Ration Card
ರಾಜ್ಯದಲ್ಲಿ ರೇಷನ್ ಕಾರ್ಡ್ (Ration Card) ವಿಚಾರ ಕಳೆದೆರಡು ವರ್ಷಗಳಿಂದ ಹೆಚ್ಚು ಚರ್ಚೆಯಲ್ಲಿರುವ ವಿಷಯವೇ ಆಗಿದೆ. ಇದಕ್ಕೆ ಹಲವು ಕಾರಣಗಳಿವೆ, ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Elections-2023) ಸಮಯದಲ್ಲಿ ಕಾಂಗ್ರೆಸ್ ಪಕ್ಷ (Congress party) ನೀಡಿದ್ದ ಭರವಸೆ ಯೋಜನೆಗಳಾದ 5 ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಬಹು ಪಾಲು ರೇಷನ್ ಕಾರ್ಡ್ ಆಧಾರಿತ ಯೋಚನೆಗಳೇ ಆಗಿರುವುದು.
ಹೀಗಾಗಿ ಗ್ಯಾರಂಟಿ ಯೋಜನೆಗಳ ಪ್ರಯೋಜನ ಮತ್ತು ಗ್ಯಾರಂಟಿಯೇತರವಾಗಿಯೂ ಸರ್ಕಾರದ ಇನ್ನಿತರ ಯೋಜನೆಗಳ ಪ್ರಯೋಜನ ಪಡೆಯುವುದಕ್ಕಾಗಿ ರೇಷನ್ ಕಾರ್ಡ್ ಗಳಲ್ಲಿ ಇರುವ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಕೊಳ್ಳುವುದಕ್ಕೆ ಮತ್ತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಸಮಸ್ಯೆಯಾಗುತ್ತಿದೆ.
ಸರ್ವರ್ ಮತ್ತು ಇನ್ನಿತರ ನೆಪಗಳಿಂದ ಸಮಸ್ಯೆ ಪರಿಹರಿಸಿಕೊಳ್ಳಲು ಆಗುತ್ತಿಲ್ಲ, ಸರ್ಕಾರ ನಿಗದಿಪಡಿಸುತ್ತಿರುವ ಸಮಯಾವಕಾಶ ಸಾಲುತ್ತಿಲ್ಲ ಎಂಬ ಇನ್ನಿತರ ಸಾಕಷ್ಟು ವಿಷಯಗಳು ರೇಷನ್ ಕಾರ್ಡ್ ಕುರಿತಾಗಿ ಚರ್ಚೆ ಆಗುತ್ತಲೇ ಇವೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಚುನಾವಣೆ ನೀತಿ ಸಂಹಿತೆ (Code of Conduct) ಕಾರಣದಿಂದಾಗಿ ಅನುಮೋದನೆಯಾಗಿದ್ದ ರೇಷನ್ ಕಾರ್ಡ್ ವಿತರಣೆ ಕಾರ್ಯ ಸ್ಥಗಿತಗೊಂಡಿತ್ತು.
ಈ ಸುದ್ದಿ ಓದಿ:- Bank: ಬ್ಯಾಂಕ್ ಖಾತೆಯಲ್ಲಿ 1000 ರೂಪಾಯಿಗಿಂತ ಕಡಿಮೆ ಹಣ ಇದ್ದವರಿಗೆ ಬ್ಯಾಂಕ್ ನಿಂದ ಹೊಸ ರೂಲ್ಸ್.!
ಶೀಘ್ರವೇ ರೇಷನ್ ಕಾರ್ಡ್ ಬಿಡುಗಡೆಗೊಳಿಸುವಂತೆ ಕೋರಿ ಸಾರ್ವಜನಿಕರು ಮನವಿ ಮಾಡುತ್ತಿರುವ ವಿಷಯ ಪತಿನಿತ್ಯ ಮಾಧ್ಯಮ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರಸ್ತಾಪವಾಗುತ್ತಲೇ ಇದೆ ಹಾಗೂ ಇನ್ನು ಸರ್ಕಾರದಿಂದ ಕೂಡ ಆಗಾಗ ರೇಷನ್ ಕಾರ್ಡ್ ಕುರಿತಾಗಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಇವು ಕೂಡ ಸುದ್ದಿಯಾಗಿದೆ.
ಪ್ರಮುಖವಾಗಿ ಎಲ್ಲರಿಗೂ ತಿಳಿದಿರುವಂತೆ ಆರ್ಥಿಕ ಇಲಾಖೆ ಮತ್ತು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ನೀಡಿರುವ ಮಾಹಿತಿಯ ಪ್ರಕಾರವಾಗಿ ರಾಜ್ಯದಲ್ಲಿ 80% ಗಿಂತಲೂ ಹೆಚ್ಚಿನ BPL ರೇಷನ್ ಕಾರ್ಡ್ ಗಳು ಚಾಲ್ತೀಯಲ್ಲಿವೆ ಆದರೆ ಇದರಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ಅನರ್ಹರು ನಕಲಿ ದಾಖಲೆಗಳು ಸೃಷ್ಟಿಸಿ ಅಥವಾ ಸತ್ಯಾಂಶ ಮರೆಮಾಚಿ ಉಳಿಸಿಕೊಂಡಿದ್ದಾರೆ ಎನ್ನುವ ಅಧಿಕೃತ ಮಾಹಿತಿಯು ದೊರೆತಿದೆ.
ಈ ಅನರ್ಹ ರೇಷನ್ ಕಾರ್ಡ್ ಗಳನ್ನು ತೆರವುಗೊಳಿಸದೇ ಇದ್ದಲ್ಲಿ ಅರ್ಹರು ಸೌಲಭ್ಯದಿಂದ ವಂಚಿತರಾಗುತ್ತಾರೆ ಹಾಗೂ ಈಗಾಗಲೇ ರಾಜ್ಯದ BPL ರೇಷನ್ ಕಾರ್ಡ್ ಮಿತಿ ಪೂರ್ತಿಗೊಂಡಿರುವುದರಿಂದ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ BPL ರೇಷನ್ ಕಾರ್ಡ್ ನೀಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಇಂತಹ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಿಕೊಳ್ಳುವ ಕಾರ್ಯಕ್ಕೆ ಸರಕಾರ ಮುಂದಾಗಿದೆ.
ಈ ಸುದ್ದಿ ಓದಿ:- Bhagyalakshmi Bond: ಭಾಗ್ಯ ಲಕ್ಷ್ಮಿ ಬಾಂಡ್ ಇರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!
ಈ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಮಾಧ್ಯಮದ ಪ್ರಶ್ನೆ ಒಂದಕ್ಕೆ ಉತ್ತರಿಸುವಾಗ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪನವರು (Minister K.H Muniyappa) ಈ ಬಗ್ಗೆ ಮಾತನಾಡಿ ಕಳೆದ ಒಂದು ವರ್ಷದಿಂದ ಈ ವಿಚಾರವಾಗಿ ಸಾಕಷ್ಟು ಪರಿಶೀಲನೆ ಕ್ರಮ ಅಧಿಕಾರಿಗಳಿಂದ ನಡೆಯುತ್ತಿದೆ.
ಇದರಿಂದ ಅನರ್ಹರು ಕೂಡ BPL ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೆ ಎನ್ನುವ ಆ’ಘಾ’ತ’ಕಾ’ರಿ ವಿಷಯವು ಕೂಡ ತಿಳಿದು ಬಂದಿದೆ. ಹೀಗಾಗಿ ಅಂತಹ ರೇಷನ್ ಕಾರ್ಡ್ ಗಳನ್ನು APL ರೇಷನ್ ಕಾರ್ಡ್ ಗಳಾಗಿ ವರ್ಗಾಯಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದೇವೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 2006ರ ರೇಷನ್ ಕಾರ್ಡ್ ಮನದಂಡದ ಪ್ರಕಾರವಾಗಿ ಬಿಪಿಎಲ್ ಕಾರ್ಡ್ ಗಳಲ್ಲಿ ಗುರುತಿಸುವುದಾಗಿ ಈ ಹಿಂದೆ ಸಚಿವರು ಮಾಹಿತಿ ಹಂಚಿಕೊಂಡಿದ್ದರು.