SBI Recruitment:
ಡಿಗ್ರಿ ಪಾಸಾಗಿದ್ದು, ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹಾಗಿದ್ರೆ, ಇಲ್ಲಿದೆ ನೋಡಿ ಬಂಪರ್ ಉದ್ಯೋಗಾವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India – SBI) ಅಥವಾ ಭಾರತೀಯ ಸ್ಟೇಟ್ ಬ್ಯಾಂಕ್ ಖಾಲಿ ಇರುವ ಹುದ್ದೆ(Recruitment)ಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ (Application Invitation). ಕ್ರೀಡಾಪಟು(sportsman)ಗಳಿಗೆ ಇದು ಭರ್ಜರಿ ಅವಕಾಶವಾಗಿದೆ. ಒಟ್ಟು 68 ಆಫೀಸರ್ (Officer), ಕ್ಲರಿಕಲ್ ಸ್ಟಾಫ್ (Clerical Staff) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಈ ಸುದ್ದಿ ಓದಿ:- Gruha Jyothi Scheme: ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗುಡ್ ನ್ಯೂಸ್, ಗೃಹಜ್ಯೋತಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್.!
ಬಾಸ್ಕೆಟ್ಬಾಲ್, ಕ್ರಿಕೆಟ್, ಫುಟ್ಬಾಲ್, ಹಾಕಿ, ವಾಲಿಬಾಲ್, ಕಬಡ್ಡಿ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಇದು ಸುವರ್ಣಾಕಾಶವಾಗಿದೆ. ಆಗಸ್ಟ್ 14, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್ (Online) ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಈ ಸುದ್ದಿ ಓದಿ:- Toll ವಾಹನ ಮಾಲೀಕರು ಇನ್ಮುಂದೆ ಟೋಲ್‌ಗಳಲ್ಲಿ ಹಣ ಕಟ್ಟಬೇಡಿ.! ಹೊಸ ರೂಲ್ಸ್
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ…
ಹುದ್ದೆಯ ಮಾಹಿತಿ
– ಆಫೀಸರ್(ಕ್ರೀಡಾಪಟು)- 17
– ಕ್ಲರಿಕಲ್ ಸ್ಟಾಫ್ (ಕ್ರೀಡಾಪಟು)- 51
ವಿದ್ಯಾರ್ಹತೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ
– ಆಫೀಸರ್(ಕ್ರೀಡಾಪಟು)- 21ರಿಂದ 30 ವರ್ಷ
– ಕ್ಲರಿಕಲ್ ಸ್ಟಾಫ್ (ಕ್ರೀಡಾಪಟು)- 20-28 ವರ್ಷ
ವಯೋಮಿತಿ ಸಡಿಲಿಕೆ
– ಕ್ರೀಡಾಪಟು(SC/ST) ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ
– SC/ST/PwBD ಅಭ್ಯರ್ಥಿಗಳು: ಇಲ್ಲ
– ಸಾಮಾನ್ಯ/EWS/OBC ಅಭ್ಯರ್ಥಿಗಳು: ರೂ.750/-
– ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ
ಶಾರ್ಟ್‌ಲಿಸ್ಟಿಂಗ್, ಮೌಲ್ಯಮಾಪನ ಪರೀಕ್ಷೆ ಮತ್ತು ಸಂದರ್ಶನ
ವೇತನ
– ಆಫೀಸರ್(ಕ್ರೀಡಾಪಟು)- ಮಾಸಿಕ ₹ 48,480-85,920
– ಕ್ಲರಿಕಲ್ ಸ್ಟಾಫ್ (ಕ್ರೀಡಾಪಟು)- ಮಾಸಿಕ ₹ 24,050- 64,480
ಉದ್ಯೋಗದ ಸ್ಥಳ
ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
https://recruitment.bank.sbi/crpd-sports-2024-25-7/apply
SBI ಸ್ಪೋರ್ಟ್ಸ್ ಕೋಟಾ ನೇಮಕಾತಿ 2024: ಹೇಗೆ ಅರ್ಜಿ ಸಲ್ಲಿಸಬೇಕು ?
– SBI ಬ್ಯಾಂಕ್ ಕ್ಲರ್ಕ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ.
– SBI ಬ್ಯಾಂಕಿನ ವೃತ್ತಿ ಪುಟವನ್ನು ತೆರೆಯಿರಿ.
– SBI ಬ್ಯಾಂಕ್ ಆನ್‌ಲೈನ್ ಫಾರ್ಮ್‌ನಲ್ಲಿ ವಿವರಗಳನ್ನು ಬರೆಯಿರಿ.
– SBI ನಮೂನೆಯಲ್ಲಿ ಕ್ರೀಡಾ ಸಾಧನೆ/ಪದವಿ ವಿವರಗಳನ್ನು ನಮೂದಿಸಿ.
– ಅರ್ಜಿ ಶುಲ್ಕದೊಂದಿಗೆ ಸ್ಪೋರ್ಟ್ಸ್ ಕೋಟಾ ಪೋಸ್ಟ್‌ಗಳಿಗೆ ನೋಂದಾಯಿಸಿ.
– SBI ಬ್ಯಾಂಕ್ ಕ್ಲರ್ಕ್ ಮತ್ತು ಆಫೀಸರ್ ಫಾರ್ಮ್ ಅನ್ನು ಸಲ್ಲಿಸಿ.
ಪ್ರಮುಖ ದಿನಾಂಕಗಳು
– ಅರ್ಜಿ ಸಲ್ಲಿಕೆ ಆರಂಭ ದಿನಾಂಕ:24/07/2024
– ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 14, 2024
ಈ ಮೇಲಿನ ಮಾಹಿತಿಯನ್ನು ಪೂರ್ಣವಾಗಿ ಓದಿದ ನಂತರವೇ ಅರ್ಜಿ ಸಲ್ಲಿಸಿ.