Railway Recruitment
ಕೇಂದ್ರ ಸರ್ಕಾರದ ಹುದ್ದೆ ಬಯಸುವ ಎಲ್ಲಾ ಆಕಾಂಕ್ಷಿಗಳಿಗೂ ಭಾರತೀಯ ರೈಲ್ವೆ ಇಲಾಖೆ ವತಿಯಿಂದ (Indian Railway Department) ಸಿಹಿ ಸುದ್ದಿ ಇದೆ. ಅದೇನೆಂದರೆ, ಭಾರತೀಯ ರೈಲ್ವೆ ಇಲಾಖೆಯು ತನ್ನಲ್ಲಿ ಖಾಲಿ ಇರುವ NTPC ವರ್ಗದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
ಈ ಸಂಬಂಧ ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಸೂಚನೆ ಹೊರಡಿಸಿ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನ ಮಾಡಿದೆ. ಪದವಿ ಪೂರ್ವ ಹಾಗೂ ಪದವಿ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಪ್ರಯತ್ನಿಸಬಹುದಾಗಿದ್ದು ಒಟ್ಟಾರೆಯಾಗಿ 11558 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಕನ್ನಡವು ಸೇರಿದಂತೆ 15 ಕ್ಕೂ ಹೆಚ್ಚು ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಸಿಗುತ್ತಿರುವುದರಿಂದ ಹೆಚ್ಚಿನ ಕನ್ನಡಿಗರು ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಲಿ ಎನ್ನುವುದು ಈ ಅಂಕಣದ ಆಶಯವಾಗಿದೆ. ಆಸಕ್ತರಿಗಾಗಿ ನೋಟಿಫಿಕೇಶನ್ ಸಂಬಂಧಿಸಿದ ಹೆಚ್ಚಿನ ವಿವರ ಹೀಗಿದೆ ನೋಡಿ.
ಉದ್ಯೋಗ ಸಂಸ್ಥೆ:- ಭಾರತೀಯ ರೈಲ್ವೆ ಇಲಾಖೆ
ನೇಮಕಾತಿ ಸಂಸ್ಥೆ:- ರೈಲ್ವೆ ನೇಮಕಾತಿ ಮಂಡಳಿ
ಹುದ್ದೆ ಹೆಸರು:- NTPC ವರ್ಗದ ಹುದ್ದೆಗಳು
* ಪದವೀಧರ ವಿಭಾಗದ ಹುದ್ದೆಗಳು – 8113
* ಪದವಿಪೂರ್ವ ವಿಭಾಗದ ಹುದ್ದೆಗಳು – 3445
ಹುದ್ದೆಗಳ ವಿವರ:-
1. ಪದವೀಧರ ಹುದ್ದೆಗಳು
* ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕರು
* ಸ್ಟೇಷನ್ ಮಾಸ್ಟರ್
* ಗೂಡ್ಸ್ ಟ್ರೈನ್ ಮ್ಯಾನೇಜರ್
* ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್,
* ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್
2. ಪದವಿಪೂರ್ವ ಹುದ್ದೆಗಳು
* ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್
* ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್
* ಜೂನಿಯರ್ ಕ್ಲರ್ಕ್
* ಟ್ರೈನ್ ಕ್ಲರ್ಕ್
ಒಟ್ಟು ಹುದ್ದೆಗಳ ಸಂಖ್ಯೆ:- 11558 ಹುದ್ದೆಗಳು
ವೇತನ ಶ್ರೇಣಿ
* ಪದವೀಧರ ಮಟ್ಟದ ಹುದ್ದೆಗಳಿಗೆ ರೂ.29,200 ರಿಂದ ರೂ.35,400
* ಪದವಿ ಪೂರ್ವ ಮಟ್ಟದ ಹುದ್ದೆಗಳಿಗೆ ರೂ.19,900 ರಿಂದ ರೂ. 21,700
* ಇವುಗಳೊಂದಿಗೆ ತುಟ್ಟಿಭತ್ಯೆ (ಡಿಎ), ಸಾರಿಗೆ ಭತ್ಯೆ (TA), ಮನೆ ಬಾಡಿಗೆ ಭತ್ಯೆ (HRA), ಪಿಂಚಣಿ ಯೋಜನೆ ಮತ್ತು ವೈದ್ಯಕೀಯ ಪ್ರಯೋಜನಗಳು ಐಕೂಡ ಸಿಗಲಿದೆ
ಉದ್ಯೋಗ ಸ್ಥಳ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಭಾರತದಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಹುದ್ದೆ ನಿರ್ವಹಿಸಲು ತಯಾರಿರಬೇಕು
ಶೈಕ್ಷಣಿಕ ವಿದ್ಯಾರ್ಹತೆ:-
* ಪದವೀಧರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದಾದರು ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು
* ಪದವಿ ಪೂರ್ವ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ ದ್ವಿತೀಯ PUC ಉತ್ತೀರ್ಣನಾಗಿರಬೇಕು ಅಥವಾ ಅದಕ್ಕೆ ತತ್ಸಮನಾದ ವಿದ್ಯಾರ್ಹತೆಯನ್ನು ಪಡೆದಿರಬೇಕು
ವಯೋಮಿತಿ:-
1. ಪದವೀಧರ ಮಟ್ಟದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು
* ಕನಿಷ್ಠ ವಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ 33 ವರ್ಷಗಳು
2. ಪದವಿ ಪೂರ್ವ ಮಟ್ಟದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು
* ಕನಿಷ್ಠ ವಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ 36 ವರ್ಷಗಳು
ವಯೋಮಿತಿ ಸಡಿಲಿಕೆ:-
ಕೇಂದ್ರ ಸರ್ಕಾರದ ಇತರೆ ಹುದ್ದೆಗಳಿಗೆ ಅನ್ವಯವಾಗುವಂತೆ ವಯೋಮಿತಿ ಸಡಲಿಕೆ ನೀಡಲಾಗಿದೆ
ಅರ್ಜಿ ಶುಲ್ಕ:-
* ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ – ರೂ. 500
* SC/ST/PWD/ಮಹಿಳೆಯರಿಗೆ/ಮಾಜಿ-Sm/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/ಆರ್ಥಿಕವಾಗಿ ಹಿಂದುಳಿದವರಿಗೆ – ರೂ. 250
* ಈ ಶುಲ್ಕವನ್ನು 1 ನೇ ಹಂತದ CBT ಯಲ್ಲಿ ಕಾಣಿಸಿಕೊಂಡಾಗ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ಮರುಪಾವತಿಸಲಾಗುವುದು
ಅರ್ಜಿ ಸಲ್ಲಿಸುವ ವಿಧಾನ:-
https://www.rrbcdg.gov.in/ ಭೇಟಿಕೊಟ್ಟು ಮೊದಲಿಗೆ ನೋಂದಾಯಿಸಿಕೊಂಡು ಐಡಿ ಪಾಸ್ವರ್ಡ್ ಪಡೆದು ಬಳಿಕ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು
ಆಯ್ಕೆ ವಿಧಾನ:-
* ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ
* ಸ್ಕಿಲ್ ಟೆಸ್ಟ್
* ವೈದ್ಯಕೀಯ ಪರೀಕ್ಷೆ
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 21 ಸೆಪ್ಟೆಂಬರ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20 ಅಕ್ಟೋಬರ್, 2024.