Railway
ಪ್ರತಿ ವರ್ಷವೂ ರೈಲ್ವೆ ಇಲಾಖೆ ವತಿಯಿಂದ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಕಾರ್ಯ ನಡೆಯುತ್ತದೆ. RRB ಜವಾಬ್ದಾರಿಯುತವಾಗಿ ತೆರವಾಗುವ ಹುದ್ದೆಗಳಿಗೆ ನೇಮಕಾತಿ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದು, ಈ ವರ್ಷದಲ್ಲಿ ಮತ್ತೊಂದು ನೋಟಿಫಿಕೇಶನ್ ಹೊರಟಿಸಿದೆ.
ಈ ಬಾರಿ ಅಂಡರ್ ಗ್ರಾಜುಯೇಟ್ ಅರ್ಹತೆಯ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯ (NTPC) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಈ ಕುರಿತು ಇದೀಗ ನೋಟಿಫಿಕೇಶನ್ ಕೂಡ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ಹುದ್ದೆ ಪಡೆಯಲು ಆಸಕ್ತಿ ಹೊಂದಿರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆ ಪಡೆಯಲು ಪ್ರಯತ್ನಿಸಬಹುದು, ಕರ್ನಾಟಕದಲ್ಲಿ ಕೂಡ ಸಾಕಷ್ಟು ಪೋಸ್ಟ್ ಗಳು ಇವೆ. ನೋಟಿಫಿಕೇಶನ್ ಕುರಿತಾದ ಪ್ರಮುಖ ಮಾಹಿತಿ ಹೀಗಿದೆ ನೋಡಿ.
ನೇಮಕಾತಿ ಸಂಸ್ಥೆ:- ರೈಲ್ವೆ ನೇಮಕಾತಿ ಮಂಡಳಿ (RRB)
ಉದ್ಯೋಗ ಸಂಸ್ಥೆ:- ಭಾರತೀಯ ರೈಲ್ವೆ ಇಲಾಖೆ
ಹುದ್ದೆ ಹೆಸರು:- ಅಂಡರ್ ಗ್ರಾಜುಯೇಟ್ ಕೆಟಗರಿ ಹುದ್ದೆಗಳು (NTPC)
ಒಟ್ಟು ಹುದ್ದೆಗಳ ಸಂಖ್ಯೆ:-
* ಭಾರತದಾದ್ಯಂತ 3445 ಹುದ್ದೆಗಳು
* ಕರ್ನಾಟಕದಲ್ಲಿ 60 ಹುದ್ದೆಗಳು
ಹುದ್ದೆಗಳ ವಿವರ:-
1. ಭಾರತದಾದ್ಯಂತ ಒಟ್ಟಾರೆಯಾಗಿ
* ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ – 2022
* ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 990
* ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ – 361
* ಟ್ರೈನ್ ಕ್ಲರ್ಕ್ – 72
2. ಕರ್ನಾಟಕದಲ್ಲಿ
* ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ – 48 ಹುದ್ದೆಗಳು
* ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ – 05 ಹುದ್ದೆಗಳು
* ಜೂನಿಯರ್ ಕ್ಲರ್ಕ್ ಕಮ್ – 07 ಹುದ್ದೆಗಳು
ವೇತನ ಶ್ರೇಣಿ:-
* ಆಯಾ ಹುದ್ದೆಗಳಿಗೆ ಅನುಗುಣವಾಗಿ ರೂ.19,900 ರಿಂದ ರೂ.1,12,400 ಮಾಸಿಕ ವೇತನ ಇರುತ್ತದೆ
* ಇದರೊಂದಿಗೆ ಇನ್ನಿತರ ಸರ್ಕಾರಿ ಸವಲತ್ತುಗಳು ಕೂಡ ಸಿಗುತ್ತದೆ.
ಉದ್ಯೋಗ ಸ್ಥಳ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಭಾರತದ ಯಾವುದೇ ರೈಲ್ವೆ ವಲಯದಲ್ಲಿ ಹುದ್ದೆ ಮಾಡಲು ತಯಾರಾಗಿರಬೇಕು.
ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ PUC (ಯಾವುದೇ ವಿಭಾಗದಲ್ಲಿ) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ0ಸಾಮಾನ್ಯ ವರ್ಗದವರಿಗೆ 33 ವರ್ಷಗಳು
* OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ
* SC/ST ಪ್ರವರ್ಗ-1 ರೈ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಕರ್ನಾಟಕದ ಅಭ್ಯರ್ಥಿಗಳು RRB ಕರ್ನಾಟಕ ಪ್ರಾದೇಶಿಕ ವೆಬ್ಸೈಟ್ https://www.rrbbnc.gov.in/ ಗೆ ಭೇಟಿ ನೀಡಿ.
* ಮುಖಪುಟದಲ್ಲಿ – Click Here To Apply For CEN 06/2024 ಲಿಂಕ್ ಹುಡುಕಿ ಕ್ಲಿಕ್ ಮಾಡಿ.
* RRB ನೇಮಕಾತಿಯ ಹೊಸ ಪೋರ್ಟಲ್ ಓಪನ್ ಆಗುತ್ತದೆ, Apply ಮೇಲೆ ಕ್ಲಿಕ್ ಮಾಡಿ, 2 ಆಯ್ಕೆಗಳು ಕಾಣುತ್ತದೆ,
1. Create An Account ಆಯ್ಕೆ ಮಾಡಿ ಕ್ಲಿಕ್ ಮಾಡಿ.
* ಆನ್ಲೈನ್ ರಿಜಿಸ್ಟ್ರೇಷನ್ ಫಾರ್ಮ್ ತೆರೆಯುತ್ತದೆ.
* ಕೇಳಲಾಗುವ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
* ಈ ಮೊದಲೇ ಪಡೆದ ರಿಜಿಸ್ಟ್ರೇಷನ್ ನಂಬರ್, ಪಾಸ್ವರ್ಡ್ ನೀಡಿ ಲಾಗಿನ್ ಆಗುವ ಮೂಲಕ ಅಪ್ಲಿಕೇಶನ್ ಸಲ್ಲಿಸಿ.
* ಅರ್ಜಿ ಸಲ್ಲಿಸುವಾಗ ಮೊದಲು ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
2. ಮೊದಲೇ RRB ವೆಬ್ಸೈಟ್ನಲ್ಲಿ ರಿಜಿಸ್ಟ್ರೇಷನ್ ಪಡೆದಿದ್ದಲ್ಲಿ Already Have An Account ಎಂದಿರುವಲ್ಲಿ ಕ್ಲಿಕ್ ಮಾಡಿ.
* ರಿಜಿಸ್ಟ್ರೇಷನ್ ನಂಬರ್, ಪಾಸ್ವರ್ಡ್ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಶುಲ್ಕ:-
* ಸಾಮಾನ್ಯ ಹಾಗೂ OBC ವರ್ಗದ ಅಭ್ಯರ್ಥಿಗಳಿಗೆ ರೂ.500.
* SC / ST / ಮಾಜಿ ಸೈನಿಕ / PWD / ಮಹಿಳಾ / ಟ್ರಾನ್ಸ್ಜೆಂಡರ್ / EWS ವರ್ಗದ ಅಭ್ಯರ್ಥಿಗಳಿಗೆ ರೂ.250.
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ನೇರ ಸಂದರ್ಶನ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 21-09-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20-10-2024