RRB Recruitment
ಭಾರತೀಯ ರೈಲ್ವೆ ಇಲಾಖೆ(Department of Indian Railways)ಯು ಇದೀಗ ಟೆಕ್ನೀಷಿಯನ್ ಹುದ್ದೆ(Technician Post)ಗಳಿಗೆ ಮತ್ತೆ ಅರ್ಜಿ(Application) ಸ್ವೀಕಾರ ಮಾಡಲಿದೆ. ಅದಕ್ಕೆ ಸಂಬಂಧಿತ ಹೊಸ ವೇಳಾಪಟ್ಟಿ(New schedule) ಬಿಡುಗಡೆ ಮಾಡಿದೆ. ನೀವು ಕೇಂದ್ರ ಸರ್ಕಾರಿ ಉದ್ಯೋಗ(Central Government Jobs) ಆಸಕ್ತರಾಗಿದ್ದಲ್ಲಿ ಅರ್ಜಿ ಸಲ್ಲಿಸಲು ಸಿದ್ಧರಾಗಿ.
ಒಟ್ಟಾರೆ 14,298 ಟೆಕ್ನೀಷಿಯನ್‌ಗಳ ನೇಮಕ ಪ್ರಕ್ರಿಯೆ(recruitment process)ಗೆ ಈ ವರ್ಷ ರೈಲ್ವೆ ಇಲಾಖೆ ಮುಂದಾಗಿದೆ. ಅರ್ಜಿಗೆ ಮತ್ತೆ ಲಿಂಕ್ ಬಿಡುಗಡೆ ಯಾವಾಗ, ಎಲ್ಲಿಯವರೆಗೆ ಅರ್ಜಿ ಸಲ್ಲಿಸಬಹುದು, ಪ್ರಮುಖ ಸೂಚನೆಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.
ಭಾರತೀಯ ರೈಲ್ವೆ(Indian Railways)ಯು ಇತ್ತೀಚೆಗೆ ಮೊದಲಿಗೆ 9,144 ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಬಿಡುಗಡೆ ಮಾಡಿತ್ತು. ಅನಂತರದಲ್ಲಿ 5154 ಟೆಕ್ನೀಷಿಯನ್ ಗ್ರೇಡ್ 3 ಹುದ್ದೆಗಳನ್ನು ಇತರೆ ಕೆಲವು ವರ್ಕ್‌ಶಾಪ್ ಹಾಗು ಡಿವಿಷನ್‌ಗಳಲ್ಲಿ ಭರ್ತಿ ಮಾಡಲು ತಿದ್ದುಪಡಿ ಅಧಿಸೂಚನೆ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಆನ್‌ಲೈನ್ ಮೂಲಕ ಅರ್ಜಿ ಹಾಕಲು ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಈ ಸುದ್ದಿ ಓದಿ:- UPI Payment: ಮೊಬೈಲ್‌ನಲ್ಲಿ ಹಣ ಕಳಿಸೋರಿಗೆ ಈ ರೂಲ್ಸ್ ಕಡ್ಡಾಯ.!
ಈ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆಯ ಕೇಂದ್ರ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಒಟ್ಟಾರೆ 14,298 ಟೆಕ್ನೀಷಿಯನ್‌ಗಳ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಮೊದಲಿಗೆ ಕೇವಲ ಸುಮಾರು 18 ಕೆಟಗರಿಗಳಲ್ಲಿ 9,144 ಟೆಕ್ನೀಷಿಯನ್ (ಗ್ರೇಡ್ 1, 3) ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದ್ದ ರೈಲ್ವೆ ಇಲಾಖೆ.
ಹಲವು ವರ್ಕ್‌ಶಾಪ್, ಡಿವಿಷನ್‌ಗಳಿಂದ ಹೆಚ್ಚುವರಿ 22 ಕೆಟಗರಿಗಳಲ್ಲಿ ಟೆಕ್ನೀಷಿಯನ್ ಹುದ್ದೆಗಳಿಗೆ ಬೇಡಿಕೆ ಸಲ್ಲಿಕೆಯಾದ ಕಾರಣ, ಇದೀಗ ಒಟ್ಟಾರೆ 40 ಕೆಟಗರಿಗಳಲ್ಲಿ 14,298 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸದವರು ಸಹ ಈಗ ಒಟ್ಟಾರೆ 14,298 ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಿರಿ.
ಹೊಸದಾಗಿ ಸೇರಿಸಲಾದ ಕೆಲವು ವರ್ಕ್‌ಶಾಪ್ / PUs ಗಳ 19 ರಿಂದ 40 ರ ವರೆಗಿನ ಕೆಟಗರಿ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ, ಮೆಡಿಕಲ್ ಸ್ಟ್ಯಾಂಡರ್ಡ್, ವಿಕಲಚೇತನರಿಗೆ ಅರ್ಹತೆಗಳ ಅಂಶಗಳು ಕೆಲವು ಬದಲಾವಣೆಯಿಂದ ಕೂಡಿದ್ದು, ಈ ಕುರಿತು ತಿಳಿಯಲು, ಸಂಪೂರ್ಣ ಅಧಿಸೂಚನೆಯನ್ನು https://www.rrbbnc.gov.in/ ಗೆ ಭೇಟಿ ನೀಡಿ ‘CEN 02/2024 Various categories of Technicians Gr.III’ ಪದನಾಮದಡಿ ನೀಡಲಾದ ತಿದ್ದುಪಡಿ ಅಧಿಸೂಚನೆ ಲಿಂಕ್ ಅನ್ನು ಕ್ಲಿಕ್ ಮಾಡಿ, ಓದಿಕೊಳ್ಳಿ.
ಈ ಸುದ್ದಿ ಓದಿ:- Pension : ಇನ್ಮುಂದೆ ಈ ದಾಖಲೆ ಇದ್ದರೆ ಮಾತ್ರ ಪಿಂಚಣಿ ಹಣ ನಿಮಗೆ ಸಿಗೋದು ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!
ಅರ್ಜಿ ಸಲ್ಲಿಸಲು ನೀಡಿದ ಹೊಸ ವೇಳಾಪಟ್ಟಿ
– ಆರ್‌ಆರ್‌ಬಿ ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 02-10-2024
– ಆರ್‌ಆರ್‌ಬಿ ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಸ್ವೀಕಾರ ಕೊನೆ ದಿನಾಂಕ : 16-10-2024 ರ ರಾತ್ರಿ 23-59 ಗಂಟೆವರೆಗೆ.
– ಆರ್‌ಆರ್‌ಬಿ ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಹಾಕಲು ಭೇಟಿ ನೀಡಬೇಕಾದ ವೆಬ್ ವಿಳಾಸ : www.rrbapply.gov.in
ಹೊಸದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಾಗೂ ಈಗಾಗಲೇ ಅರ್ಜಿ ಹಾಕಿರುವ ಅಭ್ಯರ್ಥಿಗಳು 40 ಕೆಟಗರಿ ಹುದ್ದೆಗಳ ಪೈಕಿ ಯಾವುದೇ ಕೆಟಗರಿ ಹುದ್ದೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. 2-40 ಕೆಟಗರಿ ಹುದ್ದೆಗಳಿಗೆ ಆರ್‌ಆರ್‌ಬಿ ಹಾಗೂ ಪೋಸ್ಟ್ ಆಧ್ಯತೆಯನ್ನು ಬದಲಾವಣೆ ಮಾಡಲು, ವಿದ್ಯಾರ್ಹತೆ / ಭಾವಚಿತ್ರ ಹೊಸದಾಗಿ ಅಪ್‌ಲೋಡ್ ಮಾಡಲು / ಸಹಿ ಅಪ್‌ಲೋಡ್ ಮಾಡಲು ಮತ್ತೆ ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ
– ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ 1092
– ಟೆಕ್ನೀಷಿಯನ್ ಗ್ರೇಡ್ -3 8052
– ಹೊಸದಾಗಿ ಸೇರ್ಪಡೆಯಾದ ಹುದ್ದೆಗಳು 5154
– ಒಟ್ಟು ಹುದ್ದೆಗಳ ವಿವರ 14,298
– ರೈಲ್ವೆ ಟೆಕ್ನೀಷಿಯನ್ ಹುದ್ದೆಗಳಿಗೆ ವಿದ್ಯಾರ್ಹತೆ
– ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ : ಈ ಹುದ್ದೆಗಳಿಗೆ ಬಿಎಸ್ಸಿ / ಡಿಪ್ಲೊಮ / ಇಂಜಿನಿಯರಿಂಗ್ ಪಾಸ್ ಮಾಡಿರಬೇಕು.
– ಟೆಕ್ನೀಷಿಯನ್ ಗ್ರೇಡ್ -3 : ಮೆಟ್ರಿಕ್ಯೂಲೇಷನ್ ಜತೆಗೆ ಐಟಿಐ ಪಾಸ್ ಮಾಡಿರಬೇಕು. ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು.
– ಹೊಸ ಕೆಟಗರಿ ಹುದ್ದೆಗಳಿಗೆ ವಿದ್ಯಾರ್ಹತೆಯನ್ನು ತಿದ್ದುಪಡಿ ಅಧಿಸೂಚನೆಯಲ್ಲಿ ಓದಿಕೊಳ್ಳಬಹುದು.
ರೈಲ್ವೆ ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ
– ಕರ್ನಾಟಕ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ https://www.rrbbnc.gov.in/ ಗೆ ಭೇಟಿ ನೀಡಿ.
– ತೆರೆದ ವೆಬ್‌ಸೈಟ್ ಮುಖಪುಟದಲ್ಲಿ ‘CEN 02/2024 – Technician Categories Detailed CEN NEW’ ಎಂದಿರುವ ಮುಂದೆ ತಿದ್ದುಪಡಿ ಇಂಗ್ಲಿಷ್, ಹಿಂದಿ ನೋಟಿಫಿಕೇಶನ್ ಇರುತ್ತದೆ. ಕ್ಲಿಕ್ ಮಾಡಿ ಓದಿಕೊಳ್ಳಿ.
– ಇದರ ಕೆಳಗಡೆ ‘ Click to Submit Online Application’ ಎಂದಿರುವಲ್ಲಿ ಕ್ಲಿಕ್ ಮಾಡಿ. ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
– ಈ ವೆಬ್‌ಪೇಜ್‌ನಲ್ಲಿ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಪ್ರದರ್ಶಿತವಾಗುವ ಆಯ್ಕೆಗಳ ಪೈಕಿ ‘Create An Account’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಕೇಳಲಾಗುವ ಮಾಹಿತಿಗಳನ್ನು ನೀಡಿರಿ. ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
– ನಂತರ ಮುಂದುವರೆದು ಇನ್ನಷ್ಟು ವೈಯಕ್ತಿಕ ಮಾಹಿತಿಗಳು, ಶೈಕ್ಷಣಿಕ ಮಾಹಿತಿಗಳು, ಮೀಸಲಾತಿ ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ಕೇಳಲಾಗುತ್ತದೆ.
– ಟೈಪಿಸಿ ಹಾಗೂ ದಾಖಲೆಗಳ ಸಾಫ್ಟ್‌ಕಾಪಿಯನ್ನು ಅಪ್‌ಲೋಡ್ ಮಾಡಿ. ಅರ್ಜಿ ಸಲ್ಲಿಸಿ.
– ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಿ.
– ಪೂರ್ಣಗೊಂಡ ಅರ್ಜಿಯನ್ನು ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ರೈಲ್ವೆ ಹುದ್ದೆ ಅರ್ಜಿಗೆ ಅಕೌಂಟ್ ಕ್ರಿಯೇಟ್ ಮಾಡಲು ಬೇಕಾದ ಮಾಹಿತಿ, ದಾಖಲೆಗಳು
ಹೆಸರು, ತಂದೆ ಹೆಸರು, ತಾಯಿ ಹೆಸರು, ಜನ್ಮ ದಿನಾಂಕ ದಾಖಲೆ, ಲಿಂಗ ಮಾಹಿತಿ, ಆಧಾರ್ ಕಾರ್ಡ್, ಇಮೇಲ್ ವಿಳಾಸ, ಮೊಬೈಲ್ ನಂಬರ್, ಇವುಗಳಿಗೆ ಬರುವ ಓಟಿಪಿ. ಅಕೌಂಟ್ ಕ್ರಿಯೇಟ್ ಆದ ನಂತರ ಮತ್ತೆ ಲಾಗಿನ್ ಆಗಿ ವಿದ್ಯಾರ್ಹತೆ, ಮೀಸಲಾತಿ, ವೈಯಕ್ತಿಕ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.
ಈ ಸುದ್ದಿ ಓದಿ:- Survey Sketch: ನಿಮ್ಮ ಜಮೀನಿನ ಸರ್ವೇ ಸ್ಕೆಚ್ಚ್ ಅನ್ನು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯಿರಿ.!
ರೈಲ್ವೆ ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಶುಲ್ಕ ವಿವರ
ಸಾಮಾನ್ಯ ಅರ್ಹತೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ರೂ.500. ರೂ.400 ಹಿಂದುರಿಗಿಸಲಾಗುತ್ತದೆ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.250.
ಹುದ್ದೆವಾರು ಬೇಸಿಕ್ ವೇತನ
– ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ : Rs.29200.
– ಟೆಕ್ನೀಷಿಯನ್ ಗ್ರೇಡ್ -3 : Rs.19900.