Ration Card
ರೇಷನ್ ಕಾರ್ಡ್ (Ration card) ಎನ್ನುವುದು ಆಹಾರ ಇಲಾಖೆಯು ನೀಡುವ ಒಂದು ದಾಖಲೆಯಾಗಿದೆ. ಇದನ್ನು ವಿಳಾಸದ ಪುರಾವೆಯಾಗಿ ಹಾಗೂ ಒಂದು ಪ್ರಮುಖ ದಾಖಲೆಯಾಗಿ ಅನೇಕ ಸಂದರ್ಭಗಳಲ್ಲಿ ಕೇಳಲಾಗುತ್ತದೆ. ಕುಟುಂಬವೊಂದರ ಆದಾಯದ ಆಧಾರದ ಮೇಲೆ ಆ ಕುಟುಂಬಕ್ಕೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಎಂದು.
BPL ಕಾರ್ಡ್ ಹಾಗೂ ಬಡತನ ರೇಖೆಗಿಂತ ಮೇಲಿರುವ ಕುಟುಂಬ ಎಂದು APL ಕಾರ್ಡ್ ಅನ್ನು ಇಲಾಖೆ ನೀಡುತ್ತದೆ ಸಧ್ಯಕ್ಕೆ ಇದರ ಪ್ರಾಮುಖ್ಯತೆ ಬಗ್ಗೆ ಹೇಳುವುದಾದರೆ ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಯಾದ (Gyaranty Schemes) ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ರೇಷನ್ ಕಾರ್ಡ್ ಇರಲೇಬೇಕು.
ಇದನ್ನು ಹೊರತುಪಡಿಸಿಯೂ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿಶೇಷವಾಗಿ ನೀಡುವ ಯೋಜನೆಗಳ ಭಾಗವಾಗಲು ಮತ್ತು ಶೈಕ್ಷಣಿಕ ಹಾಗೂ ವೈದ್ಯಕೀಯ ಶುಲ್ಕಗಳಲ್ಲಿ ವಿನಾಯಿತಿ ಪಡೆಯಲು ರೇಷನ್ ಕಾರ್ಡ್ ಬೇಕಾಗುತ್ತದೆ. ಗ್ಯಾರೆಂಟಿ ಯೋಜನೆಗಳು ಜಾರಿಯಾದ ಮೇಲೆ ರೇಷನ್ ಕಾರ್ಡ್ ಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದರೂ ತಪ್ಪಾಗಲಾರದು.
ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಹಾಗೂ ಈಗಾಗಲೇ ರೇಷನ್ ಕಾರ್ಡ್ ಮಾಹಿತಿ ತಪ್ಪಾಗಿರುವುದರಿಂದ ಯೋಜನೆಗಳ ಪ್ರಯೋಜನ ಪಡೆಯಲು ಆಗದವರು ಇದರ ತಿದ್ದುಪಡಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಕಳೆದ ಒಂದು ವರ್ಷದಿಂದ ಸರ್ಕಾರವೂ ಸಾಕಷ್ಟು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು ಆದರೆ ಹೊಸ ಕಾರ್ಡಿಗೆ ಅರ್ಜಿ ಆಹ್ವಾನ ಮಾಡಿರಲಿಲ್ಲ.
ಈಗ ಈ ಬಗ್ಗೆ ಅಪ್ಡೇಟ್ ಇದೆ, ಬಲವಾದ ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಶೀಘ್ರದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ ಮಾಡಲಾಗುತ್ತದೆ. ನೀವು ಕೂಡ ಅರ್ಜಿ ಸಲ್ಲಿಸುವವರಾಗಿದ್ದರೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲ ದಾಖಲೆಗಳು ಬೇಕಾಗುತ್ತದೆ? ಇವುಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು ಈ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಬೇಕಾಗುವ ದಾಖಲೆಗಳು:-
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ
* ಕುಟುಂಬದ ಹಿರಿಯ ಮಹಿಳಾ ಸದಸ್ಯರ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ
* ಎಲ್ಲಾ ಸದಸ್ಯರ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಐದು ವರ್ಷದ ಒಳಗಿನ ಮಕ್ಕಳಾಗಿದ್ದಲ್ಲಿ ಜನನ ಪ್ರಮಾಣ ಪತ್ರ
* ವಿಳಾಸ ದೃಢೀಕರಣ ಪತ್ರ
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
* ಹೊಸದಾಗಿ ಮದುವೆ ಆದ ಸದಸ್ಯರು
* ಅವಿಭಕ್ತ ಕುಟುಂಬ ವಿಭಾಗವಾಗಿದ್ದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಆದರೆ ಕುಟುಂಬದ ಹಳೆಯ ಕಾರ್ಡಿನಲ್ಲಿ ಸದಸ್ಯರ ಹೆಸರನ್ನು ತೆಗೆಸಿರಬೇಕು
ಅರ್ಜಿ ಸಲ್ಲಿಸುವುದು ಹೇಗೆ?
* ನೇರವಾಗಿ ನಿಮ್ಮ ವ್ಯಾಪ್ತಿಗೆ ಬರುವ ಆಹಾರ ಇಲಾಖೆಯ ಕಚೇರಿಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ನೀಡಿ ಅಗತ್ಯ ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಿ ರಸೀದಿ ಪಡೆದುಕೊಳ್ಳಬೇಕು
* ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕೂಡ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು
ವೆಬ್ಸೈಟ್ ವಿಳಾಸ :- https://ahara.kar.nic.in
* ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಅಥವಾ ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.