Property
ನಿಮ್ಮ ಭವಿಷ್ಯಕ್ಕಾಗಿ ಉಳಿಸಿದ ಹಣವನ್ನು ಹೂಡಿಕೆ ಮಾಡಲು ಬಯಸುವಿರಾ? ಭೂಮಿ ಅಥವಾ ಸೈಟ್ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಇತ್ತೀಚಿನ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ ಪ್ರತಿಯೊಬ್ಬರೂ ತಮ್ಮ ಮುಂದಿನ ಭವಿಷ್ಯಕ್ಕಾಗಿ ಯೋಚಿಸುತ್ತಾರೆ.
ತಮ್ಮ ಕುಟುಂಬ ಸದಾ ಸಂತೋಷವಾಗಿರಲೆಂದು ಆ ಮನೆಯ ಯಜಮಾನ ತಾನು ದುಡಿದ ಹಣದಲ್ಲಿ ಒಂದಷ್ಟು ಹೊಲ, ಮನೆ, ಆಸ್ತಿ ಅಥವಾ ಕೃಷಿ ಜಮೀನು ಖರೀದಿ ಮಾಡ್ತಾನೆ. ಇದು ಸುಲಭದ ಮಾತಲ್ಲ. ಇದು ನಮ್ಮ ಜೀವನದಲ್ಲಿ ಬೆವರು ಸುರಿಸಿ ಕಷ್ಟ ಪಟ್ಟು ಸಂಪಾದನೆ ಮಾಡುವ ಆಸ್ತಿಯಾಗಿರುತ್ತದೆ.
ಇದನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ. ಸಾಮಾನ್ಯವಾಗಿ ನಮ್ಮ ಬಳಿ ಇರುವ ಹಣವನ್ನು ಒಂದಲ್ಲ ಒಂದು ರೀತಿಯಲ್ಲಿ ಹೂಡಿಕೆ (investment) ಮಾಡಿ ಉಳಿತಾಯ (Savings ) ಮಾಡಲು ಬಯಸುತ್ತೇವೆ. ಕೆಲವರು ಹಣವನ್ನು ಹಾಗೆ ಬ್ಯಾಂಕಿನಲ್ಲಿ ಇಟ್ಟು ಬಡ್ಡಿ (bank deposit) ಪಡೆದುಕೊಂಡರೆ ಇನ್ನೂ ಕೆಲವರು ಚಿನ್ನದ ಮೇಲೆ ಹೂಡಿಕೆ (investment on gold) ಮಾಡುತ್ತಾರೆ.
ಮತ್ತೆ ಕೆಲವರು ಜಮೀನು ಮನೆಯಂತಹ ಆಸ್ತಿ (property purchase) ಖರೀದಿ ಮಾಡುತ್ತಾರೆ. ಆದರೆ ಇದೀಗ ಆಸ್ತಿ ಖರೀದಿ ಮಾಡುವುದು ಜನರಿಗೆ ದೊಡ್ಡ ತಲೆನೋವು ಆಗಲಿದೆ. ಯಾವುದೇ ರೀತಿಯ ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ಬಹಳ ಜಾಗರೂಕತೆಯಿಂದ ಇರಬೇಕು. ಯಾಕೆಂದರೆ ಆಸ್ತಿ ಖರೀದಿ ವಿಚಾರದಲ್ಲಿ ವಂಚನೆ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ಯಾರದ್ದೋ ಜಮೀನನ್ನು ಅಥವಾ ಫ್ಲಾಟ್ ಅನ್ನು ತಮ್ಮದೇ ಎಂದು ಮಾರಾಟ ಮಾಡುವ ವಂಚಕರು ಕೂಡ ಹೆಚ್ಚಾಗಿದ್ದಾರೆ ಇದೆಲ್ಲದಕ್ಕೂ ತಡೆ ಹಾಕುವುದಕ್ಕಾಗಿ ಸರ್ಕಾರ ಕೆಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ. ಹೌದು, ಈಗಿನ ಕಾಲದಲ್ಲಿ ಉಳಿತಾಯ ಮತ್ತು ಹೂಡಿಕೆ(Saving and Investment) ಎರಡೂ ಭವಿಷ್ಯದ ಭದ್ರತೆಗಾಗಿ ಅಗತ್ಯವಾದ ಅಂಶಗಳಾಗಿವೆ.
ಪ್ರತಿಯೊಬ್ಬರೂ ತಮ್ಮ ಆದಾಯದ ಒಂದು ಭಾಗವನ್ನು ಉಳಿಸುವ ಅಭ್ಯಾಸ ಮಾಡಬೇಕು. ಉಳಿತಾಯ ಮಾಡುವುದರಿಂದ, ನಾವು ಭವಿಷ್ಯದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳಿಗೆ ತಯಾರಾಗಬಹುದು. ಉದಾಹರಣೆಗೆ, ಕೆಲಸ ಕಳೆದುಕೊಂಡರೆ, ಆರೋಗ್ಯ ಸಮಸ್ಯೆಗಳು ಬಂದರೆ, ಅಥವಾ ಮಕ್ಕಳ ಶಿಕ್ಷಣಕ್ಕೆ ಹಣ ಬೇಕಾದರೆ, ಉಳಿತಾಯದ ಹಣವು ನಮಗೆ ತುಂಬಾ ಸಹಾಯಕವಾಗುತ್ತದೆ.
ಉಳಿತಾಯ ಮಾಡುವುದರ ಜೊತೆಗೆ, ಹೂಡಿಕೆ ಮಾಡುವುದು ಕೂಡ ಒಳ್ಳೆಯದು. ಹೂಡಿಕೆ ಮಾಡುವುದರಿಂದ, ನಮ್ಮ ಉಳಿತಾಯದ ಹಣವು ಹೆಚ್ಚಾಗುತ್ತದೆ. ಹೂಡಿಕೆಗೆ ಹಲವಾರು ವಿಧಾನಗಳಿವೆ. ಶೇರು, ಮ್ಯೂಚುವಲ್ ಫಂಡ್(Mutual fund), ಚಿನ್ನ(Gold), ಭೂಮಿ, ಸೈಟ್(Site) ಮುಂತಾದವುಗಳಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆ ಮಾಡುವಾಗ, ನಮ್ಮ ಆದಾಯ, ಆದಾಯದ ಮೂಲಗಳು, ವಯಸ್ಸು, ಹೂಡಿಕೆ ಗುರಿಗಳು ಮುಂತಾದ ಅಂಶಗಳನ್ನು ಪರಿಗಣಿಸಬೇಕು.
ದೊಡ್ಡ ಸಂಬಳ ಪಡೆಯುವವರು ತಮ್ಮ ಹಣವನ್ನು ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಸೈಟ್ ಖರೀದಿಸುತ್ತಾರೆ. ಮಧ್ಯಮ ವರ್ಗದವರು ತಮ್ಮ ಕುಟುಂಬದೊಂದಿಗೆ ಶಾಂತಿಯುತವಾಗಿ ವಾಸಿಸಲು ಸ್ವಂತ ಮನೆ ನಿರ್ಮಾಣಕ್ಕಾಗಿ ಸೈಟ್ ಖರೀದಿಸುತ್ತಾರೆ.
ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದು ಪ್ರತಿಯೊಬ್ಬರ ಆಸೆಯಾಗಿದೆ. ಸೈಟ್ ಕೊಳ್ಳುವುದು ಯಾವುದೇ ಒಂದು ಉತ್ಪನ್ನ ಅಥವಾ ಸೇವೆಯನ್ನು ಖರೀದಿಸುವಂತೆಯೇ. ಅದರಲ್ಲೂ ಯಾವುದೇ ಬದಲಾದ ನಿಯಮಗಳನ್ನು ತಿಳಿಯದೆ ಖರೀದಿಸುವುದು ಮೋಸಕ್ಕೆ ಕಾರಣವಾಗಬಹುದು. ಆದ್ದರಿಂದ, ಸೈಟ್ ಖರೀದಿಸುವ ಮೊದಲು ಅದರ ನಿಯಮಗಳನ್ನು ಎಚ್ಚರಿಕೆಯಿಂದ ಓದಿ ಅರ್ಥಮಾಡಿಕೊಳ್ಳುವುದು ಮುಖ್ಯ.
ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಹೊಸ ಬದಲಾವಣೆ
ಹೈಕೋರ್ಟ್(Highcourt) ಸೂಚನೆಯಂತೆ, ಆಸ್ತಿ ಖರೀದಿಸುವ ಮುಂಚಿತವಾಗಿ ಆಧಾರ್ ಕಾರ್ಡ್ ಪರಿಶೀಲನೆ(Aadhaar card verification) ಮಾಡುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಪರಿಶೀಲನೆ ಮಾಡದೆ ಸೈಟ್ ಮಾರಾಟ ಮಾಡಲು ಅವಕಾಶವಿಲ್ಲ.
ಈ ಹೊಸ ನಿಯಮವು ಆಸ್ತಿ ಖರೀದಿಸುವವರಿಗೆ ಯಾವುದೇ ರೀತಿಯ ನಷ್ಟ ಅಥವಾ ಮೋಸದಿಂದ ರಕ್ಷಿಸುತ್ತದೆ. ಭ್ರಷ್ಟಾಚಾರ(corruption) ವನ್ನು ಕಡಿಮೆ ಮಾಡಲು ಸಹ ಈ ನಿಯಮವು ಸಹಾಯ ಮಾಡುತ್ತದೆ.
ಆಧಾರ್ ಕಾರ್ಡ್ ಪರಿಶೀಲನೆ ಹೇಗೆ ಮಾಡುವುದು?
ಎಲ್ಲಾ ಭಾರತೀಯ ನಾಗರಿಕರಿಗೆ ಆಧಾರ್ ಇಂದು ಅತ್ಯಂತ ನಿರ್ಣಾಯಕ ದಾಖಲೆಗಳಲ್ಲಿ ಒಂದಾಗಿದೆ. ಇದು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇಂದು, ಭಾರತದಲ್ಲಿ ವಾಸಿಸುವ 90% ಕ್ಕಿಂತ ಹೆಚ್ಚು ಜನರು ತಮ್ಮ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಬಯಸುವವರು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ, ಆಧಾರ್ ಕಾರ್ಡ್ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.
ಆಧಾರ್ ಪರಿಶೀಲನೆ ಅಥವಾ ಆಧಾರ್ ಕಾರ್ಡ್ ಪರಿಶೀಲನೆಯು ನಿಮ್ಮ ಆಧಾರ್ ಕಾರ್ಡ್‌ನ ಅಸ್ತಿತ್ವವನ್ನು ಪರಿಶೀಲಿಸುವ ಪ್ರಕ್ರಿಯೆಯಾಗಿದೆ. ನಿಮ್ಮ 12-ಅಂಕಿಯ ಅನನ್ಯ ಆಧಾರ್ ಸಂಖ್ಯೆಯನ್ನು ಸಲ್ಲಿಸುವ ಮೂಲಕ ಪರಿಶೀಲನೆಯನ್ನು ಮಾಡಬಹುದು. ಅಧಿಕೃತ UIDAI ವೆಬ್‌ಸೈಟ್ ಮೂಲಕ ಆಧಾರ್ ಕಾರ್ಡ್ ಪರಿಶೀಲನೆಯನ್ನು ಸುಲಭವಾಗಿ ಆನ್‌ಲೈನ್‌ನಲ್ಲಿ ಮಾಡಬಹುದು.
UIDAI ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಅನ್ನು ನೀಡುವುದು ಮಾತ್ರವಲ್ಲದೆ ಭಾರತದಲ್ಲಿನ ಪ್ರತಿಯೊಬ್ಬ ಆಧಾರ್ ಕಾರ್ಡ್ ಹೊಂದಿರುವವರ ವಿವರಗಳನ್ನು ಸಹ ನಿರ್ವಹಿಸುತ್ತದೆ. ಆಧಾರ್ ಕಾರ್ಡ್‌ಗಾಗಿ ನೋಂದಾಯಿಸಿದ ನಂತರ ಮತ್ತು ಆಧಾರ್ ಸಂಖ್ಯೆಯನ್ನು ಪಡೆದ ನಂತರ ಒಬ್ಬರು ಅವನ ಅಥವಾ ಅವಳ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಪರಿಶೀಲಿಸಬಹುದು.
2016ರ ಯುಐಡಿಎಐ ನಿಂದ ಆಧಾರ್ ಪಡೆದುಕೊಂಡವರ ಪರಿಶೀಲನೆ ಮಾಡಲು ಅವರ ಮೊಬೈಲ್ ನಂಬರಿಗೆ ಓಟಿಪಿ (OTP) ಕಳುಹಿಸುವುದರ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನೆ ವೇಳೆ ಓಟಿಪಿ ಬಂದಲ್ಲಿ ಆಧಾರ್ ಕಾರ್ಡ್ ಸರಿಯಾಗಿದೆ ಎಂದು ತಿಳಿದುಕೊಳ್ಳಲಾಗುತ್ತದೆ.
ನಂತರ ಆಸ್ತಿ ಖರೀದಿಗೆ ಅನುವು ಮಾಡಿಕೊಡಲಾಗುತ್ತದೆ ಆದ್ದರಿಂದ, ನೀವು ಸೈಟ್ ಖರೀದಿಸಲು ಯೋಚಿಸುತ್ತಿದ್ದರೆ, ಮೊದಲು ಆಧಾರ್ ಕಾರ್ಡ್ ಪರಿಶೀಲನೆ ಮಾಡಿಸಿಕೊಳ್ಳಿ. ಇದರಿಂದ ನೀವು ಯಾವುದೇ ರೀತಿಯ ನಷ್ಟ ಅಥವಾ ಮೋಸದಿಂದ ರಕ್ಷಣೆ ಪಡೆಯುತ್ತೀರಿ.