Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಮತ್ತೊಮ್ಮೆ ಅವಕಾಶ.!

Ration Card:

ರೇಷನ್ ಕಾರ್ಡ್ (Ration card) ಕುಟುಂಬವೊಂದಕ್ಕೆ ಒಂದು ಅತ್ಯಗತ್ಯ ದಾಖಲೆ. ಒಂದರ್ಥದಲ್ಲಿ ರೇಷನ್ ಕಾರ್ಡ್ ಆಧರಿತವಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಅಳೆಯಲಾಗುತ್ತದೆ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ದೇಶದಲ್ಲಿ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಅನೇಕ ಯೋಜನೆಗಳ ಸವಲತ್ತು ಸಿಗುತ್ತಿದೆ.

WhatsApp Group Join Now
Telegram Group Join Now

BPL ಮಾತ್ರವಲ್ಲದೇ APL ರೇಷನ್ ಕಾರ್ಡ್ ಹೊಂದಿರುವವರಿಗೂ ಅನ್ವಯವಾಗುವಂತೆ ವೈದ್ಯಕೀಯ ಶುಲ್ಕಗಳಲ್ಲಿ ರಿಯಾಯಿತಿ, ಶೈಕ್ಷಣಿಕ ಖರ್ಚು ವೆಚ್ಚಗಳಲ್ಲಿ ರಿಯಾಯಿತಿ ಇತ್ಯಾದಿ ಯೋಜನೆಗಳನ್ನು ರೂಪಿಸಲಾಗಿದೆ. ಇನ್ನು ಕರ್ನಾಟಕದ ಮಟ್ಟಿಗೆ ಈ ಬಾರಿ ಇನ್ನು ಹೆಚ್ಚಿನ ವಿಶೇಷ ಎಂದೇ ಹೇಳಬಹುದು.

ಯಾಕೆಂದರೆ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ವೇಳೆಯಲ್ಲಿ ಕಾಂಗ್ರೆಸ್ ಪಕ್ಷ (Congress party) ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ (Guarantee Schemes) ಪೈಕಿ ಬಹುತೇಕ ಯೋಜನೆಗಳು ರೇಷನ್ ಕಾರ್ಡ್ ಆಧಾರಿತ ಯೋಜನೆಗಳೇ ಆಗಿವೆ.

ಈ ಸುದ್ದಿ ಓದಿ:- Teachers Recruitment: ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌: ರಾಜ್ಯದಲ್ಲಿ ಶೀಘ್ರವೇ 12 ಸಾವಿರ ಶಿಕ್ಷಕರ ನೇಮಕಾತಿ.!

BPL ರೇಷನ್ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆಯ (Annabhagya) ಹೆಚ್ಚುವರಿ ಅಕ್ಕಿ ಹಣ ಹಾಗೂ APL ಕಾರ್ಡ್ ಹೊಂದಿದ್ದರು ಸಹ ಗೃಹಲಕ್ಷ್ಮಿ ಯೋಜನೆ (Gruhalakshmi) ಮೂಲಕ ಕುಟುಂಬದ ಮುಖ್ಯಸ್ಥೆ ಪ್ರತಿ ತಿಂಗಳು ರೂ.2,000 ಸಹಾಯಧನ ಪಡೆಯುತ್ತಿದ್ದಾರೆ.

ಹೀಗಾಗಿ ಇಷ್ಟೊಂದು ಪ್ರಮುಖ ದಾಖಲೆಯಾಗಿರುವ ಈ ರೇಷನ್ ಕಾರ್ಡ್ ಪ್ರಾಮುಖ್ಯತೆ ಈ ಹಿಂದೆಂದಿಗಿಂತಲೂ ಈಗೀಗ ಹೆಚ್ಚಿನ ಜನರಿಗೆ ಮನವರಿಕೆಯಾಗುತ್ತಿದೆ ಎಂದೇ ಹೇಳಬಹುದು. ಹೀಗಾಗಿ ತಮ್ಮ ರೇಷನ್ ಕಾರ್ಡ್ ನಲ್ಲಿ ಸಮಸ್ಯೆಯಾಗಿರುವ ಕಾರಣದಿಂದ ಸರ್ಕಾರದ ಕಲ್ಯಾಣ ಯೋಜನೆಗಳಿಂದ ವಂಚಿತರಾಗುತ್ತಿರುವ ಜನತೆ ರೇಷನ್ ಕಾರ್ಡ್ ನ ತಪ್ಪಾದ ಮಾಹಿತಿಯನ್ನು ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕಾಗಿ (Ration card Correction) ಕಾಯುತ್ತಿದ್ದಾರೆ.

ಆದರೆ ಕಳೆದೊಂದು ವರ್ಷದಿಂದ ಸಾಕಷ್ಟು ಬಾರಿ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಆ ದಿನಾಂಕಗಳಂದು ಉಂಟಾಗಿದ್ದ ಸರ್ವರ್ ಸಮಸ್ಯೆ ಮತ್ತು ಅತಿಹೆಚ್ಚಿನ ಜನದಟ್ಟಣೆ ಇತ್ಯಾದಿ ಕಾರಣಗಳಿಂದ ಇನ್ನೂ ಅನೇಕರ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯ ಪೂರ್ತಿಯಾಗಿಲ್ಲ. ಇವರೆಲ್ಲರೂ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ಕೊಡಬೇಕಾಗಿ ಬೇಡಿಕೆ ಇಟ್ಟಿದ್ದರು.

ಈ ಸುದ್ದಿ ಓದಿ:- Farmer: ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ರೈತರಿಗೆ ಗುಡ್ ನ್ಯೂಸ್.!

ಇದರೊಂದಿಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಕ್ಕೆ ಕೂಡ ರಾಜ್ಯದ ಸಾವಿರಾರು ಮಂದಿ ಕಾಯುತ್ತಿದ್ದಾರೆ. ಇವರಿಗೆಲ್ಲ ಸರ್ಕಾರದ ಕಡೆಯಿಂದ ಒಂದು ಬಿಗ್ ಅಪ್ಡೇಟ್ ದೊರೆತಿದೆ. ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ ರವರೇ (K.H Muniyappa) ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಕಾರಣದಿಂದ ರೇಷನ್ ಕಾರ್ಡ್ ವಿತರಣೆ ಕಾರ್ಯಕ್ರಮ ತಡೆಹಿಡಿಯಲಾಗಿತ್ತು.

ರಾಜ್ಯದಲ್ಲಿ 3ಲಕ್ಷಕ್ಕೂ ಹೆಚ್ಚು ಜನರು ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದರು ಇದರಲ್ಲಿ ಅನುಮೋದನೆ ಆಗಿರುವ ರೇಷನ್ ಕಾರ್ಡ್ ಗಳ ವಿತರಣೆ ಕಾರ್ಯವನ್ನು ಇದೇ ಸೆಪ್ಟೆಂಬರ್ 15ರ ನಂತರ ಆರಂಭಿಸುತ್ತಿದ್ದೇವೆ. ಅದಾದ ಬಳಿಕ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ ಮಾಡಲಾಗುವುದು.

ಬಹುಶ: ಸೆಪ್ಟೆಂಬರ್ 15 ರಿಂದ 30ನೇ ತಾರೀಖಿನ ಒಳಗೆ ಒಂದು ದಿನ ಇದಕ್ಕಾಗಿ ಅವಕಾಶ ಮಾಡಿಕೊಡಲಾಗುವುದು ಇದರೊಂದಿಗೆ ರೇಷನ್ ಕಾರ್ಡ್ ನಲ್ಲಿರುವ ತಪ್ಪಾದ ಮಾಹಿತಿಯನ್ನು ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಕೂಡ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿ:- Grama one: ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ.!

ಅಧಿಕೃತವಾಗಿ ಜಿಲ್ಲಾವಾರು ಸಮಯ ಹಾಗೂ ದಿನಾಂಕದೊಂದಿಗೆ ಮತ್ತೊಮ್ಮೆ ಅಧಿಕೃತವಾಗಿ ಸರ್ಕಾರದಿಂದ ಪ್ರಕಟಣೆ ಹೊರಡಿಸಲಾಗುತ್ತದೆ ಎನ್ನುವ ಭರವಸೆಯನ್ನು ಕೂಡ ನೀಡಿದ್ದಾರೆ. ಹೀಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಕಾಯುತ್ತಿರುವವರು ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿ ಹೊಸ ರೇಷನ್ ಕಾರ್ಡ್ ಎದುರು ನೋಡುತ್ತಿರುವವರು.

ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕಾದವರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ ಮತ್ತು ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment