Ration Card : ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದಿಯೇ ಇಲ್ಲವೇ ಈ ರೀತಿ ಚೆಕ್ ಮಾಡ್ಕೊಳಿ.!

Ration Card

ದೇಶದ ಕಡುಬಡವರೂ ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡಿಲಿ ಅನ್ನೋ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ(Central and State Govt)ಗಳು ರೇಷನ್‌ ಕಾರ್ಡ್‌(Ration card) ವಿತರಿಸುವ ಯೋಜನೆಯನ್ನು ಶುರು ಮಾಡಿದವು ಇದರಿಂದ ಕೋಟ್ಯಂತರ ಜನರಿಗೆ ಅನುಕೂಲ ಆಗುತ್ತಿದೆ.

ಕರ್ನಾಟಕ(Karnataka) ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಡವರ್ಗದ ಜನರಿಗೆ(poor people) ಎರಡು ರೀತಿಯ ರೇಶನ್ ಕಾರ್ಡ್‌(Ration Card)ಗಳನ್ನು ವಿತರಣೆ ಮಾಡಲಾಗುತ್ತಿದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್(BPL Ration Card) ಹಾಗೂ ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್(APL Ration Card) ವಿತರಣೆ ಮಾಡಲಾಗುತ್ತದೆ.

WhatsApp Group Join Now
Telegram Group Join Now

ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಸರ್ಕಾರದಿಂದ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತದೆ. ಉಚಿತ ಆಹಾರ ಧಾನ್ಯಗಳು(Free food grains), ಉಚಿತ ಆರೋಗ್ಯ ಸೇವೆ(Free healthcare), ಸರ್ಕಾರದ ಸವಲತ್ತು(Privilege of Govt)ಗಳು ಹೀಗೆ ಅನೇಕ ಸೇವೆಗಳು ಬಿಪಿಎಲ್ ರೇಷನ್ ಕಾರ್ಡ್‌ ಹೊಂದಿರುವವರಿಗೆ ಸಿಗುತ್ತಿವೆ.

ಈ ಸುದ್ದಿ ಓದಿ:-Post Office: ತಿಂಗಳಿಗೆ ಕೇವಲ 1500 ಹೂಡಿಕೆ ಮಾಡಿದ್ರೆ 31 ಲಕ್ಷ ಸಿಗಲಿದೆ.!

ಇದೇ ಕಾರಣಕ್ಕೆ ಬಡತನದಲ್ಲಿರುವ ಜನರು ರೇಷನ್ ಕಾರ್ಡ್‌ ಮಾಡಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ, ನಮ್ಮ ದೇಶದಲ್ಲಿ ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ರೇಶನ್ ಕಾರ್ಡ್ ಸಿಕ್ಕಿರುವುದಿಲ್ಲ. ಕೆಲವರು ತಪ್ಪು ಮಾಹಿತಿಗಳನ್ನು ಕೊಟ್ಟು ರೇಷನ್ ಕಾರ್ಡ್‌ ಮಾಡಿಸಿಕೊಂಡಿರುತ್ತಾರೆ.

ಕೆಲವು ಸಾರಿ ರೇಷನ್ ಕಾರ್ಡ್ ವಿತರಣೆ ವೇಳೆ ಆಗುವ ಕೆಲ ದೋಷಗಳಿಂದ ಕುಟುಂಬದ ಕೆಲವು ವ್ಯಕ್ತಿಗಳ ಹೆಸರುಗಳು ರೇಷನ್ ಕಾರ್ಡ್‌ನಿಂದ ಮಿಸ್ ಆಗಿರುತ್ತದೆ. ಇವೆಲ್ಲಾ ಕಾರಣಗಳಿಂದ ಅರ್ಹ ಫಲಾನುಭವಿಗಳಿಗೆ ರೇಷನ್‌ ಕಾರ್ಡ್‌ ಸಿಗದೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಇದೇ ಕಾರಣಕ್ಕೆ ಸರ್ಕಾರ ಕಾಲಕಾಲಕ್ಕೆ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಅವಕಾಶ ನೀಡುತ್ತಿರುತ್ತದೆ.

ಅದರಂತೆ ಕೆಲವರು ಆನ್‌ಲೈನ್‌ನಲ್ಲಿ ರೇಶನ್ ಕಾರ್ಡ್‌ಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದು, ಇದೀಗ ರೇಷನ್ ಕಾರ್ಡ್‌ಗೆ ಹೆಸರು ಸೇರ್ಪಡೆ ಆಗಿರುವವರ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಹೆಸರು ಅದರಲ್ಲಿ ಇದೆಯಾ? ಅನ್ನೋದರ ಬಗ್ಗೆ ತಿಳಿದುಕೊಳ್ಳಬಹುದು. ಕರ್ನಾಟಕ ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಎಂದು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ.

ಈ ಸುದ್ದಿ ಓದಿ:-Vidyasiri Scholarship: ವಿದ್ಯಾಸಿರಿ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಕೆ ಪ್ರಾರಂಭ ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ರೂ. ಸ್ಕಾಲರ್ಶಿಪ್.!

ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದವರ ಪಟ್ಟಿ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಸಿದವರು ಅಧಿಕೃತ ವೆಬ್‌ ಸೈಟ್‌ ಭೇಟಿ ನೀಡುವ ಮೂಲಕ ನಿಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಬಹುದು.

ಕರ್ನಾಟಕ ಪಡಿತರ ಚೀಟಿಯ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು:-

– ಮೊದಲಿಗೆ, ಇಲ್ಲಿ ನೀಡಲಾದ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ
– ಮೆನು ಪಟ್ಟಿಯಿಂದ, “e-Services” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
– “e-Ration card” ಲಿಂಕ್ ಮೇಲೆ ಕ್ಲಿಕ್ ಮಾಡಿ.

– “Village list” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
– ಈ ಕೆಳಗಿನ ಮಾಹಿತಿಯನ್ನು ಆಯ್ಕೆಮಾಡಿ-
* ಜಿಲ್ಲೆ
* ತಾಲ್ಲೂಕು
* ಗ್ರಾಮ ಪಂಚಾಯತ್
* ಗ್ರಾಮ
– “ಗೋ” ಬಟನ್ ಕ್ಲಿಕ್ ಮಾಡಿ.
– ಪಡಿತರ ಚೀಟಿದಾರರ ಪಟ್ಟಿಯನ್ನು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment