Scholarship
ರಾಜ್ಯ ಸರ್ಕಾರ(State Govt) ಕಾರ್ಮಿಕರು(workers) ಮತ್ತು ಅವರ ಮಕ್ಕಳಿಗೆ ಉತ್ತಮ ಯೋಜನೆಗಳನ್ನು ಜಾರಿ ಮಾಡುತ್ತಲೇ ಬರುತ್ತಿದೆ. ಇದೀಗ ಶೈಕ್ಷಣಿಕವಾಗಿ ಕಾರ್ಮಿಕರ ಮಕ್ಕಳನ್ನು ಮುಂದೆ ತರುವ ನಿಟ್ಟಿನಲ್ಲಿ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿಸಲು ಮುಂದಾಗಿದೆ. ಸದ್ಯ, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ.(Karnataka Labor Welfare Board)
ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳು ಪ್ರೌಢ ಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ, ಇಂಜಿನಿಯರಿಂಗ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಅಂತಹ ಮಕ್ಕಳಿಂದ 2024-25ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕೆ ಕರ್ನಾಟಕ ಕಾರ್ಮಿಕ ಮಂಡಳಿಯ ವೆಬ್‍ಸೈಟ್ https://klwbapps.karnataka.gov.in ಮೂಲಕ ಅರ್ಜಿ ಆಹ್ವಾನಿಸಿದೆ.
ಯಾರು ಈ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಬಹುದು?
– ಶೈಕ್ಷಣಿಕ ಪ್ರೋತ್ಸಾಹಧನ ಸಹಾಯ ಬಯಸುವ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ.50, ಪ.ಜಾ, ಪ.ಪಂ.ಶೇಕಡ 45ರಷ್ಟು ಅಂಕ ಪಡೆದು ತೇರ್ಗಡೆ ಹೊಂದಿರಬೇಕು.
– ಕಾರ್ಮಿಕರ ಮಾಸಿಕ ವೇತನ ರೂ.35,000/- ಗಿಂತ ಮೀರಿರಬಾರದು. ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು.
– ಶೈಕ್ಷಣಿಕ ಪ್ರೋತ್ಸಾಹಧನ ಸಹಾಯ ಬಯಸುವ ವಿದ್ಯಾಥಿಗಳು ಆನ್‍ಲೈನ್ ಮುಖಾಂತರ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್‍ಸೈಟ್ https://klwbapps.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
– 2025ರ ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಈ ಸುದ್ದಿ ಓದಿ:- Gas: ಗೃಹಿಣಿಯರಿಗೆ ಗುಡ್ ನ್ಯೂಸ್ LPG ಸಿಲಿಂಡರ್ ಬೆಲೆಯಲ್ಲಿ 300 ರೂಪಾಯಿ ಇಳಿಕೆ.!
ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ.50, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಶೇ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕಕಲ್ಯಾಣ ಭವನ, ನಂ.48, 1ನೇ & 2ನೇ ಮಹಡಿ, ಮತ್ತೀಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-560022 ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080-23475188, 8277291175, 8277120505, 9141585402, 9141602562 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಚಿತ್ರದುರ್ಗ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
– ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
– ಪಿಯುಸಿ / ಪದವಿ ಸೆಮಿಸ್ಟರ್ ಅಂಕಪಟ್ಟಿ.
– ವಿದ್ಯಾರ್ಥಿಯ ಆಧಾರ್ ಕಾರ್ಡ್.
– ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ.
– ತಂದೆ-ತಾಯಿ ಕಾರ್ಮಿಕ ಕಾರ್ಡ
- ಆಧಾರ್ ಕಾರ್ಡಗೆ ಲಿಂಕ್ ಆಗಿರುವ ಮೋಬೈಲ್ ನಂಬರ
– ಜಾತಿ ಪ್ರಮಾಣ ಪತ್ರ. & ಆದಾಯ ಪ್ರಮಾಣ ಪತ್ರ.
– ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
– ಶಾಲಾ ಶುಲ್ಕದ ರಶೀದಿ.
– ನಿವಾಸಿ ದೃಢೀಕರಣ ಪತ್ರ.
– ಯುನಿವರ್ಸಿಟಿ ಅಥವಾ ರಿಜಿಸ್ಟ್ರೇಷನ್ ಬೋರ್ಡ್ ಐಡಿ
– ಹಿಂದಿನ ಶೈಕ್ಷಣಿಕ ವರ್ಷದ ಸರಾಸರಿ ಅಂಕ
– ಪ್ರಸ್ತುತ ವರ್ಷದ ಶುಲ್ಕ ರಶೀದಿ
– ರೇಷನ್ ಕಾರ್ಡ್
– ಕಾಂಟ್ರಾಕ್ಟ್ ದಾರ / ಪಿಡಿಒ ರಿಂದ ಸಹಿ ಮಾಡಿದ ಪ್ರಮಾಣ ಪತ್ರ
ವಿಶೇಷ ಸೂಚನೆ
ನೋಂದಣಿದಾರರ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿರಬೇಕು ಮತ್ತು ಬ್ಯಾಂಕ್ ಮೂಲಕ NPCI ಗೆ ಮ್ಯಾಪ್ ಮಾಡಿರಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಸಹಾಯಧನವನ್ನು ಸೇವಾಸಿಂಧು ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿ ನೇರ ವರ್ಗಾವಣೆ ಮೂಲಕ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ಈ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಮತ್ತು ಕಲಿಕಾ ಭಾಗ್ಯ ಯೋಜನೆ ವಿದ್ಯಾರ್ಥಿ ವೇತನ ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ರಾಜ್ಯ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.