೇರಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ಗ್ಯಾರೆಂಟಿ ಆಗಿರುವುದರಿಂದ ಈ ಹಣವು ಅತ್ಯಂತ ಕಡಿಮೆ ಅಪಾಯ ಮತ್ತು ಹೆಚ್ಚಿನ ಆದಾಯವನ್ನು ತರುತ್ತದೆ ಎಂದೇ ಹೇಳಬಹುದು.

ಅಂಚೆ ಕಚೇರಿಯಿಂದ ಈಗ ಉಳಿತಾಯ ಅಥವಾ ಹೂಡಿಕೆ ರೂಪದಲ್ಲಿ ಆದಾಯ ತರುವಂತಹ ಹತ್ತಾರು ಯೋಜನೆಗಳು ಇವೆ ಇವುಗಳಲ್ಲಿ ಒಂದಾದ ಗ್ರಾಮ ಸುರಕ್ಷಾ ಯೋಜನೆಯ (Grama Suraksha Scheme) ಬಗ್ಗೆ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಗ್ರಾಮೀಣ ಜನರನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ ಪರಿಚಯಿಸಿದೆ. ಇದು ವಿಮೆರೂಪದ (insurance) ಪಾಲಿಸಿಯಾಗಿದ್ದು ಈ ಯೋಜನೆಯ ಕುರಿತಾದ ಮುಖ್ಯವಾದ ಲಕ್ಷಣಗಳು ಹೀಗಿವೆ ನೋಡಿ…

WhatsApp Group Join Now
Telegram Group Join Now

* ಭಾರತೀಯ ನಾಗರಿಕರು ಮಾತ್ರ ಈ ಯೋಜನೆಯಡಿ ಹೂಡಿಕೆ ಮಾಡಲು ಅವಕಾಶ. ಇದರ ಮುಖ್ಯ ಆಕರ್ಷಣೆ ಏನೆಂದರೆ, ತಿಂಗಳಿಗೆ ರೂ.1,500 ಠೇವಣಿ ಮಾಡುವ ಹೂಡಿಕೆದಾರರು ರೂ. 31 ರಿಂದ 35 ಲಕ್ಷ ರೂ.ವರೆಗೆ ರಿಟರ್ನ್ ಪಡೆಯಬಹುದು.
* ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯೋಮಿತಿ 19 ವರ್ಷಗಳು, ಈ ಯೋಜನೆ ಖಾತೆ ತೆರೆಯಲು ಗರಿಷ್ಠ ಅರ್ಹತೆಯ ವಯಸ್ಸು 55 ವರ್ಷಗಳು.

* ಈ ಯೋಜನೆಯ ಮೂಲಕ ಸಾಲ (loan) ಸೌಲಭ್ಯವೂ ದೊರೆಯುತ್ತದೆ. ಗ್ರಾಹಕರು ಯೋಜನೆ ಖರೀದಿಸಿದ ಮೂರು ವರ್ಷಗಳ ನಂತರ ಪಾಲಿಸಿಯನ್ನು ಸರೆಂಡರ್ ಮಾಡಲು ಕೂಡ ಅವಕಾಶವಿದೆ.

* ಈ ಯೋಜನೆಯಡಿಯಲ್ಲಿ ಕನಿಷ್ಠ ವಿಮಾ ಮೊತ್ತವು ರೂ.10,000 ರಿಂದ ರೂ.10 ಲಕ್ಷಗಳವರೆಗೆ ಇರುತ್ತದೆ. ಈ ಯೋಜನೆಯ ಪ್ರೀಮಿಯಂ ಗಳನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು. ಆದರೆ ಈ ಕಂತುಗಳನ್ನು ಪಾವತಿಸುವ ಅವಧಿಯನ್ನು ಯೋಜನೆ ಖರೀದಿಸುವ ವೇಳೆಯಲ್ಲಿ ನಿರ್ಧರಿಸಬೇಕು.

* ಗ್ರಾಹಕರು ಪ್ರೀಮಿಯಂ ಪಾವತಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಕೂಡ ಪಡೆಯುತ್ತಾರೆ. ಒಂದು ವೇಳೆ ಪಾಲಿಸಿ ಅವಧಿಯಲ್ಲಿ ಡೀಫಾಲ್ಟ್ ಆಗಿದ್ದಲ್ಲಿ, ಪಾಲಿಸಿದಾರರು ಬಾಕಿ ಇರುವ ಪ್ರೀಮಿಯಂ ಪಾವತಿಸಿ ಮತ್ತೆ ವಿಮೆಯನ್ನು ನವೀಕರಿಸಲು ಅವಕಾಶವಿದೆ

* ಒಬ್ಬ ವ್ಯಕ್ತಿಯು 19 ನೇ ವಯಸ್ಸಿನಲ್ಲಿ ಗ್ರಾಮ ಸುರಕ್ಷಾ ಪಾಲಿಸಿಯಲ್ಲಿ 10 ಲಕ್ಷ ರೂಪಾಯಿ ಯೋಜನೆ ವಿಮಾ ಮೊತ್ತಕ್ಕೆ ಹೂಡಿಕೆ ಮಾಡಲು ಬಯಸಿದರೆ ಮಾಸಿಕ ಪ್ರೀಮಿಯಂ 55 ವರ್ಷದವರೆಗಾದರೆ 1,515 ರೂ., 58 ವರ್ಷಕ್ಕಾದರೆ 1,463 ಮತ್ತು 60 ವರ್ಷದವರೆಗಾದರೆ 1,411 ರೂ. ಬೀಳುತ್ತದೆ. ಅಂತೆಯೇ 55 ವರ್ಷಗಳ ವಿಮೆಗೆ ಮೆಚ್ಯೂರಿಟಿ ಲಾಭ ರೂ. 31.60 ಲಕ್ಷಗಳು, 58 ವರ್ಷಗಳ ಪಾಲಿಸಿಗೆ ರೂ. 33.40 ಲಕ್ಷ. 60 ವರ್ಷಗಳ ಮೆಚುರಿಟಿ ಲಾಭ ರೂ.34.60 ಲಕ್ಷಗಳಾಗಿರುತ್ತದೆ.

* ಸೆಕ್ಷನ್ 80C ಮತ್ತು ಸೆಕ್ಷನ್ 88 ರ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಆದಾಯ ತೆರಿಗೆ ಕಾಯಿದೆ 1961 ರ ಅಡಿಯಲ್ಲಿ ಪಡೆಯಬಹುದು.

* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ. ವಿಮಾದಾರರ ಮರಣದ ನಂತರ, ಕುಟುಂಬದ ಸದಸ್ಯರು ಅಥವಾ ಪಾಲಿಸಿದಾರರ ನಾಮಿನಿಯು ಅನ್ವಯವಾಗುವ ಬೋನಸ್‌ಗಳ ಜೊತೆಗೆ ಸಂಪೂರ್ಣ ವಿಮಾ ಮೊತ್ತವನ್ನು ಪಡೆಯುತ್ತಾರೆ. ಸ್ವೀಕರಿಸಿದ ಪ್ರಯೋಜನವು ಬಾಕಿ ಇರುವ ಪ್ರೀಮಿಯಂಗಳನ್ನು ಪಾವತಿಸಿದ ಮತ್ತು ವಿಮಾ ಪಾಲಿಸಿಯನ್ನು ಸರೆಂಡರ್ ಮಾಡದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

* ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಕೂಡ ಈ ಯೋಜನೆ ಖರೀದಿಸಬಹುದು. ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಶಾಖೆಗೆ ಭೇಟಿ ನೀಡಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಗ್ರಾಮ ಸುರಕ್ಷಾ ವಿಮಾ ಯೋಜನೆ ಖರೀದಿಸಿ ಅಥವಾ ಆಫ್ಲೈನ್ ನಲ್ಲಿ ಅಂಚೆ ಇಲಾಖೆ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಖರೀದಿಸಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment