Railway Jobs
ರೈಲ್ವೆ ನೇಮಕಾತಿ ಮಂಡಳಿ (Railway Recruitment Board- RRB) ಭಾರತೀಯ ರೈಲ್ವೆ(Indian Railways)ಯ ವಿವಿಧ ವಲಯಗಳಲ್ಲಿ ಜೂನಿಯರ್ ಎಂಜಿನಿಯರ್ಗಳು(Junior Engineer) ಮತ್ತು ಇತರ ತಾಂತ್ರಿಕ ಹುದ್ದೆ(Technical post)ಗಳ ನೇಮಕಾತಿ(recruitment)ಗೆ ಅಧಿಸೂಚನೆ ಹೊರಡಿಸಿದೆ.
ಈ ಸುದ್ದಿ ಓದಿ:- Nurse Recruitment: 1200 ಸರ್ಕಾರಿ ನರ್ಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.! ವೇತನ:- 31,100
ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್, ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್, ಕೆಮಿಕಲ್ ಸೂಪರ್ವೈಸರ್ (ರಿಸರ್ಚ್) ಮತ್ತು ಮೆಟಲರ್ಜಿಕಲ್ ಸೂಪರ್ವೈಸರ್ (ರಿಸರ್ಚ್) ಸೇರಿದಂತೆ 7,951 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ನೇಮಕಾತಿ ಡ್ರೈವ್ ಹೊಂದಿದೆ.
ಅರ್ಜಿ ಸಲ್ಲಿಸುವುದು ಯಾವಾಗ?
ಆನ್ಲೈನ್ ಅರ್ಜಿ ಪ್ರಕ್ರಿಯೆ ಜುಲೈ 30 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 29 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಪ್ರದೇಶಕ್ಕೆ ಸಂಬಂಧಿಸಿದ ಆರ್‌ಆರ್ಬಿ ವಲಯ ವೆಬ್ಸೈಟ್ನಲ್ಲಿ ಸಕ್ರಿಯ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಹತಾ ಮಾನದಂಡಗಳು
- – ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 36 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
– ವಿದ್ಯಾರ್ಹತೆ: ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಅಥವಾ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಡಿಪ್ಲೊಮಾ ಪಡೆದಿರಬೇಕು.
ರೈಲ್ವೆಯ ಜೆಇ, ಸೂಪರ್‌ವೈಸರ್, ಸಹಾಯಕ, ಇತರೆ ಹುದ್ದೆಗಳ ಆನ್‌ಲೈನ್ ಅರ್ಜಿ ವಿಧಾನ
- – ಕರ್ನಾಟಕದ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ https://rrbbnc.gov.in/ ಗೆ ಭೇಟಿ ನೀಡಿ.
– ತೆರೆದ ವೆಬ್‌ಪುಟದಲ್ಲಿ ‘Click Here to Apply For CEN 03/2024’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಮತ್ತೊಂದು ಹೊಸ ವೆಬ್‌ಪುಟ ತೆರೆಯುತ್ತದೆ.
– ಈ ವೆಬ್‌ಪುಟದ ಮೇಲ್ಭಾದಲ್ಲಿಯೇ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ. - – ಎರಡು ಆಯ್ಕೆಗಳು ಪ್ರದರ್ಶಿತವಾಗುತ್ತವೆ.
– ನೀವು ಈಗಾಗಲೇ ರೈಲ್ವೆಯ ಈ ವೆಬ್‌ಸೈಟ್‌ನಲ್ಲಿ ಈ ಹಿಂದಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರಿಜಿಸ್ಟ್ರೇಷನ್ ಪಡೆದಿದ್ದಲ್ಲಿ ‘Already Have An Account’ ಎಂದಿರುವಲ್ಲಿ ಕ್ಲಿಕ್ ಮಾಡಿ, ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.
– ರೈಲ್ವೆ ಹುದ್ದೆಗಳಿಗೆ ಇದೇ ಮೊದಲು ಅರ್ಜಿ ಹಾಕಲು ಮುಂದಾಗಿರುವವರು ‘ Create An Account’ ಎಂದಿರುವಲ್ಲಿ ಕ್ಲಿಕ್ ಮಾಡಿ. - – ಈ ಹಂತದಲ್ಲಿ ತೆರೆದ ವೆಬ್‌ಪುಟದಲ್ಲಿ ಅಭ್ಯರ್ಥಿಯ ಹಲವು ಬೇಸಿಕ್ ಡೀಟೇಲ್ಸ್ ಕೇಳಲಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.
– ನಂತರ ಲಾಗಿನ್ ಡೀಟೇಲ್ಸ್ ನಿಮಗೆ ಸಿಗಲಿದೆ.
– ಮತ್ತೆ ಲಾಗಿನ್ ಆಗುವ (ಯೂಸರ್‌ನೇಮ್, ಪಾಸ್‌ವರ್ಡ್ ನೀಡಿ) ಮೂಲಕ ಹುದ್ದೆ ಆಯ್ಕೆ ಮಾಡಿ, ಕೇಳಲಾದ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.
– ಆನ್‌ಲೈನ್ ಮೂಲಕವೇ ಅಪ್ಲಿಕೇಶನ್ ಶುಲ್ಕ ಪಾವತಿ ಮಾಡಿ.
– ಈ ಹಂತಗಳು ಮುಗಿದ ನಂತರ ಮುಂದಿನ ಉಪಯೋಗಕ್ಕಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಶುಲ್ಕ
- – ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ.
– ಎಸ್ಸಿ, ಎಸ್ಟಿ, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ 250 ರೂ.
ಅರ್ಜಿ ನಮೂನೆಯಲ್ಲಿ ಯಾವುದೇ ತಿದ್ದುಪಡಿಗಳಿಗೆ 250 ರೂ.ಗಳ ಶುಲ್ಕದ ಅಗತ್ಯವಿದೆ.
ವೇತನ
- ಜೂನಿಯರ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,400 ರೂ.ಗಳ ಮೂಲ ವೇತನ ಮತ್ತು ವಿವಿಧ ಭತ್ಯೆಗಳು ಮತ್ತು ಪ್ರಯೋಜನಗಳನ್ನು ನೀಡಲಾಗುವುದು.
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ