RRCAT
10ನೇ ಕ್ಲಾಸ್ ಪಾಸಾದವ್ರಿಗೆ ಇಲ್ಲಿದೆ ಭರ್ಜರಿ ಉದ್ಯೋಗವಕಾಶ. ಹೌದು, ರಾಜ ರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ (Raja Ramanna Center for Advanced Technology – RRCAT) ಟ್ರೇಡ್ ಅಪ್ರೆಂಟಿಸ್ ಪೋಸ್ಟ್ (Trade Apprentice Post)ಗಳ ಭರ್ತಿಗೆ ನೇಮಕ ಪ್ರಕಟಣೆ (Recruitment Notification) ಬಿಡುಗಡೆ ಮಾಡಿದೆ.
ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ (test) ಇಲ್ಲದೇ ಕೇವಲ ಎಸ್ಎಸ್ಎಲ್ಸಿ (SSLC) ಹಾಗೂ ಐಟಿಐ (ITI) ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ (Merit list) ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು, ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ಟ್ರೇಡ್ – ಹುದ್ದೆ ಸಂಖ್ಯೆ
– ವೆಲ್ಡರ್ (ಗ್ಯಾಸ್ ಮತ್ತು ಇಲೆಕ್ಟ್ರಾನಿಕ್) – 4
– ಫಿಟ್ಟರ್ – 22
– ಮಷಿನಿಸ್ಟ್ – 6
– ಟರ್ನರ್ – 6
– ಡ್ರಾಟ್ಸ್ಮನ್ (ಮೆಕ್ಯಾನಿಕಲ್) – 8
– ಮೆಕ್ಯಾನಿಕ್ ರೆಫ್ರಿಜರೇಷನ್ ಅಂಡ್ ಏರ್ ಕಂಡೀಷನಿಂಗ್ – 4
– ಇಲೆಕ್ಟ್ರೀಷಿಯನ್ – 10
– ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ – 2
– ಇಲೆಕ್ಟ್ರೋಪ್ಲೇಟರ್ – 3
– ಕೋಪಾ – 6
– ಪ್ಲಂಬರ್ – 2
– ಸರ್ವೇಯರ್ – 2
– ಮೇಷನ್ – 1
– ಕಾರ್ಪೆಂಟರ್ – 1
– ಡ್ರಾಟ್ಸ್ಮನ್ (ಸಿವಿಲ್) – 1
– ಸೆಕ್ರೇಟರಿಯಟ್ ಅಸಿಸ್ಟಂಟ್ – 18
ಈ ಸುದ್ದಿ ಓದಿ:- Cast & Income Certificate: ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ರಿನಿವಲ್ ಮಾಡುವ ವಿಧಾನ.
ವಿದ್ಯಾರ್ಹತೆ
ಅಪ್ರೆಂಟಿಸ್ ಹುದ್ದೆ ನೇಮಕ ಮಾಡುವ ಟ್ರೇಡ್ವಾರು ಐಟಿಐ ಶಿಕ್ಷಣವನ್ನು ಪಡೆದಿರಬೇಕು. ಎನ್ಸಿವಿಟಿ ಅಥವಾ ಎಸ್ಸಿವಿಟಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಮೀರಿರಬಾರದು, ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 09-01-2001 ಹಾಗೂ 09-01-2007 ರ ನಡುವೆ ಜನಿಸಿರಬೇಕು.
ಪ್ರಮುಖ ದಿನಾಂಕಗಳು
– ಆನ್ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭಿಕ ದಿನಾಂಕ : 06-09-2024
– ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 30-09-2024 ರ ಸಂಜೆ 05 ಗಂಟೆವರೆಗೆ.
– ಆರ್ಆರ್ಸಿಎಟಿ ಅಪ್ರೆಂಟಿಶಿಪ್ ಪೋರ್ಟಲ್ ನಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆ ದಿನಾಂಕ: 14-10-2024
– ಮೆರಿಟ್ ಲಿಸ್ಟ್ನ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡುವ ದಿನಾಂಕ: 19-10-2024
– ಅಂತಿಮವಾಗಿ ಆಯ್ಕೆ ಪಟ್ಟಿ ಬಿಡುಗಡೆ ಮಾಡುವ ದಿನಾಂಕ: 28-10-2024
ಈ ಸುದ್ದಿ ಓದಿ:- Bank: ಬ್ಯಾಂಕ್ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಎಚ್ಚರಿಕೆ.! ಈ ಕೆಲಸ ಮಾಡದಿದ್ದರೆ ನಿಮ್ಮ ಅಕೌಂಟ್ ಕ್ಲೋಸ್ ಆಗುತ್ತೆ.!
ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನೇಮಕಗೊಂಡವರಿಗೆ ಅಪ್ರೆಂಟಿಸ್ ಕಾಯ್ದೆ ಪ್ರಕಾರ ಮಾಸಿಕ ಸ್ಟೈಫಂಡ್ ಅನ್ನು ನೀಡಲಾಗುತ್ತದೆ. ತರಬೇತಿ ಅವಧಿ ಮುಗಿದ ನಂತರ ಹುದ್ದೆ ಮೇಲೆ ಯಾವುದೇ ಹಕ್ಕು ಅಭ್ಯರ್ಥಿಗಳಿಗೆ ಇರುವುದಿಲ್ಲ.
ಮೇಲಿನ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಲು ವೆಬ್ಸೈಟ್ https://www.apprenticeshipindia.gov.in/ ಅಥವಾ https://info.rrcat.gov.in/recdev/recdev_ad_appr_oct_24/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಎಸ್ಎಸ್ಎಲ್ಸಿ ಅಂಕಪಟ್ಟಿ, ಐಟಿಐ ವಿದ್ಯಾರ್ಹತೆ ದಾಖಲೆ, ಇಮೇಲ್ ವಿಳಾಸ, ಮೊಬೈಲ್ ನಂಬರ್, ಇತರೆ ದಾಖಲೆಗಳು ಅರ್ಜಿಗೆ ಅಗತ್ಯವಾಗಿವೆ.