ಮೊಬೈಲ್ ನಲ್ಲಿ ಜಮೀನಿನ RTC ಚೆಕ್ ಮಾಡುವ ವಿಧಾನ, ಎಷ್ಟು ವಿಸ್ತೀರ್ಣ ಇದೆ? ಯಾರ ಹೆಸರಿನಲ್ಲಿ ಇದೆ? ಎಲ್ಲಾ ಮಾಹಿತಿ ಕೇವಲ 3 ನಿಮಿಷದಲ್ಲಿ ಲಭ್ಯ.!

RTC

ಪ್ರತಿಯೊಬ್ಬ ರೈತನಿಗೂ ಕೂಡ ತನ್ನ ಜಮೀನ RTC ಎನ್ನುವುದು ಒಂದು ಪ್ರಮುಖ ದಾಖಲೆಯಾಗಿದೆ. ಆತ ಸರ್ಕಾರದಿಂದ ಸಿಗುವ ಯಾವುದೇ ಯೋಜನೆಗಳ ಅನುದಾನವನ್ನು ಪಡೆಯಬೇಕು ಎಂದರೆ ತಪ್ಪದೇ ತನ್ನ ಹೆಸರಿನಲ್ಲಿ ಇರುವ ಆರ್ ಟಿ ಸಿ ಯನ್ನು ದಾಖಲೆಯಾಗಿ ನೀಡಬೇಕು ಮತ್ತು ಆಗಾಗ ರೈತ ತನ್ನ RTC ಚೆಕ್ ಮಾಡಬೇಕಾಗುತ್ತದೆ. ಮೊಬೈಲ್ ಮೂಲಕ ಹೇಗೆ ಜಮೀನಿನ RTC ವಿವರ ನೋಡಬಹುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ Google ಅಥವಾ Chrome ಗೆ ಹೋಗಿ Bhoomi ಎಂದು ಟೈಪ್ ಮಾಡಿ ಟೈಪ್ ಸರ್ಚ್ ಕೊಡಿ.
* Bhoomi Online / Land records ಎನ್ನುವ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ವೆಬ್ಸೈಟ್ ಲಿಂಕ್ ಸಿಗುತ್ತದೆ.
* ಒಂದು ಹೊಸ ಪೇಜ್ ಓಪನ್ ಆಗುತ್ತದೆ. ನಿಮ್ಮ ಆಯ್ಕೆಯ ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇದನ್ನು ನೋಡಬಹುದು.

WhatsApp Group Join Now
Telegram Group Join Now

* Current year / Old Year ಎನ್ನುವ ಆಪ್ಷನ್ ಇರುತ್ತದೆ ಅದರಲ್ಲಿ Current year ಎನ್ನುವುದನ್ನು ಸೆಲೆಕ್ಟ್ ಮಾಡಿ.
* Select District ಮೇಲೆ ಕ್ಲಿಕ್ ಮಾಡಿ ಜಿಲ್ಲೆಗಳ ಹೆಸರು ಬರುತ್ತದೆ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.
* ಅದೇ ರೀತಿ Select Taluk ಎನ್ನುವುದರ ಮೇಲೆ ಕ್ಲಿಕ್ ಮಾಡಿ ನೀವು ಸೆಲೆಕ್ಟ್ ಮಾಡಿದ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳ ಹೆಸರು ಬರುತ್ತದೆ, ಅದರಲ್ಲಿ ನಿಮ್ಮ ತಾಲೂಕಿನ ಹೆಸರನ್ನು ಸೆಲೆಕ್ಟ್ ಮಾಡಿ. ಹಾಗೆಯೇ Select Hobli ಕ್ಲಿಕ್ ಮಾಡಿ ನಿಮ್ಮ ಹೋಬಳಿಯ ಹೆಸರನ್ನು ಸೆಲೆಕ್ಟ್ ಮಾಡಿ

* Select Village ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ
* Servey Number ಆಪ್ಷನ್ ಕ್ಲಿಕ್ ಮಾಡಿ ನಿಮ್ಮ ಸರ್ವೇ ನಂಬರ್ ಎಂಟ್ರಿ ಮಾಡಿ
* Select Sumoc ಎನ್ನುವ ಆಪ್ಷನ್ ನಲ್ಲಿ * ಎಂದು ಎಂಟ್ರಿ ಮಾಡಿ
* Select Hissa No ಎನ್ನುವ ಆಪ್ಷನ್ ನಲ್ಲಿ * ಎಂದು ಸೆಲೆಕ್ಟ್ ಮಾಡಿ ಅಥವಾ ನಿಮ್ಮ ಹಿಸ್ಸಾ ಸಂಖ್ಯೆ ಗೊತ್ತಿದ್ದರೆ ಅದನ್ನು ಹಾಕಿ
* Period ಎಂದು ಇರುವ ಆಪ್ಷನ್ ನಲ್ಲಿ ನೀವು ಸರ್ಚ್ ಮಾಡುತ್ತಿರುವ ದಿನಾಂಕವನ್ನು ಸೆಲೆಕ್ಟ್ ಮಾಡಿ.

* Year ಎನ್ನುವ ಆಪ್ಷನ್ ನಲ್ಲಿ 2023-2024 ಸೆಲೆಕ್ಟ್ ಮಾಡಿ fetch details ಎನ್ನುವುದನ್ನು ಕ್ಲಿಕ್ ಮಾಡಿದರೆ ನೀವು ಸೆಲೆಕ್ಟ್ ಮಾಡಿದ ಸರ್ವೆ ನಂಬರ್ ನಲ್ಲಿ ಎಷ್ಟು ವಿಸ್ತೀರ್ಣ ಜಮೀನಿದೆ ಅದರ ಮಾಲೀಕರು ಯಾರು ಎನ್ನುವ ಪೂರ್ತಿ ವಿವರ ಬರುತ್ತದೆ
* ಕೊನೆಯಲ್ಲಿ View ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ RTC ಸ್ಕ್ರೀನ್ ಮೇಲೆ ಕಾಣುತ್ತಿದೆ.

* ನೀವೇನಾದರೂ ಹಳೆಯ ವರ್ಷಗಳ RTC ನೋಡಬೇಕು ಎಂದು ಬಯಸಿದರೆ ಮೊದಲಿನಿಂದ ಈಗ ಹೇಳಿದ ವಿಧಾನಗಳನ್ನೇ ಅನುಸರಿಸಿ ಆದರೆ Current Year ಎನ್ನುವ ಆಪ್ಷನ್ ನಲ್ಲಿ Old year ಎನ್ನುವುದನ್ನು ಸೆಲೆಕ್ಟ್ ಮಾಡಿ ಮತ್ತು Year ಎನ್ನುವ ಆಪ್ಷನ್ ನಲ್ಲಿ ನೀವು ಯಾವ ವರ್ಷದ RTC ಡೀಟೇಲ್ಸ್ ನೋಡಲು ಬಯಸುತ್ತೀರಾ ಆ ವರ್ಷವನ್ನು ಸೆಲೆಕ್ಟ್ ಮಾಡಿ.
* ಆದರೆ ನೆನಪಿಡಿ ತುಂಬಾ ಹಳೆಯ ವರ್ಷಗಳ RTC ಬರುವುದಿಲ್ಲ, 2000 ಇಸವಿಯಿಂದ ಈಚೆಗಿನ RTCಗಳನ್ನು ಮಾತ್ರ ನೋಡಲು ಸಾಧ್ಯ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment