Ration Card
ದೇಶದ ಬಡಜನರಿಗೆ ಅನುಕೂಲವಾಗಲೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೇಷನ್ ಕಾರ್ಡ್ (Ration Card) ಗಳನ್ನು ವಿತರಣೆ ಮಾಡಿವೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್, ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇರುವವರಿಗೆ ಸರ್ಕಾರದಿಂದ ಸಿಗುವ ಲಾಭಗಳು ಜಾಸ್ತಿ. ಇದನ್ನು ಜನರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರೇಷನ್ ಕಾರ್ಡ್‌ಅನ್ನು ಒಂದು ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಹಲವು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಬಹುದು, ಆರೋಗ್ಯದ ಬಗ್ಗೆ ಚಿಕಿತ್ಸೆಗೆ ಸೌಲಭ್ಯ ಸಿಗುತ್ತದೆ. ಹಾಗೆಯೇ, ಪ್ರಸ್ತುತ ನಮ್ಮ ರಾಜ್ಯದಲ್ಲಿ ಜಾರಿಗೆ ಬಂದಿರುವ 5 ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ನಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಲೇಬೇಕು. ಆಗ ಮಾತ್ರ ನಮಗೆ ರಾಜ್ಯ ಸರ್ಕಾರ ಐದು ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಸಿಗುತ್ತದೆ.
ಆದರೆ, ಹಲವರ ಬಳಿ ಈಗಲೂ ಕೂಡ ರೇಷನ್ ಕಾರ್ಡ್ ಇಲ್ಲ. ಕಳೆದ ವರ್ಷ ಚುನಾವಣೆ ನೀತಿ ಸಂಹಿತೆ ಕಾರಣ ಹೊಸ ರೇಷನ್ ಕಾರ್ಡ್ ವಿತರಣೆ ಮತ್ತು ಅರ್ಜಿ ಸಲ್ಲಿಕೆ ಆಗಿರಲಿಲ್ಲ. ಒಂದೂವರೆ ವರ್ಷಗಳಿಂದ ಒಂದೇ ಒಂದು ಹೊಸ ರೇಷನ್ ಕಾರ್ಡ್ (New Ration Card) ಕೂಡ ರಾಜ್ಯದಲ್ಲಿ ವರ್ಗಾವಣೆ ಆಗಿಲ್ಲ. ಚುನಾವಣೆಗಿಂತ ಮೊದಲೇ ಅರ್ಜಿ ಸಲ್ಲಿಸಿರುವವರು ರೇಷನ್ ಕಾರ್ಡ್ ಪಡೆದಿಲ್ಲ.
ಹಾಗೆಯೇ, ಚುನಾವಣೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರ ಅನುಮತಿಯನ್ನು ನೀಡಿಲ್ಲ. ಮೊದಲು ಪೆಂಡಿಂಗ್ ಇರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಬೇಕು. ಬಳಿಕ ಹೊಸದಾಗಿ ರೇಶನ್ ಕಾರ್ಡ್ ಗೆ ಅನುಮತಿ ಕೊಡಬಹುದು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ.
ಇನ್ನೊಂದು ಕಡೆ ಜನರ ಉಪಯೋಗಕ್ಕೆ ಎಂದು ಜಾರಿಗೆ ಬಂದಿರುವ ಈ ಕೊಡುಗೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರೇಷನ್ ಕಾರ್ಡ್ ಇರುವುದು ಆರ್ಥಿಕವಾಗಿ ಕಷ್ಟದಲ್ಲಿರುವವರ ಸಹಾಯಕ್ಕಾಗಿದೆ. ಆದರೆ, ಎಲ್ಲವೂ ಇದ್ದರೂ ಕೂಡ ಕೆಲವರು ಸುಳ್ಳು ಮಾಹಿತಿ ನೀಡಿ, ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಂಥವರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದು, ಈ ಥರ ಸುಳ್ಳು ಮಾಹಿತಿ ನೀಡಿರುವ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಲಾಗುತ್ತಿದೆ.
ಯಾರ ಮನೆಯಲ್ಲಿ ಸ್ವಂತ ಕಾರು (Own Car), ಬೈಕ್ (Bike) ಇಂಥ ಐಷಾರಾಮಿ ವಸ್ತುಗಳಿದ್ದರು ಸಹ, ಬಿಪಿಎಲ್ ರೇಷನ್ ಕಾರ್ಡ್ ಪಡೆದು ಅದರ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೋ, ಅಂಥವರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಹಾಗಾಗಿ, ಅಂಥಹ ಕುಟುಂಬದ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಸಿಕ್ಕಿದೆ. ಹೀಗೆ ಮೋಸ ಮಾಡುವವರನ್ನು ಸರ್ಕಾರ ಪತ್ತೆ ಹಚ್ಚಿ, ಅವರ ರೇಷನ್ ಕಾರ್ಡ್ ವಾಪಸ್ ಪಡೆಯಲಿದೆ ಎನ್ನಲಾಗಿದೆ.
ಆದರೆ, ದುಡಿಮೆಗಾಗಿ ಕಾರು (Rented Car or Travels Car) ಹೊಂದಿರುವವರು ಚಿಂತಿಸಬೇಕಾಗಿಲ್ಲ. ಯಾಕಂದ್ರೆ, ಅವರಿಗೆ ವಿನಾಯಿತಿ ಇದೆ. ಅಲ್ಲದೆ ಸರ್ಕಾರಕ್ಕೆ ಇವರು ಅರ್ಹರೋ? ಇಲ್ಲವೋ? ಎಂಬ ಮಾಹಿತಿ ಬೇರೆ ಬೇರೆ ವಿಧದಲ್ಲಿ ತಿಳಿಯುತ್ತದೆ. ಉದಾಹರಣೆಗೆ: ಟ್ಯಾಕ್ಸ್ ಕಟ್ಟುವವರ ಪಟ್ಟಿ ಈಗಾಗಲೇ ಸರ್ಕಾರದ ಬಳಿ ಇದೆ. ಅದು ಅಲ್ಲದೆ ಈಗೆಲ್ಲ ಆಧಾರ್ ಹಾಗೂ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರುವುದರಿಂದ ಎಲ್ಲಾ ಮೂಲೆಮೂಲೆಯಿಂದಲೂ ಸರ್ಕಾರಕ್ಕೆ ಮಾಹಿತಿ ಸಿಗುತ್ತದೆ. ಆದ ಮೇಲೆ ಅರ್ಹರಿಗೆ ಮಾತ್ರ ರೇಷನ್ ಕಾರ್ಡ್ ನೀಡಲು ಸರ್ಕಾರಕ್ಕೆ ಕಷ್ಟವೇನಲ್ಲ.