Scholarship
ಪ್ರತಿ ವರ್ಷವೂ ಕೂಡ ರಾಜ್ಯ ಸರ್ಕಾರದ ವತಿಯಿಂದ ಹಿಂದುಳಿದ ವರ್ಗ, ಪ್ರವರ್ಗ -1 ಅಭ್ಯರ್ಥಿಗಳು, ಅಲೆಮಾರಿ ಹಾಗೂ ಅರೆ ಅಲೆಮಾರಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ SSP ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಆ ಪ್ರಕಾರವಾಗಿ ಈ ವರ್ಷವೂ ಕೂಡ 2024-25 ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ (Post Matric Scholarship for Backward Classes) ಅರ್ಜಿ ಆಹ್ವಾನ ಮಾಡಲಾಗಿತ್ತು. ಈಗ ಈ ಬಗ್ಗೆ ಒಂದು ಪ್ರಮುಖವಾದ ಅಪ್ಡೇಟ್ ಇದೆ, ಅದೇನೆಂದರೆ SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿಧಿಸಿದ್ದ ಗಡುವನ್ನು ಮತ್ತಷ್ಟು ವಿಸ್ತರಿಸಲಾಗಿದೆ.
ಯೋಜನೆಯನ್ನು ಮತ್ತಷ್ಟು ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸುವುದಕ್ಕೆ ಕೊನೆ ದಿನಾಂಕ ಏನು? ಅರ್ಜಿ ಸಲ್ಲಿಸಲು ಯಾರು ಅರ್ಹರು? ಅಪ್ಲೈ ಮಾಡುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ? ಈ ಎಲ್ಲ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ಮತ್ತು ತಪ್ಪದೆ ಈ ಪ್ರಮುಖ ಸುದ್ದಿಯನ್ನು ನಿಮ್ಮ ವಿದ್ಯಾರ್ಥಿ ಮಿತ್ರರೊಡನೆ ಹಂಚಿಕೊಳ್ಳಿ.
ಯೋಜನೆಯ ಹೆಸರು:- ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ
ಯೋಜನೆಯ ಉದ್ದೇಶ:-
* ರಾಜ್ಯದ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಯೋಜನೆ ಮೂಲಕ ಧನ ಸಹಾಯ ಮಾಡಿ ವಿದ್ಯಾರ್ಥಿಯ ಶೈಕ್ಷಣಿಕ ಖರ್ಚು ವೆಚ್ಚಗಳ ಅಗತ್ಯತೆ ಪೂರೈಸಿ, ವಿದ್ಯಾಭ್ಯಾಸದ ನಿರ್ವಹಣೆಯನ್ನು ಸುಲಭಗೊಳಿಸಿ ಕೊಡುವುದು, ಈ ಮೂಲಕ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯವನ್ನು ಭದ್ರಗೊಳಿಸುವುದು.
* ಯೋಜನೆ ಮೂಲಕ ಪಡೆಯಲಾಗುವ ವಿದ್ಯಾರ್ಥಿ ವೇತನದ ಹಣದಿಂದ ವಿದ್ಯಾರ್ಥಿಗಳು ಕಾಲೇಜು ಶುಲ್ಕ, ಪಠ್ಯಪುಸ್ತಕ ಹಾಗೂ ಇತರೆ ಖರ್ಚುಗಳು ಹಾಗೂ ವಸತಿ ಖರ್ಚು ವೆಚ್ಚಗಳನ್ನು ಪೂರೈಸಿಕೊಳ್ಳಲು ಬಹಳ ಅನುಕೂಲವಾಗುತ್ತದೆ.
ಅರ್ಹತೆಗಳು:-
* ರಾಜ್ಯದ ವಿದ್ಯಾರ್ಥಿಯಾಗಿರಬೇಕು
* ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿ ಸಂಬಂಧಪಟ್ಟ ಪುರಾವೆಗಳನ್ನು ಹೊಂದಿರಬೇಕು
* ಕಳೆದ ವರ್ಷದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು
* ಇತರೆ ಯಾವುದೇ ಯೋಜನೆಯಿಂದ ಸ್ಕಾಲರ್ಶಿಪ್ ಪಡೆಯುತ್ತಿರಬಾರದು
* ಯೋಜನೆಗೆ ಪೂರಕವಾಗಿ ಕೇಳಲಾಗಿರುವ ಇತರೆ ಎಲ್ಲ ದಾಖಲೆಗಳನ್ನು ಕೂಡ ಹೊಂದಿರಬೇಕು
ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆ ಮಾಹಿತಿ
* ಕಳೆದ ವರ್ಷದ ಅಂಕ ಪಟ್ಟಿ
* ಪ್ರಸಕ್ತ ಸಾಲಿನಲ್ಲಿ ಶಾಲೆಗೆ ದಾಖಲಾಗಿರುವ ಬಗ್ಗೆ ಗುರುತಿನ ಚೀಟಿ ಅಥವಾ ಶೈಕ್ಷಣಿಕ ಶುಲ್ಕ ಪಾವತಿಸಿರುವ ರಶೀದಿ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಮೊಬೈಲ್ ಸಂಖ್ಯೆ
* ಇತ್ತೀಚಿನ ಭಾವಚಿತ್ರ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* https://SSP.postmatric.karnataka.gov.in ಅಥವಾ https://bcwd.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
* ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದಲ್ಲಿರುವ ಯಾವುದೇ ಸೇವಾ ಸಿಂಧು ಕೇಂದ್ರಗಳಿಗೆ ದಾಖಲೆಗಳ ಜೊತೆ ತೆರಳಿ ಕೂಡ ಅರ್ಜಿ ಸಲ್ಲಿಸಬಹುದು
* ಅಕ್ಟೋಬರ್ 15, 2024ರ ವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ, ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ:-
* ಸಹಾಯವಾಣಿ ಸಂಖ್ಯೆ – 8050770005
* ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಸಹಾಯವಾಣಿ – 1902
* ವೆಬ್ ಸೈಟ್ ವಿಳಾಸ – postmatrichelp@karnataka.gov.in
bcwdhelpline@gmail.com