Post office: ಪೋಸ್ಟ್ ಆಫೀಸ್ ನಲ್ಲಿ 500 ರೂಪಾಯಿ ಕಟ್ಟಿ ಸಾಕು 35,000 ಸಿಗಲಿದೆ.!

Post office

ಅಂಚೆ ಕಚೇರಿಗಳು (Post office) ಇಂದು ಕೇವಲ ಪತ್ರ ವ್ಯವಹಾರಕ್ಕೆ ಮಾತ್ರವಲ್ಲದೆ ಭಾರತೀಯ ಅಂಚೆ ಬ್ಯಾಂಕ್ (Indin Postal Bank) ಗಳಾಗಿ ಕೂಡ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್ ಖಾತೆಗಳಲ್ಲಿ ನಾವು ಪಡೆಯಬಹುದಾದ ಬಹುತೇಕ ಎಲ್ಲಾ ಸೌಲಭ್ಯಗಳನ್ನು ಅಂಚೆ ಬ್ಯಾಂಕ್ ಖಾತೆಗಳಲ್ಲೂ ಕೂಡ ಪಡೆಯಬಹುದು.

ಇಷ್ಟು ಮಾತ್ರವಲ್ಲದೆ ಬಡ ಹಾಗೂ ಮಧ್ಯಮ ವರ್ಗದವರು ಅನೇಕ ಸಣ್ಣ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳ ಪ್ರಯೋಜನವನ್ನು ಕೂಡ ಪಡೆಯಬಹುದು. ಅಂಚೆ ಕಚೇರಿಗಳು ಕೇಂದ್ರ ಸರ್ಕಾರದ ಹೊಣೆಯಾಗಿರುವುದರಿಂದ ನಿಮ್ಮ ಹಣಕಾಸಿಗೆ ಸರ್ಕಾರವೇ ಭದ್ರತೆ ನೀಡುತ್ತದೆ ಎಂದು ನಂಬಿ ನಿಶ್ಚಿಂತೆಯಾಗಿರಬಹುದು.

WhatsApp Group Join Now
Telegram Group Join Now

ಹೀಗಾಗಿ ಅಂಚೆ ಕಚೇರಿಯ ವಿಶೇಷ ಯೋಜನೆಗಳಲ್ಲಿ ಒಂದಾದ RD ಯೋಜನೆ (RD Scheme) ಅಂದರೆ ತಿಂಗಳಿಗೆ ರೂ.500 ರೂಪಾಯಿ ಹೂಡಿಕೆ ಮಾಡಿ ಅಂತ್ಯದಲ್ಲಿ ರೂ.35,000 ಕ್ಕಿಂತ ಹೆಚ್ಚಿನ ಹಣ ಪಡೆಯಬಹುದಾದ ಒಂದು ವಿಶೇಷ ಯೋಜನೆ ಬಗ್ಗೆ ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಯೋಜನೆ ಹೆಸರು:- ಅಂಚೆ ಕಚೇರಿ ಮರುಕಳಿಸುವ ಠೇವಣಿ (recurring deposit) ಯೋಜನೆ

ಯೋಜನೆ ಕುರಿತ ಪ್ರಮುಖ ಸಂಗತಿಗಳು:-

* ಭಾರತೀಯ ನಾಗರಿಕರಾದ ಯಾವುದೇ ವ್ಯಕ್ತಿಯು ಈ ಯೋಜನೆಯ ಖಾತೆಯನ್ನು ಅಂಚೆ ಕಚೇರಿಯಲ್ಲಿ ತೆರೆಯಬಹುದು
* ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಕೂಡ ಅವರ ಪೋಷಕರ ಖಾತೆ ತೆರೆದು ಹೂಡಿಕೆ ಮಾಡಬಹುದು
* ತಿಂಗಳಿಗೆ ಕನಿಷ್ಠ ರೂ.100 ರಿಂದ ಗರಿಷ್ಠ ಮಿತಿ ಇಲ್ಲದೆ ಈ ಯೋಜನೆಯಡಿ ಉಳಿತಾಯ ಮಾಡಬಹುದು.

* ಪ್ರತಿ ತಿಂಗಳು 1-15ನೇ ತಾರೀಖಿನೊಳಗೆ ಅಥವಾ 15-30ನೇ ತಾರೀಖಿನ ಒಳಗೆ ಒಂದು ಗೊತ್ತುಪಡಿಸಿಕೊಂಡ ದಿನಾಂಕದಂದು ನೀವು ನಿಶ್ಚಯಿಸಿದ ಮೊತ್ತದ ಹಣವನ್ನು ಪ್ರತಿ ತಿಂಗಳೂ ನಿಮ್ಮ ಖಾತೆಗೆ ಜಮೆ ಮಾಡಬೇಕಿರುತ್ತದೆ
* ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳು ಅಥವಾ 60 ತಿಂಗಳು.

* ಪ್ರಸ್ತುತವಾಗಿ ಈ ಯೋಜನೆಗೆ 6.8% ಬಡ್ಡಿದರ ಇದೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವು ಪರೀಷ್ಕೃತಗೊಳ್ಳುತ್ತಿರುತ್ತದೆ
* ಯೋಜನೆ ಅಂತ್ಯದಲ್ಲಿ ನೀವು ಉಳಿತಾಯ ಮಾಡಿದ ಹಣಕ್ಕೆ ಈ ಬಡ್ಡಿ ದರದ ಅನ್ವಯವಾಗಿ ಸಿಗುವ ಲಾಭದೊಂದಿಗೆ ಹೂಡಿಕೆ ಹಣವನ್ನು ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಗೆ ಅಥವಾ ನೀವು ಸೂಚಿಸುವ ಉಳಿತಾಯ ಖಾತೆಗೆ ಡೆಪಾಸಿಟ್ ಮಾಡಲಾಗುತ್ತದೆ.

ಈ ಸುದ್ದಿ ಓದಿ:- UPI ಬಳಕೆದಾರರಿಗೆ ಶಾಕಿಂ’ಗ್ ನ್ಯೂಸ್.! ಇನ್ಮುಂದೆ ಡಿಜಿಟಲ್ ಪಾವತಿಗೆ ಶೇಕಡ 18%- GST ಟ್ಯಾಕ್ಸ್ ಕಡ್ಡಾಯ.!

* ಉದಾಹರಣೆಯೊಂದಿಗೆ ಹೇಳುವುದಾದರೆ ನೀವು ತಿಂಗಳಿಗೆ ರೂ.500 ರೂಯಯಈ ಯೋಜನೆಗೆ ಉಳಿತಾಯ ಮಾಡಿದ್ದರೆ 5 ವರ್ಷಗಳಿಗೆ ನಿಮ್ಮ ಉಳಿತಾಯದ ಹಣ ರೂ.30,000 ಆಗಿರುತ್ತದೆ ಈ ಹಣಕ್ಕೆ 6.7% ಬಡ್ಡಿದರದ ಅನುಗುಣವಾಗಿ ರೂ.5,681 ಸೇರಿಸಿ ಒಟ್ಟು ರೂ.35,681 ಡೆಪಾಸಿಟ್ ಮಾಡಲಾಗುತ್ತದೆ.

* ಒಂದು ವೇಳೆ ಯೋಜನೆ ಪೂರ್ತಿಗೊಳಿಸಲು ಸಾಧ್ಯವಾಗದೇ ಇದ್ದರೆ ಆರಂಭದಲ್ಲಿಯೇ ಕೆಲ ತಿಂಗಳ ಬಳಿಕ ಯೋಜನೆಗೆ ಹಣ ಹೂಡಿಕೆ ಮಾಡುವುದು ನಿಲ್ಲಿಸಿದರೆ 3 ವರ್ಷಗಳಾದ ಬಳಿಕ ನಿಮ್ಮ ಉಳಿತಾಯದ ಹಣವನ್ನು ಹಿಂಪಡೆಯಬಹುದು ಆದರೆ ಸಾಮಾನ್ಯ ಉಳಿತಾಯ ಖಾತೆಗೆ ಅನ್ವಯವಾಗುವ 4% ಬಡ್ಡಿದರದ ಪ್ರಕಾರವಾಗಿ ನಿಮ್ಮ ಹೂಡಿಕೆಗೆ ಬಡ್ಡಿ ರೂಪದ ಲಾಭ ಸಿಗುತ್ತದೆ.

* ಜಂಟಿಯಾಗಿ ಕೂಡ ಈ ಖಾತೆ ತೆರೆಯಬಹುದು, ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬೇಕಾದರೂ ಖಾತೆ ತೆರೆಯಬಹುದು.
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ ಒಂದು ವೇಳೆ ಯೋಜನೆ ಯಾವುದೇ ಹಂತದಲ್ಲಿ ವ್ಯಕ್ತಿ ಮೃ’ತಪಟ್ಟಿದರೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತವು ವ್ಯಕ್ತಿ ಸೂಚಿಸಿದ್ದ ನಾಮಿನಿಗೆ ಹೋಗುತ್ತದೆ.

ಖಾತೆ ತೆರೆಯಲು ಬೇಕಾಗುವ ದಾಖಲೆಗಳು:-

1. ಅಂಚೆ ಕಛೇರಿ ಉಳಿತಾಯ ಖಾತೆ
2. ಆಧಾರ್ ಕಾರ್ಡ್
3. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
4. ಮೊಬೈಲ್ ಸಂಖ್ಯೆ ಮತ್ತು ಸಹಿ
5. ಮೊದಲ ಕಂತಿನ ಹಣ
* ಯಾವುದೇ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment