Ration Card : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು & ಹಳೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!

 

ರೇಷನ್ ಕಾರ್ಡ್ ಗೆ (Ration Card) ಸಂಬಂಧಿಸಿದ ಹಾಗೆ ರಾಜ್ಯದ ಜನತೆಯಿಂದ ಸರ್ಕಾರಕ್ಕೆ ಭಾರಿ ಡಿಮ್ಯಾಂಡ್ ಇದೆ. ಯಾಕೆಂದರೆ ಈಗ ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರೆಂಟಿ ಪ್ರಯೋಜನ (Gyaranty Schemes) ಪಡೆಯುವುದಕ್ಕಾಗಿ ಮಾತ್ರವಲ್ಲದೆ ಸರ್ಕಾರದ ಇನ್ನಿತರ ಗ್ಯಾರಂಟಿಯೇತರ ಯೋಜನೆಗಳ ಪ್ರಯೋಜನ ಪಡೆಯಲು ಕೂಡ ಈ ದಾಖಲೆ ಕಡ್ಡಾಯವಾಗಿದೆ.

WhatsApp Group Join Now
Telegram Group Join Now

ಇನ್ನು ವೈದ್ಯಕೀಯ ಕ್ಷೇತ್ರದ ರಿಯಾಯಿತಿಗಳ ಬಗ್ಗೆ ಹೇಳುವುದಾದರೆ APL ಕಾರ್ಡ್ ಹೊಂದಿರುವವರೆಗೂ ಕೂಡ ಕೂಡ ಕೆಲ ಸೌಲಭ್ಯ ಸಿಗುವುದರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಸೇರಿದಂತೆ ರೇಷನ್ ಕಾರ್ಡ್ ಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಲು (New Ration card application and Correction) ಜನಸಾಮಾನ್ಯರು ಕಾಯುತ್ತಿದ್ದಾರೆ

ಆದರೆ 2023ರ ಚುನಾವಣೆ ನೀತಿ ಸಂಹಿತೆ ಕಾರಣದಿಂದ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡಿಗೆ ಅರ್ಜಿ ಸ್ವೀಕಾರ ಹಾಗೂ ವಿತರಣೆ ಕಾರ್ಯವು ಇನ್ನೂ ಆರಂಭಗೊಂಡಿಲ್ಲ. ಈಗಾಗಲೇ ಅನುಮೋದನೆಗೊಂಡಿರುವ BPL ರೇಷನ್ ಕಾರ್ಡ್ ಗಳನ್ನು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಕೋರಿಕೆಗಳು ಸಲ್ಲಿಕೆಯಾಗುತ್ತಲೇ ಇದೆ. ಇದರ ನಡುವೆ ಗ್ಯಾರಂಟಿ ಯೋಜನೆಗಳು ಬಂದಮೇಲೆ ರೇಷನ್ ಕಾರ್ಡ್ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಪಡೆಯುವುದಕ್ಕೆ ಕಡ್ಡಾಯ ಆಗಿರುವುದರಿಂದ ಹೊಸ ರೇಷನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಇನ್ನೂ ಡಿಮ್ಯಾಂಡ್ ಹೆಚ್ಚಾಗಿದೆ.

ಈ ರೀತಿ ಕಾಯುತ್ತಿದ್ದವರಿಗೆಲ್ಲ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಮೂರ್ನಾಲ್ಕು ಬಾರಿ ಸರ್ಕಾರ ರೇಷನ್ ಕಾರ್ಡ್ ಅಗತ್ಯ ತಿದ್ದುಪಡಿಗಳಿಗೆ ಅವಕಾಶ ನೀಡಿತ್ತು ಆದರೆ ಸರ್ವರ್ ಕೊರತೆ ಮತ್ತು ರಜಾ ದಿನಗಳು ಹಾಗೂ ಇನ್ನಿತರ ಕಾರಣಗಳಿಂದ ಎಲ್ಲರಿಗೂ ಈ ಸೇವೆ ಸಮರ್ಪಕವಾಗಿ ತಲುಪಲು ಸಾಧ್ಯವಾಗಿಲ್ಲ.

ಹಾಗಾಗಿ ಇನ್ನೊಮ್ಮೆ ರಾಜ್ಯದ ಜನತೆಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸ್ವೀಕಾರ ಮತ್ತು ರೇಷನ್ ಕಾರ್ಡ್ ಗಳ ತಿದ್ದುಪಡಿ ಕಾರ್ಯಕ್ಕೆ ಅನುಮತಿ ನೀಡಲಾಗಿದೆ. ದಿನಾಂಕ 06.07.2024 ರಿಂದ ಹಾಗೂ 7.6.2024 ರಂದು ಜನಸಾಮಾನ್ಯರು ತಮ್ಮ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ ಮಾಡಿಸಬಹುದು ಹಾಗೂ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇದಕ್ಕಾಗಿ ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನಾ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಮಾತ್ರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವಿಕೆ ಮತ್ತು ತಿದ್ದುಪಡಿ ಕಾರ್ಯ ಮಾಡಲಾಗುವುದು ಹಾಗಾಗಿ ಪೂರ್ತಿ ಮಾಹಿತಿ ತಿಳಿದುಕೊಂಡು ಸರಿಯಾದ ದಾಖಲೆಗಳ ಜೊತೆ ಹೋಗಿ ನಿಮ್ಮ ಸಮಸ್ಯೆ ಸರಿಪಡಿಸಿಕೊಳ್ಳಿ.

ಈ ಬಾರಿಯೂ ಕೂಡ ಸರ್ವರ್ ಹೊಡೆತದ ಕಾರಣದಿಂದ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಮೂರು ಹಂತಗಳಲ್ಲಿ ಪ್ರತ್ಯೇಕವಾಗಿ ಲಿಂಕ್ ಗಳನ್ನು ಸಿದ್ಧಪಡಿಸಿ ಬೇರೆ ಬೇರೆ ಲಿಂಕ್ ಗಳ ಮೂಲಕ ಕುಂದು ಕೊರತೆ ನಿವಾರಿಸಲು ಸೂಚಿಸಲಾಗಿದೆ. ಈ ಮೇಲೆ ತಿಳಿಸಿದ ಎರಡು ದಿನಗಳಲ್ಲೂ ಕೂಡ ಬೆಳಗ್ಗೆ 10 ರಿಂದ 5 ಗಂಟೆಯ ಒಳಗಡೆ.

ನೀವು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ನಿಮ್ಮ ಬಯೋಮೆಟ್ರಿಕ್ ಮಾಹಿತಿ ಹಾಗೂ ತಿದ್ದುಪಡಿಗೆ ಸಂಬಂಧಪಟ್ಟ ದಾಖಲೆ ಹಾಗೂ ಹೊಸ ರೇಷನ್ ಕಾರ್ಡ್ ಗಾಗಿ ಇವುಗಳ ಜೊತೆ ಆದಾಯ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ನಿಮ್ಮ ಸಮಸ್ಯೆ ಸರಿಪಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಜನರು ಕಾಯುತ್ತಿರುವ ಸಂಗತಿ ಇದೇ ಆಗಿರುವುದರಿಂದ ತಪ್ಪದೆ ಈ ಮಾಹಿತಿಯನ್ನು ಇತರರೊಡನೆ ಹಂಚಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment