Property ಜಮಿನು, ಸೈಟ್, ಮನೆ ಖರೀದಿದಾರರಿಗೆ ಗುಡ್ ನ್ಯೂಸ್ ಸ್ಥಗಿತಗೊಂಡಿದ್ದ ಆಸ್ತಿ ನೋಂದಣಿ ಕಾರ್ಯ ಮತ್ತೆ ಆರಂಭ.!

Property

ಜಮೀನು, ಸೈಟು, ಮನೆ ಮುಂತಾದ ಆಸ್ತಿ ಖರೀದಿಸಲು ಮುಂದಾಗಿದ್ದವರಿಗೆ ಹಾಗೂ ಮಾರಾಟದಾರರಿಗೆ ಕಳೆದೊಂದು ವಾರದಿಂದ ದಿಢೀರ್ ಎಂದು ಶಾ’ಕ್ ಎದುರಾಗಿತ್ತು. ಇದಕ್ಕೆ ಕಾರಣ ಇದ್ದಕ್ಕಿದ್ದ ಹಾಗೆ ಉಪ ನೋಂದಣಿ ಅಧಿಕಾರಿಗಳ ಸಂಘವು, ನೋಂದಣಿ ಕಾರ್ಯ ಸ್ಥಗಿತಗೊಳಿಸಿ ಸರ್ಕಾರ ಜಾರಿಗೆ ತಂದ ಹೊಸ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದದ್ದು.

ಅಷ್ಟಕ್ಕೂ ಇದಕ್ಕೆ ಕಾರಣ ಆಗಿದ್ದು ಅದೊಂದು ಕಾಯ್ದೆ, ಆದರೀಗ ಸದ್ಯಕ್ಕೆ ಎಲ್ಲವೂ ಸುಗಮವಾಗಿ ಪರಿಹಾರವಾಗಿದ್ದು ಗುರುವಾರದಿಂದ ಎಂದಿನಂತೆ ಎಲ್ಲಾ ನೋಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಕಾರ್ಯ ಸರಾಗವಾಗಿ ಜರುಗುಸುತ್ತಿದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಹೀಗಿದೆ ನೋಡಿ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ನೋಂದಣಿ ತಿದ್ದುಪಡಿ ಕಾಯ್ದೆ- 2023ಯ 22-ಬಿ ಎಂಬ ನೂತನ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ರಾಜ್ಯದಲ್ಲಿ ಈಗ ಯಾವುದೇ ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಹಾಗೂ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ. ಆದರೆ ಈ ಕಾರ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಮತ್ತು ನಕಲಿ ದಾಖಲೆ ಆಧಾರದ ಮೇಲೆಯೂ ನೋಂದಣಿ ಮಾಡಿಕೊಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಇದನ್ನು ನಿಯಂತ್ರಣಕ್ಕೆ ತರಲು ಸರ್ಕಾರವು ಈ ಮೇಲೆ ತಿಳಿಸಿದ ಕಾನೂನು ರೂಪಿಸಿತು. ಇದರ ಪ್ರಕಾರವಾಗಿ ರಾಜ್ಯದಲ್ಲಿ ನಕಲಿ ದಸ್ತಾವೇಜು ನೋಂದಣಿಯಾದರೆ ಸಂಬಂಧಪಟ್ಟ ಉಪ ನೋಂದಣಾಧಿಕಾರಿಗೆ ಜೈಲು ಶಿಕ್ಷೆ ವಿಧಿಸುವ ನಿಯಮ ಇದರಲ್ಲಿತ್ತು. ಆದರೀಗ ರಾಜ್ಯದಲ್ಲಿ ಈ ಈಗ ಇದನ್ನು ವಿರೋಧಿಸಿ ಸೋಮವಾರದಿಂದ ದಸ್ತಾವೇಜು ನೋಂದಣಿ ಸ್ಥಗಿತಗೊಳಿಸಿದ್ದ ಉಪ ನೋಂದಣಾಧಿಕಾರಿಗಳ ಸಂಘವು ಪ್ರತಿಭಟನೆ ನಡೆಸುತ್ತಿದೆ.

ಇದರಿಂದ ಕಳೆದೊಂದು ವಾರದಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಆಧುನಿಕ ಅಂತಿಮವಾಗಿ ನೋಂದಣಿ ಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಾದ ಕೆ ಎ ದಯಾನಂದ ಅವರು ಭರವಸೆ ನೀಡಿದ ಬಳಿಕ ಪೂರ್ಣ ಪ್ರಮಾಣದಲ್ಲಿ ನೋಂದಣಿ ಕಾರ್ಯ ನಡೆಸುವುದಾಗಿ ಸಂಘವು ತಿಳಿಸಿದೆ.

ಈ ಕಾಯ್ದೆ ಬಗ್ಗೆ ಉಪ ನೋಂದಣಾಧಿಕಾರಿಗಳಿಗೆ ಉಂಟಾಗಿರುವ ಗೊಂದಲ ಬಗೆಹರಿಸುವವರೆಗೆ ಹಾಗೂ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವವರೆಗೆ ಕಾಯ್ದೆ ಅನುಷ್ಠಾನ ಮಾಡುವುದಿಲ್ಲ ಕೆ.ಎ. ದಯಾನಂದ ಅವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ.

ಕಾಯ್ದೆಯ ಬಗ್ಗೆ ಹೇಳುವುದಾದರೆ ಈ ನೋಂದಣಿ ಕಾಯ್ದೆಗೆ 22-ಬಿ ಹಾಗೂ 22ಸಿ ಸೇರಿಸುವ ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ ಈಗಾಗಲೇ ಬಿದ್ದಿತ್ತು ಇದರಿಂದ ಅ.19ರಂದು ರಾಜ್ಯ ಸರ್ಕಾರವು ರಾಜ್ಯಪತ್ರ ಪ್ರಕಟಿಸಿತ್ತು. ಇದರಡಿ ದಸ್ತಾವೇಜು ನೋಂದಣಿಗೆ ಮೊದಲು ಎಲ್ಲಾ ದಾಖಲೆಗಳ ನೈಜತೆಯನ್ನು ಉಪ ನೋಂದಣಾಧಿಕಾರಿಗಳು ಪರಿಶೀಲಿಸಬೇಕು.

ನಕಲಿ ದಸ್ತಾವೇಜು ನೋಂದಣಿ ಅಥವಾ ನಕಲಿ ದಾಖಲೆ ಬಳಸಿ ದಸ್ತಾವೇಜು ಸೃಷ್ಟಿಗೆ ಉಪ ನೋಂದಣಾಧಿಕಾರಿಗಳೇ ಹೊಣೆ. ಇಷ್ಟೆಲ್ಲ ಹಂತಗಳು ದಾಟಿ ಒಂದು ವೇಳೆ ಅವ್ಯವಹಾರಗಳು ನಡೆದದ್ದು ಸಾಬೀತಾದರೆ ಅವರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂಬುದು ಈ ಕಾಯ್ದೆಯಲ್ಲಿದೆ.

ಈ ಕಾನೂನಿನ ಬಗ್ಗೆ ತೀವ್ರ ಆತಂಕಕ್ಕೆ ಒಳಗಾದ ಉಪ ನೋಂದಣಾಧಿಕಾರಿಗಳು ನೂತನ ಅಧಿನಿಯಮದ ಅಡಿ ಯಾವ ದಸ್ತಾವೇಜುಗಳನ್ನು ಹೇಗೆ ನೋಂದಣಿ ಮಾಡಬೇಕು ಎಂಬ ಬಗ್ಗೆ ಮಾರ್ಗಸೂಚಿ ನೀಡಬೇಕು.

ಅಲ್ಲಿಯವರೆಗೆ ನೋಂದಣಿ ಕಾರ್ಯ ನಡೆಸುವುದಿಲ್ಲ ಎಂದು ನೋಂದಣಿ ಸ್ಥಗಿತಗೊಳಿಸಿದ್ದರು. ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ಸಂಘದ ಅಧ್ಯಕ್ಷ ಬಿ.ಎಚ್.ಶಂಕರೇಗೌಡ ಅಧ್ಯಕ್ಷತೆಯಲ್ಲಿ ಬುಧವಾರ ಐಜಿಆರ್ ಜತೆ ಸಭೆ ನಡೆಸಲಾಗಿ ನಂತರ ಬುಧವಾರ ಸಂಜೆ ಪ್ರಕರಣ ಸುಖಾಂತ್ಯ ಕಂಡಿತು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment