Railway Jobs
ಭಾರತೀಯ ರೈಲ್ವೇ(Indian Railways) ನಿರುದ್ಯೋಗಿಗಳಿಗೆ (unemployed) ಒಳ್ಳೆಯ ಸುದ್ದಿ ನೀಡಿದ್ದು, ಬೃಹತ್ ಉದ್ಯೋಗಗಳ ಭರ್ತಿ(Filling of jobs)ಗೆ ಅಧಿಸೂಚನೆ(Notification)ಯನ್ನ ಬಿಡುಗಡೆ ಮಾಡಲು ಸಿದ್ಧವಾಗಿದೆ. ಭಾರತೀಯ ರೈಲ್ವೆಯು ಟಿಕೆಟ್ ಕಲೆಕ್ಟರ್ (Ticket Collector- TC) ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ(Recruitment Process)ಯನ್ನ ಪ್ರಾರಂಭಿಸಲಿದೆ.
ರೈಲ್ವೆ ನೇಮಕಾತಿ ಮಂಡಳಿ (Railway Recruitment Board- RRB) 11,250 ಹುದ್ದೆಗಳನ್ನ ಭರ್ತಿ ಮಾಡಲು ಅಧಿಸೂಚನೆಯನ್ನ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದರಿಂದಾಗಿ ರೈಲ್ವೇ ಉದ್ಯೋಗ(Railway Jobs)ಕ್ಕೆ ತಯಾರಿ ನಡೆಸುತ್ತಿರುವ ಯುವಕರು ಹಾಗೂ ಇತರೆ ನಿರುದ್ಯೋಗಿಗಳು ಕೂಡ ಈ ಉದ್ಯೋಗ ಪಡೆಯಲು ತೀವ್ರ ಪ್ರಯತ್ನ ಆರಂಭಿಸಿದ್ದಾರೆ.
ಈ ತಿಂಗಳಲ್ಲೇ ಈ ಟಿಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಉದ್ಯೋಗ ಭರ್ತಿ ಪ್ರಕ್ರಿಯೆ ಆರಂಭವಾಗಲಿದ್ದು, ಕಾರಣಾಂತರಗಳಿಂದ ವಿಳಂಬವಾಗಿದೆ. ಅಧಿಸೂಚನೆ ವಿವರಗಳಿಗಾಗಿ ರೈಲ್ವೆ ನೇಮಕಾತಿ ಮಂಡಳಿಯ indianrailways.gov.in ನ ಅಧಿಕೃತ ವೆಬ್‌ಸೈಟ್ ಪರಿಶೀಲಿಸುತ್ತಿರಿ.
ಅರ್ಹತೆಗಳು.?
ಇಲ್ಲಿಯವರೆಗಿನ ಟಿಸಿ ನೇಮಕಾತಿಯ ಅಧಿಕೃತ ಅಧಿಸೂಚನೆ ಪ್ರಕಾರ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ದೇಶದ ಯಾವುದೇ ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ 12ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಶೈಕ್ಷಣಿಕ ಅರ್ಹತೆಗಳನ್ನು ಹೊರತುಪಡಿಸಿ ಬಯೋಮಿತಿ ಅರ್ಹತೆಗಳನ್ನು ನೋಡುವುದಾದರೆ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 30 ವರ್ಷದ ನಡುವೆ ಇರಬೇಕು. ಆದರೆ, SC, ST, OBC ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ. ವಯೋಮಿತಿ ವಿವರಗಳನ್ನ ಅಧಿಸೂಚನೆಯಲ್ಲಿ ನಮೂದಿಸಲಾಗುವುದು.
ಭಾರತೀಯರು ಮತ್ತು ನಿಗದಿತ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಗಳನ್ನ ಹೊಂದಿರುವವರು ಈ ರೈಲ್ವೇ ಟಿಸಿ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಇಂಟರ್ ಮೀಡಿಯೇಟ್ ಅಥವಾ ಪದವಿ ವಿದ್ಯಾರ್ಹತೆ ಹೊಂದಿರಬೇಕು. ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆಯಲ್ಲಿ ಶೈಕ್ಷಣಿಕ ಅರ್ಹತೆಗಳನ್ನ ಸಹ ಉಲ್ಲೇಖಿಸುತ್ತದೆ.
ಅರ್ಜಿ ಶುಲ್ಕ
ಇಲ್ಲಿಯವರೆಗೆ ನೇಮಕಾತಿಯ ಅಧಿಕೃತ ಅಧಿಸೂಚನೆ ಪ್ರಕಾರ, ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ ವರ್ಗದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ವರ್ಗದ ಅಭ್ಯರ್ಥಿಗಳು ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ನೂರು ರೂಪಾಯಿಯ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಪ್ರಕ್ರಿಯೆ
ಅಧಿಕೃತ ಅಧಿಸೂಚನೆ ಹೊರಡಿಸಿದ ನಂತರ ರೈಲ್ವೆ ಟಿಸಿ ನೇಮಕಾತಿ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. RRB TC ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಸರಳವಾಗಿದ್ದರೂ, ನಮ್ಮ ಓದುಗರ ಅನುಕೂಲಕ್ಕಾಗಿ ನಾವು ವಿವರವಾದ ಮಾರ್ಗದರ್ಶಿಯನ್ನು ಒದಗಿಸಿದ್ದೇವೆ.
– ಮೊದಲು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ indianrailways.gov.in
– ಮುಖಪುಟದಲ್ಲಿ “RRB TC 2024 ನೇಮಕಾತಿ” ಜಾಹೀರಾತು ಬ್ಯಾನರ್ ಅಥವಾ ಅಪ್ಲಿಕೇಶನ್ ಲಿಂಕ್ ಅನ್ನು ಹುಡುಕಿ.
– ಲಿಂಕ್ ಅಥವಾ ಬ್ಯಾನರ್ ಅನ್ನು ಕ್ಲಿಕ್ ಮಾಡುವುದರಿಂದ ನಿಮ್ಮನ್ನು ಇನ್ನೊಂದು ಪುಟಕ್ಕೆ ಮರುನಿರ್ದೇಶಿಸುತ್ತದೆ.
– ಈ ಪುಟದಲ್ಲಿ, “ಆನ್‌ಲೈನ್‌ನಲ್ಲಿ ಅನ್ವಯಿಸು” ಆಯ್ಕೆಯನ್ನು ಕ್ಲಿಕ್ ಮಾಡಿ.
– ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳಂತಹ ಸರಿಯಾದ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ .
– ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
– ಅರ್ಜಿ ಶುಲ್ಕದ ಪಾವತಿಯನ್ನು ಪೂರ್ಣಗೊಳಿಸಿ.
– ಅಂತಿಮವಾಗಿ, ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪಾವತಿ/ಸಲ್ಲಿಕೆ ಪುಟದ ನಕಲನ್ನು ಇರಿಸಿ.
ರೈಲ್ವೇಯಲ್ಲಿ TC ಉದ್ಯೋಗಗಳಿಗೆ ಅಭ್ಯರ್ಥಿಗಳ ಭೌತಿಕ ಮಾನದಂಡಗಳನ್ನ ಸಹ ಪರಿಶೀಲಿಸಲಾಗುತ್ತದೆ. ಇದರರ್ಥ ನಿರ್ದಿಷ್ಟ ಎತ್ತರವನ್ನ ಹೊಂದಿರುವುದು ಮತ್ತು ದೃಷ್ಟಿಹೀನತೆ ಇಲ್ಲದಿರುವುದು. ಇದಕ್ಕಾಗಿ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯೂ ಇರುತ್ತದೆ. ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ರೈಲ್ವೆ ಟಿಕೆಟ್ ಕಲೆಕ್ಟರ್ ಹುದ್ದೆಯನ್ನು ಪಡೆಯಬಹುದು. ಒಮ್ಮೆ ಕೆಲಸಕ್ಕೆ ಸೇರಿದರೆ ಮಾಸಿಕ 35,000 ಸಂಬಳ ಪಡೆಯಬಹುದು. ಅಂದ್ಹಾಗೆ, ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಸಂಪೂರ್ಣ ವಿವರಗಳನ್ನ ತಿಳಿಯಲಾಗುವುದು.