Bank Recruitment
ನಮ್ಮ ರಾಜ್ಯದಲ್ಲಿರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವಂತಹ ಸುದ್ದಿಯೊಂದನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ. ಕರ್ನಾಟಕ ರಾಜ್ಯದ ಮಂಗಳೂರು ಭಾಗದಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ (SCDCC) 2024-25 ರಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಸುದ್ದಿ ಓದಿ:- Today Gold Rate: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆ 2,200 ಇಳಿಕೆ ಇವತ್ತಿನ ರೇಟ್ ಎಷ್ಟಿದೆ ನೋಡಿ.!
ಸಹಕಾರಿ ಕ್ಷೇತ್ರದ ಅಧಿಕಾರ ನಿರ್ವಹಿಸುತ್ತಿರುವ ಕರ್ನಾಟಕದ ಈ ಬ್ಯಾಂಕ್ ನಲ್ಲಿ ಹುದ್ದೆ ಮಾಡುವ ಆಸಕ್ತಿ ಹೊಂದಿದ್ದರೆ ಕೂಡಲೇ ಅಪ್ಲೈ ಮಾಡಿ ಹುದ್ದೆ ಪಡೆಯಿರಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲು ಮಾನದಂಡಗಳೇನು? ಹಾಗೂ ಹುದ್ದೆ ಕುರಿತಾದ ಇನ್ನಷ್ಟು ವಿವರ ಹೀಗಿದೆ ನೋಡಿ.
ಮಂಗಳೂರು ಹಾಗೂ ಸುತ್ತಮುತ್ತಲಿನಲ್ಲಿ ಇರುವ ಅಭ್ಯರ್ಥಿಗಳಿಗೆ ಅತ್ಯಂತ ಅನುಕೂಲಕರವಾದ ಮಾಹಿತಿ ಇದಾಗಿದೆ. ಇವರೊಂದಿಗೆ ರಾಜ್ಯದ ಇತರೆ ಭಾಗಗಳ ಅಭ್ಯರ್ಥಿಗಳು ಕೂಡ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಹಾಗಾಗಿ ತಪ್ಪದೆ ಉದ್ಯೋಗ ವಾರ್ತೆಯನ್ನು ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (SCDCC)
ಹುದ್ದೆ ಹೆಸರು:- ದ್ವಿತೀಯ ದರ್ಜೆ ಸಹಾಯಕ
ಒಟ್ಟು ಹುದ್ದೆಗಳ ಸಂಖ್ಯೆ:- 123 ಹುದ್ದೆಗಳು
ಉದ್ಯೋಗ ಸ್ಥಳ:-
ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶ
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ರೂ.24,900 ರಿಂದ ರೂ.56,655 ವೇತನ ಪ್ರತಿ ತಿಂಗಳು ಸಿಗುತ್ತದೆ
* ಇದರೊಂದಿಗೆ ಬ್ಯಾಂಕ್ ನೌಕರರಿಗೆ ಸಿಗುವ ಇನ್ನಷ್ಟು ಸೌಲಭ್ಯಗಳು ಕೂಡ ಸಿಗುತ್ತವೆ
ಶೈಕ್ಷಣಿಕ ವಿದ್ಯಾರ್ಹತೆ:-
ರಾಜ್ಯದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಯಾವುದೇ ವಿಷಯದಲ್ಲಿ ಪೂರೈಸಿದ ಅಭ್ಯರ್ಥಿಗಳು ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದಾಗಿದೆ
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ಈ ಸುದ್ದಿ ಓದಿ:- BPL Ration Card Cancellation: ರಾಜ್ಯದಲ್ಲಿ 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮ ಪಡಿತರ ಚೀಟಿ ಈ ಲಿಸ್ಟ್ ನಲ್ಲಿ ಇದಿಯಾ.? ಹೀಗೆ ಚೆಕ್ ಮಾಡಿ.!
ವಯೋಮಿತಿ ಸಡಿಲಿಕೆ:-
* SC/ST ಅಭ್ಯರ್ಥಿಗಳಿಗೆ 5 ವರ್ಷಗಳು
* OBC ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
* https://scdccbank.com/recruitment/ ಈ ಲಿಂಕ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* ಮೊದಲಿಗೆ ಕೇಳಲಾದ ಎಲ್ಲ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಬಯೋಮಾನ ಹಾಗೂ ಶೈಕ್ಷಣಿಕ ವಿದ್ಯಾರ್ಹತೆ , ಮುಂತಾದ ದಾಖಲೆಗಳಿಗೆ ಪೂರಕದಾಗ ಸಂಖ್ಯೆ ನಮೂದಿಸಿ ಅಥವಾ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಶುಲ್ಕ ಪಾವತಿಸಬೇಕಿದ್ದರೆ ನಿಮ್ಮ ವರ್ಗಕ್ಕೆ ಅನುಕೂಲವಾಗಿ ಸೂಚಿಸಿರುವ ಶುಲ್ಕವನ್ನು ಆನ್ಲೈನ್ ಪೇಮೆಂಟ್ ವಿಧಾನದ ಮೂಲಕ ಅರ್ಜಿ ಶುಲ್ಕ ಪಾವತಿಸಿ ಅದರ ರೆಫರೆನ್ಸ್ ಸಂಖ್ಯೆಗಳನ್ನು ನಮೂದಿಸಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ
ಆಯ್ಕೆ ವಿಧಾನ:-
ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಲಿಖಿತ ರೂಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಆದವರ ಸಂದರ್ಶನ ನಡೆಸಿ ಮತ್ತು ಅವರ ದಾಖಲೆಗಳನ್ನು ಪರಿಶೀಲನೆ ಮಾಡಿ ಅರ್ಹರನ್ನು ಆಯ್ದುಕೊಳ್ಳಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 01 ಜುಲೈ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18 ಜುಲೈ, 2024.