Railway
ಭಾರತೀಯ ರೈಲ್ವೆ(Indian Railways)ಯು ವಿವಿಧ ವಲಯಗಳಲ್ಲಿ ಜೂನಿಯರ್ ಎಂಜಿನಿಯರ್‌ಗಳು(Junior Engineers) ಮತ್ತು ಇತರ ತಾಂತ್ರಿಕ ಹುದ್ದೆ(Technical post)ಗಳ ನೇಮಕಾತಿ(recruitment)ಗೆ ಅಧಿಸೂಚನೆ(Notification) ಹೊರಡಿಸಿದೆ.
ಈ ಸುದ್ದಿ ಓದಿ:- Gruha Arogya Scheme: ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ವೈದ್ಯರು.! ಚಿಕಿತ್ಸೆ ಜೊತೆ ಸಿಗಲಿದೆ ಉಚಿತ ಔಷಧಿ
ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್, ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್(Chemical and Metallurgical Assistant), ಕೆಮಿಕಲ್ ಸೂಪರ್ವೈಸರ್ (Chemical Supervisor)(ರಿಸರ್ಚ್) ಮತ್ತು ಮೆಟಲರ್ಜಿಕಲ್ ಸೂಪರ್ವೈಸರ್(Metallurgical Supervisor) (ರಿಸರ್ಚ್) ಸೇರಿದಂತೆ 7,951 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ನೇಮಕಾತಿ ಗುರಿ ಹೊಂದಿದೆ.
ಅರ್ಜಿ ಸಲ್ಲಿಸುವುದು ಯಾವಾಗ?
ಆನ್ಲೈನ್ ಅರ್ಜಿ ಪ್ರಕ್ರಿಯೆ ಜುಲೈ 30 ರಿಂದ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 29 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಪ್ರದೇಶಕ್ಕೆ ಸಂಬಂಧಿಸಿದ ಆರ್‌ಆರ್ಬಿ ವಲಯ ವೆಬ್ಸೈಟ್ನಲ್ಲಿ ಸಕ್ರಿಯ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು.
ಶೈಕ್ಷಣಿಕ ಅರ್ಹತೆ
ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ ಅಥವಾ ಪದವಿಯನ್ನು ಪೂರ್ಣಗೊಳಿಸಿರಬೇಕು. ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಬಿಸಿಎ/ಬಿಟೆಕ್ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ ಪೂರ್ಣಗೊಳಿಸಿದವರು ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಅರ್ಹತೆಗಳು
– ಮೇಲಿನ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ 36 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
– ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯ ಆಗಲಿದೆ.
– ಮಾಜಿ ಸೈನಿಕರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರಲಿದೆ. ಈ ಅಭ್ಯರ್ಥಿಗಳು ಒಬಿಸಿ ಕೆಟಗರಿಗೆ ಸೇರಿದ್ದಲ್ಲಿ 6 ವರ್ಷ, ಎಸ್‌ಸಿ/ ಎಸ್‌ಟಿ ಆಗಿದ್ದಲ್ಲಿ 8 ವರ್ಷ, ಪಿಡಬ್ಲ್ಯೂಡಿ ಆಗಿದ್ದಲ್ಲಿ 10 ವರ್ಷ ಸಡಿಲಿಕೆ ನಿಯಮ ಇರಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
– ನಿಮ್ಮ ವಲಯಕ್ಕಾಗಿ ಅಧಿಕೃತ ಆರ್‌ಆರ್ಬಿ ವೆಬ್ಸೈಟ್ಗೆ ಭೇಟಿ ನೀಡಿ.
– ಸಕ್ರಿಯಗೊಳಿಸಿದ ನಂತರ ಜೆಇ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
– ನಿಮ್ಮ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕದೊಂದಿಗೆ ನೋಂದಾಯಿಸಿ.
– ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
– ಅರ್ಜಿ ಶುಲ್ಕ ಪಾವತಿಸಿ.
– ಭವಿಷ್ಯದ ಬಳಕೆಗಾಗಿ ಸ್ವೀಕೃತಿ ನಮೂನೆಯನ್ನು ಡೌನ್ ಲೋಡ್ ಮಾಡಿ ಮತ್ತು ಉಳಿಸಿ.
ಈ ಸುದ್ದಿ ಓದಿ:- PM Shrama Yogi Maan Dhan scheme: ಕೇಂದ್ರ ಸರ್ಕಾರದಿಂದ ಹೊಸ ಪಿಂಚಣಿ ಯೋಜನೆ ಜಾರಿ ಪ್ರತಿ ವರ್ಷ 72,000 ಪಿಂಚಣಿ ಸಿಗಲಿದೆ.!
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ.
ಎಸ್ಸಿ, ಎಸ್ಟಿ, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ 250 ರೂ.
ಅರ್ಜಿ ನಮೂನೆಯಲ್ಲಿ ಯಾವುದೇ ತಿದ್ದುಪಡಿಗಳಿಗೆ 250 ರೂ.ಗಳ ಶುಲ್ಕದ ಅಗತ್ಯವಿದೆ.
ವೇತನ: ಜೂನಿಯರ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,400 ರೂ.ಗಳ ಮೂಲ ವೇತನ ಮತ್ತು ವಿವಿಧ ಭತ್ಯೆಗಳು ಮತ್ತು ಪ್ರಯೋಜನಗಳನ್ನು ನೀಡಲಾಗುವುದು.
ಪರೀಕ್ಷಾ ವಿಧಾನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಧಾರದ ಮೇಲೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಪ್ರಮಾಣಪತ್ರ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆಗಳು ಯಾವೆಲ್ಲ ಇರುತ್ತವೆ?
– ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರುತ್ತದೆ. ನಂತರದಲ್ಲಿ ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
– ಎರಡನೇ ಸ್ಟೇಜ್ ಸಿಬಿಟಿ ಪರೀಕ್ಷೆಗೆ 1:15 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಿಬಿಟಿ ಪರೀಕ್ಷೆಯಲ್ಲಿ 1/3 ನೆಗೆಟಿವ್ ಅಂಕಗಳನ್ನು ನೀಡಲಾಗುತ್ತದೆ.
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಆರ್‌ಆರ್‌ಬಿ ಅಧಿಕೃತ ವೆಬ್‌ಸೈಟ್ ವಿಳಾಸ www.rrbbnc.gov.in ಕ್ಕೆ ಭೇಟಿ ನೀಡಿರಿ.