Ration Card Link‌ ‌with e-KYC: ಇನ್ಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ.!

Ration ard Link‌ ‌with e-KYC

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ(Department of Food Civil Supplies and Consumer Affairs)ಯಿಂದ ಪಡಿತರ ಚೀಟಿ(Ration card)ಯನ್ನು ಪಡೆದುಕೊಂಡಿರುವ ಗ್ರಾಹಕರು(Customers) ಇನ್ನು ಮುಂದೆ ಪ್ರತಿ ತಿಂಗಳು ರೇಷನ್(Ration) ಅನ್ನು ಪಡೆಯಲು ಈ ಲೇಖನದಲ್ಲಿ ವಿವರಿಸಿರುವ ಕೆಲಸವನ್ನು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಸುದ್ದಿ ಓದಿ:-Mobile repair training: ಉಚಿತ ಊಟ ವಸತಿಯೊಂದಿಗೆ ಮೊಬೈಲ್ ರೀಪೆರಿ ತರಬೇತಿಗೆ ಅರ್ಜಿ ಆಹ್ವಾನ.!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ(Department of Food Civil Supplies and Consumer Affairs)ಯಿಂದ ಅರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ(backward citizens) ದಿನನಿತ್ಯ ಬಳಕೆ ಮಾಡುವ ಕೆಲವು ಆಹಾರ ಧಾನ್ಯ(Food grain)ಗಳನ್ನು ನೀಡಲು ಪಡಿತರ ಚೀಟಿಯನ್ನು ವಿತರಣೆ ಮಾಡಲಾಗಿದ್ದು.

WhatsApp Group Join Now
Telegram Group Join Now

ಈ ರೇಷನ್ ಕಾರ್ಡ ಅನ್ನು ಹೊಂದಿರುವ ಗ್ರಾಹಕರು ಇ-ಕೆವೈಸಿ(E-KYC)ಯನ್ನು ಮಾಡಿಕೊಳ್ಳಲು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ. ಇಂದಿನ ಈ ಲೇಖನದಲ್ಲಿ ರೇಷನ್ ಕಾರ್ಡ ಅನ್ನು ಹೊಂದಿರುವ ಗ್ರಾಹಕರು ಇ-ಕೆವೈಸಿಯನ್ನು ಎಲ್ಲಿ ಮಾಡಿಸಬೇಕು? ಇ-ಕೆವೈಸಿ ಮಾಡಲು ಅಗತ್ಯ ದಾಖಲಾತಿಗಳೇನು? ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇ-ಕೆವೈಸಿ ಏಕೆ ಮಾಡಿಸಬೇಕು?

1) ನೈಜ ಫಲಾನುಭವಿಗಳಿಗೆಯೇ ಪ್ರತಿ ತಿಂಗಳು ಆಹಾರ ಧಾನ್ಯ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು.
2) ನಕಲಿ ರೇಷನ್ ಕಾರ್ಡದಾರರನ್ನು ಖಚಿತಪಡಿಸಿಕೊಳ್ಳಲು ಇ-ಕೆವೈಸಿ ಮಾಡಿಸಲು ಸೂಚಿಸಲಾಗಿದೆ.
3) ರೇಶನ್ ಕಾರ್ಡನಲ್ಲಿ ಮರಣ ಹೊಂದಿದ ಸದಸ್ಯರನ್ನು ಗುರುತಿಸಿ ಅಂತಹ ಸದಸ್ಯರನ್ನು ಕಾರ್ಡನಿಂದ ತೆಗೆದು ಹಾಕಲು.

ರೇಷನ್ ಕಾರ್ಡ ಇ-ಕೆವೈಸಿ ಅನ್ನು ಎಲ್ಲಿ ಮಾಡಿಸಬೇಕು?

ರೇಶನ್ ಕಾರ್ಡ ನಲ್ಲಿರುವ ಸದಸ್ಯರು ಖುದ್ದು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯನ್ನು ರೇಶನ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಯ ಸಮೇತ ಕಚೇರಿ ವೇಳೆಯಲ್ಲಿ ಭೇಟಿ ಮಾಡಿ ಇ-ಕೆವೈಸಿ ಅನ್ನು ಮಾಡಿಸಿಕೊಳ್ಳಬೇಕು.

ಈ ದಿನದ ಒಳಗಾಗಿ ಇ-ಕೆವೈಸಿ ಮಾಡಿಸಲು ಇಲಾಖೆಯಿಂದ ಸೂಚನೆ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸೂಚನೆಯ ಪ್ರಕಾರ 31 ಆಗಸ್ಟ್ 2024 ರ ಒಳಗಾಗಿ ಪಡಿತರ ಚೀಟಿ ಹೊಂದಿರುವ ಗ್ರಾಹಕರು ನ್ಯಾಯಬೆಲೆ ಅಂಗಡಿಯನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಸಲು ಸೂಚನೆ ನೀಡಲಾಗಿದೆ.

ನಿಮ್ಮ ಮೊಬೈಲ್ ನಲ್ಲಿ ರೇಶನ್ ಕಾರ್ಡ್‌ನ ಇ-ಕೆವೈಸಿ ಸ್ಥಿತಿಯನ್ನು ಹೀಗೆ ಚೆಕ್ ಮಾಡಿ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ ಇ-ಕೆವೈಸಿ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ration card e kyc status ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ಇದಾದ ಬಳಿಕ ಇಲ್ಲಿ “ಇ-ಸೇವೆಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ತದನಂತರ “ಇ-ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಈ ಸುದ್ದಿ ಓದಿ:-Bank: 2 ಬ್ಯಾಂಕ್ ಖಾತೆಗೆ ಒಂದೇ ಮೊಬೈಲ್ ನಂಬರ್ ಲಿಂಕ್ ಮಾಡಿಸಿದ್ದೀರಾ.? ಆಗಿದ್ರೆ RBI ನಾ ಹೊಸ ರೂಲ್ಸ್ ತಿಳಿದುಕೊಳ್ಳಿ.!

Step-3: ಈ ಪೇಜ್ ನಲ್ಲಿ
1) ONLY FOR BENGALURU DISTRICTS CLICK HERE (BENGALURU(URBAN/RURAL/CITY) districts only)
2) ONLY FOR KALABURAGI/BENGALURU DIVISIONS EXCEPT BENGALURU(URBAN/RURAL/CITY) CLICK HERE

(Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur,Ramanagara, Shivamoga, Tumakuru, Yadgir, Vijayanagara districts only)
3) ONLY FOR BELAGAVI/MYSURU DIVISIONS CLICK HERE

(Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura districts only) ಈ ರೀತಿಯ ಮೂರು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಇರುವ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

ಈ ಸುದ್ದಿ ಓದಿ:-Ganga kalyana Scheme: ಬೋರ್ವೆಲ್ ಕೊರಿಸಲು ಸರ್ಕಾರದಿಂದ 4 ಲಕ್ಷ ಸಬ್ಸಿಡಿ.!

Step-4: ಈ ಪುಟದಲ್ಲಿ “ಪಡಿತರ ಚೀಟಿ ವಿವರ” ಬಟನ್ ಮೇಲೆ ಕ್ಲಿಕ್ ಮಾಡಿ “with Out OTP” ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ರೇಶನ್ ಕಾರ್ಡ ನಂಬರ್ ಅನ್ನು ಹಾಕಿ “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ Member Count ಆಯ್ಕೆಯಲ್ಲಿ eKYC Done ಎಂದು ತೋರಿಸಿ.

ಎಲ್ಲಾ ಸದಸ್ಯರ ಸಂಖ್ಯೆಯನ್ನು ತೋರಿಸಿದರೆ ನಿಮ್ಮ ರೇಷನ್ ಕಾರ್ಡ ಇ-ಕೆವೈಸಿ ಅಗಿದೆ ಎಂದು ಒಂದೊಮ್ಮೆ eKyc Remaining ಆಯ್ಕೆಯಲ್ಲಿ ಸದಸ್ಯರ ಸಂಖ್ಯೆ ತೋರಿಸಿದರೆ ಇ-ಕೆವೈಸಿ ಅಗುವುದು ಇನ್ನು ಬಾಕಿ ಉಳಿದಿದೆ ಎಂದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment