SBI
2024ರಿಂದ 2024-25ನೇ ಸಾಲಿನ ಹೊಸ ಆರ್ಥಿಕ ವರ್ಷ (New Financial Year) ಆರಂಭವಾಗಿದೆ. ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸಾಕಷ್ಟು ಹೊಸ ನಿಯಮಗಳು ಮತ್ತು ಹಳೆ ನಿಯಮಗಳ ತಿದ್ದುಪಡಿ ಹಾಗೂ ಹಣಕಾಸಿನ ವಹಿವಾಟಿಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬದಲಾವಣೆಗಳು ಕೂಡ ಆಗಿವೆ ಮತ್ತು ಪ್ರತಿ ವರ್ಷವೂ ಕೂಡ ಇದೇ ದಿನಾಂಕದಂದು ಬ್ಯಾಂಕ್ ಗಳು ತಮ್ಮ ಹೊಸ ನಿಯಮಗಳನ್ನು ಘೋಷಿಸುತ್ತವೆ.
ಕೆಲವು ಸಾರ್ವಜನಿಕ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಣೆ ಆಗುತ್ತಿರುವುದು ಸಿಹಿ ಸುದ್ದಿ ನೀಡಿದರೆ ಇನ್ನು ಕೆಲವು ಸೇವೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತದೆ ಎನ್ನುವುದು ಮನಸ್ಸನ್ನು ಬೇಸರಕ್ಕೆ ದೂಡುತ್ತಿದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ SBI (State Bank Of Mysore) ಕೂಡ 2024-25ನೇ ಸಾಲಿನ ಪರಿಷ್ಕೃತ ದರಗಳ ಘೋಷಣೆ ಮಾಡಿದ್ದು, ಡೆಬಿಟ್ ಕಾರ್ಡ್ ಶುಲ್ಕ (Debit Card Service Charge) ಹೆಚ್ಚಿಸಿರುವದಾಗಿ ತಿಳಿಸಿದೆ ಈ ಕುರಿತದ ಮಾಹಿತಿ ಹೀಗಿದೆ ನೋಡಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ತನ್ನ ಗ್ರಾಹಕರಿಗೆ ಒಂದು ಶಾ’ಕಿಂ’ಗ್ ನ್ಯೂಸ್ ನೀಡಿದೆ ಎಂದೇ ಹೇಳಬಹುದಾಗಿದೆ. ಆದರೆ ಇದರ ಬಿಸಿ ಎಲ್ಲಾ ಗ್ರಾಹಕರಿಗೂ ತಟ್ಟುವುದಿಲ್ಲ ಎನ್ನುವುದೇ ಸಮಾಧಾನಕರ. ವಿವರ ಏನೆಂದರೆ, ಬ್ಯಾಂಕ್ ಅಧಿಕೃತ ವೆಬ್ಸೈಟ್ನಲ್ಲಿ (SBI Website) ಏಪ್ರಿಲ್ 1ರಿಂದ ಕೆಲವು ಡೆಬಿಟ್ ಕಾರ್ಡ್ ಗಳಿಗೆ ವಾರ್ಷಿಕ ನಿರ್ವಹಣಾ ಶುಲ್ಕದಲ್ಲಿ ರೂ.75ರಷ್ಟು ಹೆಚ್ಚಾಗಲಿದೆ ಎಂದು ಘೋಷಣೆ ಮಾಡಿದೆ.
ವಾರ್ಷಿಕ ನಿರ್ವಹಣಾ ಶುಲ್ಕಗಳ ಹೊರತಾಗಿಯೂ ಕೂಡ ಡೆಬಿಟ್ ಕಾರ್ಡ್ ಗಳಿಗೆ ಇತರ ಶುಲ್ಕಗಳು ಅನ್ವಯವಾಗುತ್ತವೆ. ಯಾವ ಮಾದರಿಯ ಕಾರ್ಡ್ ಎನ್ನುವುದರ ಮೇಲೆ ವಿತರಣಾ ಶುಲ್ಕಗಳು ನಿರ್ಧಾರವಾಗುತ್ತದೆ ಎನ್ನುವ ಸಂಗತಿಯನ್ನು SBI ಬ್ಯಾಂಕ್ ಸ್ಪಷ್ಟಪಡಿಸಿದೆ.
ಆ ಪ್ರಕಾರವಾಗಿ ಯಾವ ಕಾರ್ಡ್ ಗಳಿಗೆ ಎಷ್ಟು ಶುಲ್ಕ ಹೆಚ್ಚಿಗೆ ಆಗಿದೆ ಎನ್ನುವುದರ ವಿವರಣೆ ನೀಡುವುದಾದರೆ ಕ್ಲಾಸಿಕ್ ಕಾರ್ಡ್, ಸಿಲ್ವರ್ ಕಾರ್ಡ್, ಗ್ಲೋಬಲ್ ಕಾರ್ಡ್ ಮತ್ತು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್ ಗಳ ವಿತರಣಾ ಶುಲ್ಕ ಶೂನ್ಯವಾಗಿದೆ ಆದರೆ ಪ್ಲಾಟಿನಂ ಡೆಬಿಟ್ ಕಾರ್ಡ್ ಗೆ ಮಾತ್ರ ರೂ.300 + GST ಆಗುತ್ತದೆ ಎಂದು SBI ಮಾಹಿತಿ ನೀಡಿದೆ.
ಇದಿಷ್ಟು ಮಾತ್ರವಲ್ಲದೆ ಈ ವಿಚಾರದೊಂದಿಗೆ ಒಂದು ವೇಳೆ ಗ್ರಾಹಕರು ಡೆಬಿಟ್ ಕಾರ್ಡ್ ರಿಪ್ಲೇಸ್ಮೆಂಟ್ ಮಾಡಿದರೆ ಕೂಡ ರೂ.300 + GST, ಪಿನ್ ಜನರೇಟ್ ಮಾಡಿದರೆ ಅಥವಾ ತಪ್ಪಾದ ಪಿನ್ ಕೋಡ್ ಬಳಸಿದರೆ ರೂ.50 + GST ಮತ್ತು ಅಂತರಾಷ್ಟ್ರೀಯ ವಹಿವಾಟು ಸೇವೆಗಳಿಗೆ ಕೂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.
ಅಂತರಾಷ್ಟ್ರೀಯ ವಹಿವಾಟು ಶುಲ್ಕಗಳ ವಿವರ:-
* ATM ಗಳಲ್ಲಿ ಬ್ಯಾಲೆನ್ಸ್ ವಿಚಾರಣೆ ಮಾಡಿದರೆ ರೂ.25 + GST
* ATM ನಿಂದ ನಗದು ಹಿಂಪಡೆಯುವ ವಹಿವಾಟಿಗೆ ಹಣ ವಿತ್ ಡ್ರಾ ಮಾಡುವ ಮೊತ್ತದ 3.5% + PoS (Points Of Sale)
* ಇ-ಕಾಮರ್ಸ್ ವಹಿವಾಟುಗಳಿಗೆ ವಹಿವಾಟಿನ ಮೊತ್ತದ 3% + GST
* ಎಲ್ಲಾ ಶುಲ್ಕಗಳು 18% GST ವ್ಯಾಪ್ತಿಗೆ ಒಳಪಟ್ಟಿದೆ ಎಂದು SBI ವಿವರಿಸಿದೆ. ಹೆಚ್ಚಿನ ಮಾಹಿತಿಗಾಗಿ SBI ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.