post office
ಅಂಚೆ ಕಚೇರಿಗಳು (Post Office) ಈಗ ಬ್ಯಾಂಕಿಂಗ್ ಸೌಲಭ್ಯವನ್ನು ಕೂಡ ಒದಗಿಸುತ್ತಿದೆ. ಹಣಕಾಸು ವಿಷಯದ ಕುರಿತಾಗಿ ಬಡ ಹಾಗೂ ಮಾಧ್ಯಮ ವರ್ಗದ ಜನತೆಗೆ ಇರುವ ಅಸುರಕ್ಷತೆಗೆ ಇದು ಪರಿಹಾರ ಎಂದೇ ಹೇಳಬಹುದು. ಯಾಕೆಂದರೆ ಅಂಚೆ ಕಚೇರಿಗಳು ಕೇಂದ್ರ ಸರ್ಕಾರದಡಿಯಲ್ಲಿ (ಕೇಂದ್ರ ಸರ್ಕಾರ) ಕಾರ್ಯನಿರ್ವಹಿಸುವುದರಿಂದ ಇಲ್ಲಿ ಉಳಿತಾಯ ಅಥವಾ ಹೂಡಿಕೆ ಮಾಡುವ ಯೋಜನೆಗೆ ಸರ್ಕಾರವೇ ನೂರಕ್ಕೆ ನೂರರಷ್ಟು ಗ್ಯಾರಂಟಿ ಇರುತ್ತದೆ.
ಕೇಂದ್ರ ಸರ್ಕಾರವು ಕೂಡ ಅಂಚೆ ಕಚೇರಿಗಳ ಮುಖೇನ ಸಮಾಜದ ಪ್ರತಿವರ್ಗಕ್ಕೂ ಕೈಗೆಟಕುವಂತಹ ಅನುಕೂಲಕರವಾದ ಹತ್ತಾರು ಸಣ್ಣ ಉಳಿತಾಯ ಯೋಚನೆಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ಸುಕನ್ಯ ಸಮೃದ್ಧಿ ಯೋಜನೆ(SSY), ನ್ಯಾಷನಲ್ ಪೆನ್ಷನ್ ಸ್ಕೀಮ್(NPS), ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF), ಕಿಸಾನ್ ವಿಕಾಸ್ ಪತ್ರ(KVP), ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ(POMIS), ನಿಶ್ಚಿತ ಠೇವಣಿ (FD Scheme), ರಿಕರಿಂಗ್ ಡೆಪಾಸಿಟ್ (RD Scheme), ಇನ್ನೂ ಇತ್ಯಾದಿ ಹೆಸರಿಸಬಹುದು.
ಇದೆಲ್ಲದರಲ್ಲೂ ಬಹಳ ವಿಶೇಷವಾದ ಕೇವಲ ರೂ.330 ಉಳಿಕೆ ಮಾಡುವ ಮೂಲಕ ರೂ.16 ಲಕ್ಷ ಹಣ ಗಳಿಸಬಹುದಾದಂತಹ ಅಂಚೆ ಕಛೇರಿ ರಿಕರಿಂಗ್ ಡೆಪಾಸಿಟ್ ಸ್ಕೀಮ್ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಕಡಿಮೆ ಸಮಯದಲ್ಲಿ ಕಡಿಮೆ ಉಳಿತಾಯಕ್ಕೆ ಹೆಚ್ಚು ಲಾಭ ಪಡೆಯಲು ಅತ್ಯುತ್ತಮ ಯೋಜನೆ ಇದಾಗಿದೆ, ಯೋಜನೆ ಕುರಿತ ಪ್ರಮುಖ ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- Army: 8000 ಆರ್ಮಿ ಸ್ಕೂಲ್ ಟೀಚರ್ ನೇಮಕಾತಿಗೆ ಅರ್ಜಿ ಆಹ್ವಾನ ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ.!
* ಅಂಚೆ ಕಚೇರಿಯಲ್ಲಿ ನಿಶ್ಚಿತ ಠೇವಣಿ ಯೋಜನೆಯಲ್ಲಿ ಒಂದು ವರ್ಷಕ್ಕೆ, ಎರಡು ವರ್ಷಕ್ಕೆ, ಮೂರು ವರ್ಷಕ್ಕೆ ಅಥವಾ ಐದು ವರ್ಷಗಳ ಅವಧಿಗೆ ಒಮ್ಮೆ ತಮ್ಮ ಬಳಿ ಇರುವ ಹಣವನ್ನು ಠೇವಣಿ ಇಟ್ಟು ಅದಕ್ಕ ಅನ್ವಯವಾಗುವ ಬಡ್ಡಿ ದರದೊಂದಿಗೆ ಮೆಚುರಿಟಿ ವೇಳೆ ಹೂಡಿಕೆ ಮೊತ್ತವನ್ನು ಹಿಂಪಡೆಯುವ ಅನುಕೂಲತೆ ಇರುತ್ತದೆ ಅಥವಾ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಲ್ಲಿ ಐದು ವರ್ಷಗಳಿಗೆ ಹಣ ಇಟ್ಟು ಪ್ರತಿ ತಿಂಗಳು ಅದಕ್ಕನ್ವಯವಾಗುವ ಬಡ್ಡಿದರವನ್ನು ಉಳಿತಾಯ ಖಾತೆಗೆ ಪಡೆಯಬಹುದಾದ ಮತ್ತು 5 ವರ್ಷಗಳಾದ ಬಳಿಕ ಠೇವಣಿಯನ್ನು ಹಿಂಪಡೆಯುವ ಆಪ್ಷನ್ ಇರುತ್ತದೆ.
* ಆದರೆ ಈ RD Scheme ನಲ್ಲಿ ಐದು ವರ್ಷಗಳವರೆಗೆ ಪ್ರತಿ ತಿಂಗಳು ಒಂದು ನಿಶ್ಚಿತ ಮೊತ್ತದ ಹಣವನ್ನು ನೀವು ನಿಗದಿತ ದಿನಾಂಕದಂದು ಪ್ರತಿ ತಿಂಗಳು ಠೇವಣಿ ಕಟ್ಟಬೇಕು. ಸಾಮಾನ್ಯವಾಗಿ 1-15 ಅಥವಾ 15-30 ಈ ದಿನಾಂಕದಲ್ಲಿ ಕಟ್ಟಲು ಸೂಚಿಸಲಾಗಿರುತ್ತದೆ ತಪ್ಪಿದಲ್ಲಿ 1% ದಂಡದೊಂದಿಗೆ ಕಟ್ಟಬೇಕಾಗುತ್ತದೆ.
* ಇದು ಐದು ವರ್ಷಗಳ ಯೋಜನೆ ಆಗಿರುತ್ತದೆ
* ಈ ಯೋಜನೆಗೆ 5.8% – 6.8% ಬಡ್ಡಿದರ ನಿಗದಿಯಾಗಿರುತ್ತದೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಇದು ಪರಿಷ್ಕೃತವಾಗುತ್ತಿರುತ್ತದೆ.
* ಕನಿಷ್ಠ ರೂಂ.100 ರಿಂದ ಗರಿಷ್ಠ ಮಿತಿ ಇಲ್ಲದೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
ಈ ಸುದ್ದಿ ಓದಿ:- Teacher 2,439 ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ.! SSLC, PUC ಆದವರು ಅರ್ಜಿ ಹಾಕಿ.!
* ಈ ಯೋಜನೆಯಡಿ ಸಾಲ ಸೌಲಭ್ಯ ಕೂಡ ಲಭ್ಯವಿದೆ, ಒಂದು ವರ್ಷ ತುಂಬಿದ ಬಳಿಕ ನಿಮ್ಮ ಠೇವಣಿಯ ಶೇ. 50% ನೀವು ಸಾಲವಾಗಿ ಪಡೆಯಬಹುದು. ಅದೇ ರೀತಿ ನಿಮ್ಮ RD ಯೋಜನೆಗೆ ಅನ್ವಯವಾಗುವ ಬಡ್ಡಿದರಕ್ಕಿಂತ 2% ಹೆಚ್ಚಿಗೆ ಬಡ್ಡಿದರ ನೀವು ಪಡೆಯುವ ಸಾಲಕ್ಕೆ ಅನ್ವಯವಾಗುತ್ತದೆ. ಆದರೂ ಇತರೆ ಬ್ಯಾಂಕ್ ಗಳಿಗೆ ಹೋಲಿಸಿದರೆ ಇದು ಕಡಿಮೆ ಎಂದು ಹೇಳಬಹುದು.
* ನೀವೇನಾದರೂ ಯೋಜನೆಯ ಮಧ್ಯದಲ್ಲಿ ಯೋಜನೆ ರದ್ದು ಮಾಡಿಸಲು ಹೆಚ್ಚಿಸಿದರೆ ಮೂರು ವರ್ಷಗಳಾದ ಬಳಿಕ ನಿಮ್ಮ ಯೋಜನೆಯನ್ನು ರದ್ದುಪಡಿಸಬಹುದು ಆದರೆ ನಿಮ್ಮ ಉಳಿತಾಯ ಖಾತೆಗೆ ಅನ್ವಯವಾಗುವ ಬಡ್ಡಿದರವನ್ನು ಮಾತ್ರ ನೀಡಲಾಗುತ್ತದೆ.
ಉದಾಹರಣೆಯೊಂದಿಗೆ ವಿವರಿಸುವುದಾದರೆ ನೀವು ದಿನಕ್ಕೆ ನಿಮ್ಮದಲ್ಲ ಎಂದು ಕೇವಲ ರೂ.333 ಅಂದರೆ ತಿಂಗಳಿಗೆ ರೂ.10,000 ಉಳಿತಾಯ ಮಾಡಿದರೆ ಸಾಕು ರೂಂ.1,20,000 ಉಳಿತಾಯವಾಗುತ್ತದೆ. ಐದು ವರ್ಷಕ್ಕೆ ಇದು ರೂ.6 ಲಕ್ಷಗಳಾಗಿರುತ್ತದೆ.
ನೀವೇನಾದರೂ ಇದನ್ನು 10 ವರ್ಷಗಳಿಗೆ ವಿಸ್ತರಿಸಲು ಯೋಜಿಸಿದರೆ ರೂ.12 ಲಕ್ಷ ರೂಪಾಯಿ ನಿಮ್ಮ ಉಳಿತಾಯ ಆಗಿರುತ್ತದೆ ಮತ್ತು ಈ ಹಣಕ್ಕೆ ನೀವು ರೂಂ.4 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬಡ್ಡಿ ರೂಪದಲ್ಲಿ ಪಡೆಯುತ್ತೀರಿ. ಒಟ್ಟಾರೆಯಾಗಿ ರೂ.16 ಲಕ್ಷಕ್ಕಿಂತ ಹೆಚ್ಚು ಹಣ ಯೋಜನೆ ಮೆಚುರಿಟಿ ವೇಳೆಯಲ್ಲಿ ನಿಮ್ಮ ಕೈ ಸೇರುತ್ತದೆ. ಈ ಯೋಜನೆ ಕುರಿತ ಯಾವುದೇ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.