ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದ್ದಾರೆ. ವಿದ್ಯಾರ್ಥಿಗಳು, ಗೃಹಿಣಿಯರು, ರೈತರು, ಕಾರ್ಮಿಕರು, ವೃದ್ದರು ಹೀಗೆ ಪ್ರತಿಯೊಂದು ವರ್ಗವನ್ನು ಕೂಡ ಗಮನದಲ್ಲಿಟ್ಟು ಕೊಂಡಿರುವ ಪ್ರಧಾನಿಗಳು ತಮ್ಮ ಸರ್ಕಾರದ ಮೂಲಕ ತಂದಿರುವ ಜನಪ್ರಿಯ ಯೋಜನೆಗಳಲ್ಲಿ ಕಾರ್ಮಿಕರಿಗೂ ಕೂಡ ಪಿಂಚಣಿ ನೀಡುವಂತಹ ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ಬಹಳ ವಿಶೇಷವಾದದ್ದು.
ಸಾಮಾಜಿಕ ಭದ್ರತಾ ಕಲ್ಯಾಣ ಯೋಜನೆಗಳಡಿ ಬರುವ ಈ ಯೋಜನೆ ಮೂಲಕ ಒಂದು ಕುಟುಂಬದಲ್ಲಿ ಪತಿ-ಪತ್ನಿ ಇಬ್ಬರು ಒಟ್ಟಿಗೆ ವಯಸ್ಸಾದ ನಂತರ ಮಾಸಿಕವಾಗಿ ರೂ.6,000 ದವರೆಗೆ ನಿಶ್ಚಿತ ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆಗೆ ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು ಎನ್ನುವ ಎಲ್ಲಾ ಡೀಟೇಲ್ಸ್ ಹೀಗಿದೆ.
ಯೋಚನೆಯ ಹೆಸರು:- ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ
ಅರ್ಹತೆಗಳು:-
* ಭಾರತೀಯ ನಾಗರಿಕರಿಗೆ ಮಾತ್ರ ಈ ಯೋಜನೆ ಪ್ರಯೋಜನ ಪಡೆಯಲು ಅವಕಾಶ
* ಅಸಂಘಟಿತ ವಲಯ ದೊರೆತೊಡುವ ಯಾವುದೇ ಕಾರ್ಮಿಕನು ಈ ಯೋಜನೆಗೆ ಅರ್ಜಿ ಸಲ್ಲಿಸಲು ನೋಂದಾಯಿಸಿಕೊಳ್ಳಬಹುದು ( ಹೂ ಮಾರುವವರು, ಹಣ್ಣು ಮಾಡುವವರು, ತಳ್ಳುಗಾಡಿ ವ್ಯಾಪಾರಿಗಳು, ಚಿಕ್ಕ ಕಿರಾಣಿ ಅಂಗಡಿ ಹೊಂದಿರುವವರು, ಬೀದಿ ಬಳಿ ವ್ಯಾಪಾರಿಗಳು, ಟೈಲರ್ ಗಳು, ಕೃಷಿ ಕಾರ್ಮಿಕರು, ಆಟೋ ಡ್ರೈವರ್ ಗಳು ಇತ್ಯಾದಿ ವರ್ಗ)
* ಮಾಸಿಕವಾಗಿ ರೂ.15,000 ಕ್ಕಿಂತ ಕಡಿಮೆ ಸಂಬಳ ಅಥವಾ ಆದಾಯ ಹೊಂದಿರುವಂತವರಾಗಿರಬೇಕು
* EPFO, ESIC, NPS ಇತ್ಯಾದಿ ಯಾವುದೇ ಸರ್ಕಾರಿ ಸೌಲಭ್ಯ ಹೊಂದಿರಬಾರದು
* ಇ-ಶ್ರಮ್ ಕಾರ್ಡ್ ಹೊಂದಿರಬೇಕು
* 18 ವರ್ಷ ಮೇಲ್ಪಟ್ಟು 40 ವರ್ಷ ವಯಸ್ಸಿನ ಒಳಗಿನವರಾಗಿರಬೇಕು
* ಪ್ರತಿ ತಿಂಗಳು ಈ ಯೋಜನೆಯಡಿ ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತದ ಹಣವನ್ನು ಉಳಿತಾಯ ಮಾಡಬೇಕು
ಪ್ರಯೋಜನಗಳು:-
* ಈ ಮೇಲೆ ತಿಳಿಸಿದಂತೆ 18 ರಿಂದ 40 ವರ್ಷ ವಯಸ್ಸಿನ ಒಳಗೆ ವಯಸ್ಸಿನ ಆಧಾರದ ಮೇಲೆ ಸರ್ಕಾರವು ಈ ಯೋಜನೆಗೆ ನಿಗದಿಪಡಿಸಿದ ಮೊತ್ತದ ಹಣವನ್ನು ಠೇವಣಿ ಮಾಡುತ್ತ ಬರಬೇಕು
* 60 ವರ್ಷ ತುಂಬಿದ ಬಳಿಕ ನಿಮ್ಮ ಉಳಿತಾಯಕ್ಕೆ ಅನುಗುಣವಾಗಿ ಕನಿಷ್ಠ ರೂ.3000 ದಿಂದ ನಿಶ್ಚಿತ ಠೇವಣಿ ಸಿಗುತ್ತದೆ. ಒಂದು ವೇಳೆ ಪತಿ ಹಾಗೂ ಪತಿ ಇಬ್ಬರೂ ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯಡಿ ಖಾತೆ ತೆರೆದರೆ ರೂ.6000 ಪಿಂಚಣಿ ಬರುತ್ತದೆ
* ಒಂದು ವೇಳೆ ಫಲಾನುಭವಿಯು ಮೃ’ತಪಟ್ಟಲ್ಲಿ ಸಂಗಾತಿಯು 50% ಪಿಂಚಣಿ ಪಡೆಯಲಿದ್ದಾರೆ
* ಜೀವನದ ಸಂಧ್ಯಾಕಾಲದಲ್ಲಿ ಯಾರ ಬೆಲೆಯೂ ಅವಲಂಬಿತರಾಗದೆ ದುಡಿಯುವ ವಯಸ್ಸಲ್ಲಿ ಉಳಿತಾಯ ಮಾಡಿದ ಹಣದ ಲಾಭವನ್ನು ಪಡೆಯುತ್ತ ಆರಾಮದಾಯಕವಾಗಿ ಜೀವನ ಕಳೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತರು ಹತ್ತಿರದಲ್ಲಿರುವ ಯಾವುದೇ CSC ಕೇಂದ್ರಗಳಲ್ಲಿ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
* ಅಥವಾ ನಿಮ್ಮ ವ್ಯಾಪ್ತಿಗೆ ಬರುವ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಪಾಸ್ಪೋರ್ಟ್ ಅಳತೆಯ ಫೋಟೋಗಳು
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಉಳಿತಾಯ ಖಾತೆ ಹಾಗೂ ನಾಮಿನಿ ವಿವರಗಳು