Revenue Department
ಕಂದಾಯ ಇಲಾಖೆ(Department of Revenue)ಯಿಂದ ಮಂಜೂರಾದ ಜಮೀನುಗಳ ಪೋಡಿ(Waste of lands) ಮತ್ತು ದುರಸ್ತಿ ಪಾರದರ್ಶಕಗೊಳಿಸಲು ನೂತನ ಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಸದನದಲ್ಲಿ ಕಂದಾಯ(karnataka revenue department) ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಏನಿದು ನೂತನ ಕ್ರಮ? ಹೇಗೆ ಕಾರ್ಯ ನಿರ್ವಹಿಸಲಿದೆ? ಇದರಿಂದ ರೈತರಿಗೆ ಅಗುವ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ…
ರೈತರು ತಮ್ಮ ಜಮೀನಿನ ಮಾಲೀಕತ್ವಕ್ಕೆ ಸಂಬಂದಪಟ್ಟ ದಾಖಲೆಗಳಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆ(Technical problem)ಗಳನ್ನು ಪರಿಹರಿಸಿಕೊಳ್ಳಲು ಸರ್ಕಾರಿ ಕಚೇರಿಗಳನ್ನು ಅನೇಕ ಬಾರಿ ಅಲೆದಾಡುವ ಪರಿಸ್ಥಿತಿ ಇದ್ದು, ಇದಕ್ಕೆ ಸೂಕ್ತ ಪರಿಹಾರ ಕ್ರಮ ಅನುಸರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಗೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ.
ಹೌದು, ರೈತರ ತೊಂದರೆ ನಿವಾರಣೆಗೆ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಇತ್ಯಾದಿಗಳ ಇತ್ಯರ್ಥಕ್ಕಾಗಿ ಕಂದಾಯ ಅದಾಲತ್(Revenue Adalat) ನಡೆಸಲಾಗುತ್ತಿದೆ. ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್ಲೈನ್ನಲ್ಲಿ ನಿರ್ವಹಿಸಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ರೈತರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಸರ್ಕಾರ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಇತ್ಯಾದಿಗಳ ಇತ್ಯರ್ಥಕ್ಕಾಗಿ ಕಂದಾಯ ಅದಾಲತ್ಗಳನ್ನು ನಡೆಸುತ್ತಿದೆ. ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್ಲೈನ್ ಮುಖಾಂತರ ನಿರ್ವಹಿಸಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಮಂಡಲ ಕಲಾಪದಲ್ಲಿ ತಿಳಿಸಿದ್ದಾರೆ.
ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಪಾರದರ್ಶಕಗೊಳಿಸಲು ನೂತನ ತಂತ್ರಾಂಶ ಜಾರಿಯಾಗಲಿದೆ. ಸರ್ಕಾರ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಇತ್ಯಾದಿಗಳ ಇತ್ಯರ್ಥಕ್ಕಾಗಿ ಕಂದಾಯ ಅದಾಲತ್ಗಳನ್ನು ನಡೆಸುತ್ತಿದೆ. ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್ಲೈನ್ ಮುಖಾಂತರ ನಿರ್ವಹಿಸಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
700 ಸರ್ವೆಯರ್ ಮತ್ತು 34 ಎಡಿಎಲ್‌ಆರ್‌ಗಳನ್ನು ನೇಮಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸುತ್ತೇನೆ ಎಂದು ಹೇಳಲಾರೆ. ಆದರೆ ವ್ಯವಸ್ಥೆಯ ಸುಧಾರಣೆಗೆ ಅಗತ್ಯ ನೀಲನಕಾಶೆ ರೂಪಿಸಿದ್ದೇವೆ ಎಂದು ತಿಳಿಸಿದರು.
ರೈತರು ತಮ್ಮ ಜಮೀನುಗಳ ಪೋಡಿ, ದುರಸ್ತಿಗೆ ಕಂದಾಯ ಇಲಾಖೆಯನ್ನು ಅನೇಕ ಬಾರಿ ಭೇಟಿ ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ತಮ್ಮ ಅರ್ಜಿ ವಿಲೇವಾರಿಯೇ ಅಗಿರುವುದಿಲ್ಲ ಎಂದು ಅನೇಕ ರೈತರು ಕಂದಾಯ ಇಲಾಕೆಯ ಅಧಿಕಾರಿಗಳನ್ನು ದೂರುತ್ತಾರೆ.
ಇನ್ನು ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಲು ಅರ್ಜಿ ಸಲ್ಲಿಕೆ ವಿಧಾನವನ್ನು ಆನ್‌ಲೈನ್ ಮುಖಾಂತರ ನಿರ್ವಹಿಸಲು ಕಂದಾಯ ಇಲಾಖೆಯಿಂದ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ನಿಗದಿತ ಸಮಯದಲ್ಲಿ ಅರ್ಜಿ ವಿಲೇವಾರಿ ಮಾಡಲು ಸದ್ಯವಾಗುತ್ತದೆ. ಜೊತೆಗೆ ಅಧಿಕಾರಿಗಳಿಗೆ ಸಮರ್ಪಕವಾಗಿ ಕೆಲಸ ಮಾಡಲು ಸಹಕರಿ ರೈತರು ಹಲವು ತಿಂಗಳು ಕಾಯುವುದು ತಪ್ಪುತ್ತದೆ ಎನ್ನಲಾಗುತ್ತಿದೆ.
ಈ land records website link-ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಜಮೀನ ಎಲ್ಲಾ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ನೋಡಬಹುದು! ರೈತರು/ಸಾರ್ವಜನಿಕರು ಈ land records website ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲೇ ನಿಮ್ಮ ಜಮೀನಿಗೆ ಸಂಬಂದಪಟ್ಟ ಎಲ್ಲಾ ಉಪಯುಕ್ತ ದಾಖಲಾತಿಗಳನ್ನು ಮನೆಯಲ್ಲೇ ಕುಳಿತು ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದು.