Ration Card
ರೇಷನ್ ಕಾರ್ಡ್ (Ration card) ಈಗ ಒಂದು ಪ್ರಮುಖ ದಾಖಲೆಯಾಗಿದೆ. ರೇಷನ್ ಕಾರ್ಡ್ ಇಲ್ಲದವರು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಯೋಜನೆಗಳ ಪ್ರಯೋಜನ ಪಡೆಯಲಾಗದೆ ವಂಚಿತರಾಗುತ್ತಾರೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುವುದರಿಂದ ಹಿಡಿದು ಶೈಕ್ಷಣಿಕ ಶುಲ್ಕ, ವೈದ್ಯಕೀಯ ವೆಚ್ಚಗಳಲ್ಲಿ ಸಿಗುವ ವಿನಾಯಿತಿ ಪಡೆಯಲು, ರೈತರು & ಕಾರ್ಮಿಕರು, ಮಹಿಳೆಯರಿಗೆ ಹಾಗೂ ಇನ್ನಿತರ ವಲಯಕ್ಕಾಗಿ ಸರ್ಕಾರ ವಿಶೇಷವಾಗಿ ರೂಪಿಸುವ ಯೋಜನೆಗಳ ಪ್ರಯೋಜನ ಪಡೆಯಲು ಹಾಗೂ ಇನ್ನಿತರ ಕಾರಣಗಳಿಂದ ರೇಷನ್ ಕಾರ್ಡ್ ಬೇಕೇ ಬೇಕು.
ಆದರೆ ಸದ್ಯಕ್ಕಂತೂ ಈಗಿರುವ ಪರಿಸ್ಥಿತಿಯಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವುದು ಬಹಳ ತ್ರಾಸದಾಯಕ ಕೆಲಸವಾಗಿದೆ. ಯಾಕೆಂದರೆ ಸರ್ಕಾರ ನೀಡುವ ಕಾಲಾವಧಿಯಲ್ಲಿ ದಿನಗಟ್ಟಲೆ ಕ್ಯೂ ನಿಂತರೂ ಸರ್ವರ್ ಸಮಸ್ಯೆ ಅಥವಾ ಜನಜಂಗುಳಿ ಹೆಚ್ಚಿರುವ ಕಾರಣ ನಮ್ಮ ಕೆಲಸ ಆಗುತ್ತಿಲ್ಲ.
ಈ ಸುದ್ದಿ ಓದಿ:- Home ವಸತಿ ಭಾಗ್ಯ ಯೋಜನೆ ಮೂಲಕ ಮನೆ ಇಲ್ಲದವರಿಗೆ ಮನೆ ಭಾಗ್ಯ.!
ನೀವು ಕೂಡ ಈ ರೀತಿ ಸಮಸ್ಯೆಪಟ್ಟಿದರೆ ಸರ್ಕಾರ ನಿಮಗೆ ಪರಿಹಾರ ಮಾರ್ಗ ಸೂಚಿಸಿದೆ. ಇನ್ನು ಮುಂದೆ ಆನ್ಲೈನ್ ನಲ್ಲಿ ಅಪ್ಲೈ ಮಾಡಿ ರೇಷನ್ ಕಾರ್ಡ್ ಪಡೆಯಲು ಅವಕಾಶ ನೀಡಲಾಗಿದೆ. ಅಪ್ಲೈ ಮಾಡುವುದು ಹೇಗೆ? ಏನೆಲ್ಲ ದಾಖಲೆಗಳು ಬೇಕು? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಇತ್ಯಾದಿ ವಿವರ ಹೇಗಿದೆ ನೋಡಿ.
ಯಾರೆಲ್ಲ ಅಪ್ಲೈ ಮಾಡಬಹುದು?
* ಕರ್ನಾಟಕದ ಕಾಯಂ ನಿವಾಸಿಯಾಗಳಾಗಿದ್ದು ಇನ್ನು ಸಹ ರೇಷನ್ ಕಾರ್ಡ್ ಹೊಂದಿಲ್ಲದೆ ಇರುವವರು
* ಹೊಸದಾಗಿ ವಿವಾಹವಾದ ದಂಪತಿ
* ಅವಿಭಾಜ್ಯ ಕುಟುಂಬದಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿರುವ ಕುಟುಂಬ
ಬೇಕಾಗುವ ದಾಖಲೆಗಳು:-
* ಆದಾಯ ಪ್ರಮಾಣ ಪತ್ರ
* ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ
* ಯಾವುದಾದರೂ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ
* ಐದು ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಜನರ ಪ್ರಮಾಣ ಪತ್ರ
* ಅವಿಭಾಜ್ಯ ಕುಟುಂಬದಲ್ಲಿ ಇದ್ದವರಿಗೆ ಹಳೆ ರೇಷನ್ ಕಾರ್ಡ್
* ಇನ್ನಿತರ ಪ್ರಮುಖ ದಾಖಲೆಗಳು
ಅಪ್ಲೈ ಮಾಡುವ ವಿಧಾನ:-
* ಸರ್ಕಾರ ಘೋಷಿಸಿದ ನಿಗದಿತ ಸಮಯದಂದು ನೇರವಾಗಿ ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಭೇಟಿ ನೀಡಿ ಅಪ್ಲೈ ಮಾಡಬಹುದು.
ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:-
* ಈಗಾಗಲೇ ಅರ್ಜಿ ಸಲ್ಲಿಸಿದ್ದರೆ, ಸ್ಟೇಟಸ್ ಟ್ರಾಕ್ ಮಾಡಲು ಹಾಗೂ ಡೌನ್ಲೋಡ್ ಮಾಡಿಕೊಳ್ಳಲು ಕೂಡ ಈ ಮೇಲೆ ತಿಳಿಸಿದ ವೆಬ್ಸೈಟ್ಗೆ ಭೇಟಿ ನೀಡಬೇಕು.
* ಮುಖಪುಟದ ಎಡ ಭಾಗದಲ್ಲಿ ಮೇಲುಗಡೆ ಇರುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಿ.
* ಸೇವೆ (Sevics) ಎನ್ನುವ ಆಯ್ಕೆ ಸೆಲೆಕ್ಟ್ ಮಾಡಿ, ಸ್ಟೇಟಸ್ (Status) ಅಥವಾ ಸ್ಥಿತಿ ಎನ್ನುವುದರ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಮುಂದಿನ ಹಂತದಲ್ಲಿ ವಾಸ್ತವ ಅಥವಾ ಅಸ್ತಿತ್ವದಲ್ಲಿರುವ ವಿನಂತಿ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪುರಸಭೆಯನ್ನು ಆಯ್ಕೆ ಮಾಡಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಸೆಲೆಕ್ಟ್ ಮಾಡಿ ನಿಮ್ಮ ವಿನಂತಿ ಸಂಖ್ಯೆಯನ್ನು ನಮೂದಿಸಿದರೆ ಸಾಕು ಅರ್ಜಿ ಸ್ಟೇಟಸ್ ತಿಳಿಯುತ್ತದೆ.
ಈ ಸುದ್ದಿ ಓದಿ:- Subadra Yojana: ಸುಭದ್ರ ಯೋಜನೆ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ 10,000 ಸಿಗಲಿದೆ.!
* ಡೌನ್ಲೋಡ್ ಮಾಡಲು ಮುಖಪುಟದಲ್ಲಿರುವ ಇ- ರೇಷನ್ ಕಾರ್ಡ್ (E-Ration Card) ಆಪ್ಷನ್ ಮೇಲೆ ಕ್ಲಿಕ್ ಮಾಡಿ. * ರೇಷನ್ ಕಾರ್ಡ್ ನ RC ಸಂಖ್ಯೆಯನ್ನು ನಮೂದಿಸಿ ಗೋ (Go) ಬಟನ್ ಮೇಲೆ ಕ್ಲಿಕ್ ಮಾಡಿ, ಡೌನ್ಲೋಡ್ ಮಾಡುತ್ತಿರುವ ನಿಮ್ಮ ಕುಟುಂಬದ ಸದಸ್ಯರು ಯಾರು ಆಪ್ಷನ್ನಲ್ಲಿ ಮಾಹಿತಿ ನಮೂದು ಮಾಡಿ.
* ಇಷ್ಟಾದ ಬಳಿಕ, ಡೌನ್ಲೋಡ್ ಮಾಡಿಕೊಳ್ಳಲು ರೇಷನ್ ಕಾರ್ಡ್ ಗೆ ನೀಡಿರುವ ನೋಂದಾಯಿತ ಮೊಬೈಲ್ ನಂಬರ್ ಗೆ OTP ಕಳಿಸಲಾಗುತ್ತದೆ. OTP ನಮೂದಿಸಿ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.