Ration card
ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲು (BPL Ration card cancellation) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil Supply department) ನಿರ್ಧರಿಸಿದೆ. ಸದ್ದು ಗದ್ದಲ ಇಲ್ಲದೆ ಲಕ್ಷಾಂತರ ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ.
ರಾಜ್ಯ ಸರ್ಕಾರ (State government) ಒಂದು ಕಡೆ ಹೊಸ ಹೊಸ ಯೋಜನೆಗಳ ಮೂಲಕ, ಜನರಿಗೆ ಸಂತೋಷ ನೀಡುತ್ತಿದ್ದರೆ, ಇನ್ನೊಂದು ಕಡೆ ಸುದ್ದಿ ಇಲ್ಲದಂತೆ ರೇಷನ್ ಕಾರ್ಡ್ ರದ್ದು ಪಡಿಮಾಡುತ್ತಿದೆ. ಯಾರು ಯಾವಾಗ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುತ್ತಾರೆ ಎಂದು ಊಹಿಸುವುದಕ್ಕೂ ಕೂಡ ಕಷ್ಟವಾಗುತ್ತಿದೆ.
ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಇಂಥವರ ಖಾತೆಗೆ (Bank Account) ಜಮಾ ಆಗುವುದಿಲ್ಲ. ಯಾಕೆಂದರೆ ಈ ಎಲ್ಲಾ ಯೋಜನೆಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ರೇಷನ್ ಕಾರ್ಡ್ (Ration Card). ಆದರೆ ಸರ್ಕಾರ ಈಗ ಅನರ್ಹರನ್ನು ಗುರುತಿಸಿ ಅಂತವರ ರೇಷನ್ ಕಾರ್ಡ್ ರದ್ದುಪಡಿಸುತ್ತಿದೆ.
ಇಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರು ಪ್ರತಿ ತಿಂಗಳು ಕನಿಷ್ಠ 2ರಿಂದ ಎರಡುವರೆ ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಇದು ಮಹಿಳೆಯರ ತಿಂಗಳ ಖರ್ಚಿನ ನಿರ್ವಹಣೆಗೆ ಸಹಾಯವಾಗುತ್ತಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರು ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಿದರು ಕೂಡ ಅವರ ಖಾತೆಗೆ ಹಣ ಜಮಾ ಆಗಿಲ್ಲ. ಇದಕ್ಕೆ ಸಾಕಷ್ಟು ಬೇರೆ ಬೇರೆ ಕಾರಣಗಳು ಕೂಡ ಇವೆ.
ರೇಷನ್ ಕಾರ್ಡ್ ವಿಚಾರದಲ್ಲಿ ಕಟ್ಟುನಿಟ್ಟಿನ ನಿರ್ಧಾರ!
ಇಲ್ಲಿಯವರೆಗೆ ರೇಷನ್ ಕಾರ್ಡ್ ಬೇಕಾಬಿಟ್ಟಿಯಾಗಿ ಪ್ರತಿಯೊಬ್ಬರಿಗೂ ಕೂಡ ವಿತರಣೆ ಮಾಡಲಾಗುತ್ತಿತ್ತು. ನಿಜವಾಗಿ ಹೇಳಬೇಕು ಅಂದ್ರೆ ಬಿಪಿಎಲ್ ರೇಷನ್ ಕಾರ್ಡ್ ಕೇವಲ ಬಡತನ ರೇಖೆಗಿಂತ ಕೆಳಗಿರುವವರು (below poverty line families) ಮಾತ್ರ ಬಳಕೆ ಮಾಡತಕ್ಕದ್ದು.
ಆದರೆ, ಉಳ್ಳವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಬಳಸುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೆ ಇತ್ತೀಚಿಗೆ ಬಂದಿದೆ. ಹಾಗಾಗಿ, 2016ರ ಪಡಿತರ ಚೀಟಿ ನಿಯಮಗಳನ್ನು ಉಲ್ಲಂಘಿಸಿ, ಮಾನದಂಡದ ಒಳಗಡೆ ಬಾರದೆ ಇರುವ ಬಿಪಿಎಲ್ ಕಾರ್ಡ್ ರದ್ದುಪಡಿ ಕೆಲಸವನ್ನು ಬಹಳ ವೇಗವಾಗಿ ಸರ್ಕಾರ ನಡೆಸುತ್ತಿದೆ.
ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ ಯಾಕೆ?
* ಈ ಕೆವೈಸಿ ಆಗದೇ ಇರೋದು
* ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು ಎನ್ ಪಿ ಸಿ ಐ ಮ್ಯಾಪಿಂಗ್ (NPCI mapping) ಆಗದೆ ಇರುವುದು
* ರೇಷನ್ ಕಾರ್ಡ್ ಸಕ್ರಿಯವಾಗಿರದೆ ಇರುವುದು, ಈ ಕೆವೈಸಿ ಮಾಡಿಸಿಕೊಳ್ಳದೆ ಇರುವುದು
* ಮಹಿಳೆಯರು ಬ್ಯಾಂಕ್ ಖಾತೆ ಆಕ್ಟಿವ್ ಆಗಿರದೆ ಇರುವುದು
* ಕುಟುಂಬದ ಯಜಮಾನ ಹೆಸರು ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಆಧಾರ್ ಕಾರ್ಡ್ಗಳಲ್ಲಿ ಮ್ಯಾಚ್ ಆಗದೆ ಇರುವುದು
* ಇನ್ನು ಕೊನೆಯದಾಗಿ ಎಲ್ಲವೂ ಸರಿ ಇದ್ರೂ ಸರ್ವರ್ ಸಮಸ್ಯೆ (server problem) ಯಿಂದಾಗಿ ಮಹಿಳೆಯರ ಖಾತೆಗೆ ಹಣ ಜಮಾ (Money Deposit) ಆಗದೆ ಇರಬಹುದು.
ಆದಾಗ್ಯೂ, ಮಹಿಳೆಯರಿಗೆ ಹಣ ಸಂದಾಯ ಆಗಬೇಕು ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯತ್ ಕ್ಯಾಂಪ್ ಹಾಗೂ ಅದಾಲತ್ ಕೂಡ ನಡೆಸಲಾಗಿದೆ. ಇದರಿಂದಾಗಿ ಇನ್ನು ಲಕ್ಷಾಂತರ ಮಹಿಳೆಯರು ಹಣ ಪಡೆದುಕೊಳ್ಳಲು ಸಾಧ್ಯವಾಗಿದೆ. ಆದ್ರೂ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದಾದರೆ, ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದೇ ಅರ್ಥ.
5 ಲಕ್ಷ ರೇಷನ್ ಕಾರ್ಡ್ ರದ್ದುಪಡಿಸಿದ ಸರ್ಕಾರ!
ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದು, ಅಂತವರನ್ನು ಗುರುತಿಸಿ ಸರ್ಕಾರ ಅಂತವರ ರೇಷನ್ ಕಾರ್ಡ್ ರದ್ದುಪಡಿ ಮಾಡಿದೆ. ಇದೀಗ ಅನರ್ಹರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ನಿಮ್ಮ ಹೆಸರು ಕೂಡ ಇದ್ರೆ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆಯ ಹಣವಾಗಲಿ ನಿಮ್ಮ ಖಾತೆಗೆ ಡಿಬಿಟಿ (DBT) ಆಗುವುದಿಲ್ಲ. ಹಾಗಾಗಿ ತಕ್ಷಣ ಮೊಬೈಲ್ ನಲ್ಲಿಯೇ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
– https://aahar.com/ ವೆಬ್ಸೈಟ್ ಗೆ ಹೋಗಿ.
– ಈ ಸೇವೆಗಳು ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಎಡಭಾಗದಲ್ಲಿ ಇರುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಿ.
– ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ ರದ್ದುಗೊಳಿಸಲಾದ / ತಡೆಹಿಡಿಯಲಾದ ಪಟ್ಟಿ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
– ಈಗ ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮೊದಲಾದವುಗಳನ್ನು ಆಯ್ಕೆ ಮಾಡಿ 2024 ವರ್ಷವನ್ನು ಆಯ್ಕೆ ಮಾಡಿಕೊಳ್ಳಿ. Go ಎಂದು ಕ್ಲಿಕ್ ಮಾಡಿ ರದ್ದಾಗಿರುವ ಅಥವಾ ತಡೆಹಿಡಿಯಲ್ಪಟ್ಟಿರುವ ರೇಷನ್ ಕಾರ್ಡ್ ಲಿಸ್ಟ್ ಕಾಣಿಸುತ್ತದೆ. ಒಂದು ವೇಳೆ ಇದರಲ್ಲಿ ನಿಮ್ಮ ಹೆಸರು ಇದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದು ಅರ್ಥ.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ, ನಿಮ್ಮ ಬಳಿ ರೇಷನ್ ಕಾರ್ಡ್ ಹೊಂದಿರುವುದಕ್ಕೆ ಸೂಕ್ತ ಕಾರಣ ಇದ್ದರೆ ಅದನ್ನು ನೀವು ಆಹಾರ ಇಲಾಖೆಗೆ ತಿಳಿಸಿ ದಾಖಲೆಗಳನ್ನು ನೀಡಿ ನಿಮ್ಮ ರೇಷನ್ ಕಾರ್ಡ್ ಮತ್ತೆ ಸಕ್ರಿಯವಾಗುವಂತೆ ಮಾಡಿಕೊಳ್ಳಬಹುದು.
ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಏನು ಮಾಡಬೇಕು!
ನಿಮ್ಮ ಮನೆಯಲ್ಲಿ ಸರ್ಕಾರಿ ನೌಕರಿಯಲ್ಲಿ ಇರುವ ಸದಸ್ಯ ಅಥವಾ ಆದಾಯ ತೆರಿಗೆ (income tax payer) ಪಾವತಿ ಮಾಡುವ ಸದಸ್ಯ ಇದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕುವುದರ ಮೂಲಕ ರೇಷನ್ ಕಾರ್ಡ್ ರದ್ದಾಗುವುದನ್ನು ತಡೆಗಟ್ಟಬಹುದು. ಅಥವಾ ಬಿಪಿಎಲ್ ಕಾರ್ಡ್ ಬದಲು ಎಪಿಎಲ್ ಕಾರ್ಡ್ ಗೆ ಬದಲಾಯಿಸಿಕೊಳ್ಳಲು ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಕಾರ್ಡ್ ರದ್ದಾಗದಂತೆ ನೋಡಿಕೊಳ್ಳಬಹುದು.