Teacher Recruitment
ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಬೇತಿ ಅಂದರೆ ಸರ್ಕಾರಿ ಶಾಲೆಗಳೊಂದಿಗೆ LKG, UKG ತರಗತಿಗಳನ್ನು ಆರಂಭಿಸಲು ಸರ್ಕಾರವನ್ನು ಅನುಮತಿ ಕೇಳಿತ್ತು ಈ ಬಗ್ಗೆ ಸಾಕಷ್ಟು ಸಮೀಕ್ಷೆ ಚರ್ಚೆ ನಡೆದ ಬಳಿಕ ಮಗುವಿನ ಬೆಳವಣಿಗೆ ದೃಷ್ಟಿಕೋನದಿಂದ ಮತ್ತು ಮಗುವಿಗೆ ಆ ಹಂತದಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ತುಂಬಿಸಿ ತಿಳುವಳಿಕೆ ತರಲು ಇದು ಅನುಕೂಲಕರ ಎಂದು ತಿಳಿದು ಬಂದ ಮೇಲೆ ಪ್ರಸ್ತಾವನೆಗೆ ಸರ್ಕಾರದ ಕಡೆಯಿಂದ ಅನುಮತಿ ಸಿಕ್ಕಿದೆ.
ಕರ್ನಾಟಕ ರಾಜ್ಯದ ಆಯ್ದ ಜಿಲ್ಲೆಗಳ 578 ಶಾಲೆಗಳಲ್ಲಿ ಸರ್ಕಾರಿ LKG ಮತ್ತು ಶಾಲೆಗಳು ಆರಂಭಗೊಳ್ಳುತ್ತಿದೆ. ಈ ಯೋಜನೆಗೆ ಬೇಕಾದ ಶಿಕ್ಷಕರು ಹಾಗೂ ಸಿಬ್ಬಂದಿಗಳ ನೇಮಕಾತಿ ಕುರಿತಾಗಿ ಈಗ ಸರ್ಕಾರದ ಕಡೆಯಿಂದ ಮಾರ್ಗಸೂಚಿಯನ್ನೊಳಗೊಂಡ ಮತ್ತೊಂದು ನೋಟಿಫಿಕೇಶನ್ ಬಿಡುಗಡೆ ಆಗಿದೆ. ಇದರಲ್ಲಿ ತಿಳಿಸಿರುವುದೇನೆಂದರೆ, ಈ ಮೇಲೆ ತಿಳಿಸಿದಂತೆ ಸರ್ಕಾರಿ LKG, UKG ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಇನ್ನಿತರ ಅವಶ್ಯಕತೆಗಳಿಗಾಗಿ ಶಿಕ್ಷಕಿ ಹಾಗೂ ಸಹಾಯಕರ ಅಗತ್ಯ ಇದೆ.
ಇದರ ನೇಮಕಾತಿ ಶೀಘ್ರವಾಗಿ ನಡೆಯಲಿದೆ ಎಂದು ತಿಳಿಸಿ, ಈ ಹುದ್ದೆಗಳನ್ನು ಪಡೆಯಲು ನಿಗದಿಪಡಿಸಿರುವ ಮಾನದಂಡಗಳು, ಸಿಗುವ ಗೌರವಧನ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಆಯ್ಕೆ ವಿಧಾನ ಇನ್ನಿತರ ಅಂಶಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಆ ಪ್ರಕಾರವಾಗಿ ನೀಡಿರುವ ಸೂಚನೆಗಳನ್ನು ಪೂರೈಸುವ ಅಭ್ಯರ್ಥಿಗಳು ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದಾಗಿದೆ ಹಾಗಾಗಿ ನೇಮಕಾತಿ ಕುರಿತಂತೆ ಕೆಲ ಪ್ರಮುಖ ಸಂಗತಿಗಳನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ ನೋಡಿ.
ಕೇಂದ್ರ ಸರ್ಕಾರ ಶಿಕ್ಷಣ ಸಚಿವಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಅನುಮೋದನೆಯಾಗಿರುವ ಪ್ರಕಾರ ರಾಜ್ಯದ ಸರ್ಕಾರಿ ಹಾಗೂ ಪ್ರಾರ್ಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾರ್ಥಮಿಕ ತರಗತಿಗಳಾದ ಎಲ್ ಕೆ ಜಿ ಯು ಕೆ ಜಿ ಆರಂಭಿಸಲು ಅನುಮತಿ ದೊರೆತಿದೆ 202324ನೇ ಸಾಲಿನಲ್ಲಿ 262 ಶಾಲೆ ಮತ್ತು ಪ್ರಸಕ್ತ ಸಾಲಿನಲ್ಲಿ 316 ಶಾಲೆಗಳನ್ನು ತೆರೆಯಲು ಅನುಮತಿ ಸಿಕ್ಕಿದೆ, ಒಟ್ಟು 578 ಶಾಲೆಗಳಾಗಿದ್ದು.
ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಒಬ್ಬ ಶಿಕ್ಷಕಿ ಹಾಗೂ ಒಬ್ಬ ಆಯ ಅಗತ್ಯ ಇದೆ ಸದ್ಯದವರೆಗೆ ಈಗ ಅವಶ್ಯಕತೆ ಇರುವಷ್ಟು ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು 10 ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ. ನಿಗದಿಪಡಿಸಿರುವ ಕಂಡೀಶನ್ ಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆ ಪಡೆಯಬಹುದು
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಮಾನದಂಡಗಳು:-
* ಸರ್ಕಾರಿ LKG, UKG ಶಾಲಾ ಶಿಕ್ಷಕ ಅಥವಾ ಶಿಕ್ಷಕಿ ಹುದ್ದೆಗಳನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿತೀಯ PUC ಪರೀಕ್ಷೆಯನ್ನು ಶೇಕಡ 45% ಅಂಕಗಳಿಗೆ ಕಡಿಮೆ ಇಲ್ಲದಂತೆ ಉತ್ತೀರ್ಣರಾಗಿರಬೇಕು ಅಥವಾ
* NCET ಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ಅಥವಾ ಮೂರು ವರ್ಷಗಳ ಡಿಪ್ಲೋಮೋ ಇನ್ ನರ್ಸರಿ ಟ್ಯೂಷನ್ ಎಜುಕೇಶನ್ / ಡಿಪ್ಲೋಮಾ ಇನ್ ಫ್ರೀ ಸ್ಕೂಲ್ ಎಜುಕೇಶನ್ / ಅರ್ಲಿ ಚೈಲ್ಡ್ ಹುಡ್ ಎಜುಕೇಶನ್ ಪ್ರೋಗ್ರಾಮ್(DECED ) ಅಥವಾ B.ed ಉತ್ತೀರ್ಣರಾದವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ
* ಒಂದು ವೇಳೆ ಪೂರ್ವ ಪ್ರಾಥಮಿಕ ಶಾಲೆ, ತರಬೇತಿ ಪಡೆಯುದಿದ್ದವರು ಅರ್ಜಿ ಸಲ್ಲಿಸಿದ್ದರೆ PUCಯಲ್ಲಿ 50% ಮತ್ತು N-CET ಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ D.ed ಆದರಿಗೆ ಅವಕಾಶ ಕೊಡಲಾಗಿದೆ
* 18 ವರ್ಷ ಮೇಲ್ಪಟ್ಟ 45 ವರ್ಷ ವಯಸ್ಸಿನ ಒಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
* ಶಿಕ್ಷಕ ಹುದ್ದೆಗಳಿಗೆ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಆದರೆ ಆಯಾ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ.
* ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಉತ್ತೀರ್ಣರಾಗಿರಬೇಕು, ಆಯಾ ಗ್ರಾಮ ವಾರ್ಡ್ ನವರ ಆಗಿರಬೇಕು ಒಂದು ವೇಳೆ ಲಭ್ಯವಾಗಿಲ್ಲದೆ ಇದ್ದರೆ ಪಕ್ಕದ ವಾರ್ಡಿನ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ
ವೇತನ ಶ್ರೇಣಿ:-
* LKG, UKG ಶಿಕ್ಷಕ ಅಥವಾ ಶಿಕ್ಷಕಿ ಹುದ್ದೆಗಳಿಗೆ ನೇಮಕ ಆಗುವವರಿಗೆ ಅತಿಥಿ ಶಿಕ್ಷಕರ ಸಂಭಾವನೆಯಂತೆ ಗೌರವಧನ ನಿಗದಿಪಡಿಸಲಾಗಿದೆ. ಆ ಪ್ರಕಾರವಾಗಿ ಶಿಕ್ಷಕ / ಶಿಕ್ಷಕಿ ಹುದ್ದೆಗಳಿಗೆ ರೂ.10,000
* ಹಾಗೂ ಆಯಾ ಹುದ್ದೆಗಳಿಗೆ ರೂ.5000 ನಿಗದಿಪಡಿಸಲಾಗಿದೆ.
ನೇಮಕಾತಿ ಪ್ರಕ್ರಿಯೆ:-
ಆಯ್ಕೆ ಪ್ರಕ್ರಿಯೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲಾ SDMC ಅಧ್ಯಕ್ಷರು ಮತ್ತು ಒಬ್ಬ ಹಿರಿಯ ಶಿಕ್ಷಕರ ಸಮ್ಮುಖದಲ್ಲಿ ನಡೆಯುತ್ತದೆ.