Scholarship
ಭಾರತದ ಭವ್ಯ ಭವಿಷ್ಯವು ಇಂದಿನ ಶಾಲಾ ತರಗತಿಗಳಲ್ಲಿ ಸಿದ್ಧವಾಗುತ್ತಿದೆ ಎನ್ನುವುದು ಖ್ಯಾತರೊಬ್ಬರ ಘೋಷಣೆ, ಇದರ ಅರ್ಥ ಪ್ರತಿಭಾವಂತ ವಿದ್ಯಾರ್ಥಿಗಳೇ ಭಾರತದ ಆಸ್ತಿ ಎಂದರೆ ತಪ್ಪಾಗಲಾರದು. ಆದರೆ ಇಂದಿನ ಪರಿಸ್ಥಿತಿ ಹೇಗಾಗಿದೆ ಎಂದರೆ ಹಣಕಾಸಿನ ಅನಾನುಕೂಲತೆಯು ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುತ್ತಿದೆ.
ಈ ಸಮಸ್ಯೆ ಬಗೆಹರಿಸಲು ಸರ್ಕಾರಗಳು ಕೂಡ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರಿಗೆ ಅನೇಕ ಯೋಜನೆಗಳ ಅನುಕೂಲತೆಗಳನ್ನು ಕಲ್ಪಿಸಿ ಕೊಟ್ಟಿದೆ. ಸರ್ಕಾರೇತರವಾಗಿಯೂ ದೇಶದ ಅನೇಕ ಪ್ರತಿಷ್ಠಿತ ಕಂಪನಿಗಳು, NGO ಗಳು ಕೂಡ ಅನೇಕ ಸವಲತ್ತುಗಳು ಹಾಗೂ ಸ್ಕಾಲರ್ಶಿಪ್ ಮೂಲಕ ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿವೆ.
ಪ್ರತಿ ವರ್ಷವೂ ಈ ರೀತಿ ಹಲವು ಬಗೆಯ ಸ್ಕಾಲರ್ಶಿಪ್ ಗಳು ನೀಡಲಾಗುತ್ತದೆ. ಅಂತೆಯೇ ಈಗ ಕೃಷಿಕ್ ಸರ್ವೋದಯ ಫೌಂಡೇಶನ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಯೋಜನೆ ಪ್ರಯೋಜನ ಪಡೆಯಲು ಯಾರು ಅರ್ಹರು? ಅಪ್ಲೈ ಮಾಡುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು? ಎಲ್ಲಾ ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಯೋಜನೆ ಹೆಸರು:- ಕೃಷಿಕ್ ಸರ್ವೋದಯ ಫೌಂಡೇಶನ್ ಸ್ಕಾಲರ್ಶಿಪ್
ಉದ್ದೇಶ:-
* ಗ್ರಾಮೀಣ ಭಾಗದಲ್ಲಿರುವ ಕೃಷಿ ಅವಲಂಬಿತ ಕುಟುಂಬಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ SSLC ನಂತರದ ವಿದ್ಯಾಭ್ಯಾಸಕ್ಕಾಗಿ ( PUC, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ ಗಳು) ಪ್ರತಿ ವರ್ಷ ಸ್ಕಾಲರ್ಶಿಪ್ ನೀಡುವುದು
* ಈ ಮೂಲಕ ಬಡ ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ನೆರವೇರಿಸುವುದು.
ಸಿಗುವ ಸಹಾಯಧನದ ಮೊತ್ತ:- ಗರಿಷ್ಠ ರೂ.25,000 ದ್ವಾರಕೆಗೆ
ಕಂಡಿಷನ್ ಗಳು:–
* ವಿದ್ಯಾರ್ಥಿಯು ಗ್ರಾಮೀಣ ಪ್ರದೇಶದ ನಿವಾಸಿ ಆಗಿರಬೇಕು
* ಕುಟುಂಬವು ಒಂದು ಹೆಕ್ಟೇರ್ ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ / ಅತಿ ಸಣ್ಣ ರೈತನಾಗಿರಬೇಕು, ಅರ್ಜಿಯೊಂದಿಗೆ ಜಮೀನಿನ RTC ತಪ್ಪದೇ ಲಗತ್ತಿಸಬೇಕು
* ಕೃಷಿ ಭೂಮಿ ಹೊಂದಿಲ್ಲದೆ ಇದ್ದರೂ ಕೃಷಿ ಕಾರ್ಮಿಕರಾಗಿ ಅಥವಾ ಕೂಲಿಯಾಗಿ ಕೃಷಿಗೆ ಅವಲಂಬಿತವಾಗಿರುವ ಕುಟುಂಬದ ವಿದ್ಯಾರ್ಥಿ ಕೂಡ ಅರ್ಜಿ ಸಲ್ಲಿಸಬಹುದು
* ವಿದ್ಯಾರ್ಥಿಯು SSLC ವರೆಗೂ ಗ್ರಾಮೀಣ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರಬೇಕು
* ಪ್ರಸಕ್ತ ಸಾಲಿನಲ್ಲಿ PUC, ಪದವಿ ಅಥವಾ ಸ್ನಾತಕೋತರ ಪದವಿ ಅಥವಾ ವೃತ್ತಿಪರ ಕೋರ್ಸ್ ಗಳಿಗೆ ದಾಖಲಾಗಿರಬೇಕು ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಒದಗಿಸಬೇಕು
ಅಪ್ಲೈ ಮಾಡುವ ವಿಧಾನ:-
* ಆಸಕ್ತ ವಿದ್ಯಾರ್ಥಿಗಳು ಮೊದಲಿಗೆ ಕೃಷಿಕ್ ಸರ್ವೋದಯ ಫೌಂಡೇಶನ್ ನ ಅಧಿಕೃತ ವೆಬ್ಸೈಟ್ ಆದ www.ksf.karnataka.com ಭೇಟಿ ನೀಡಿ
* ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಪಡೆಯಿರಿ
* ಭರ್ತಿ ಮಾಡಿದ ಅರ್ಜಿ ಫಾರಂ ಕಡೆ ದಿನಾಂಕದೊಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸಿ
* ವಿಳಾಸ –
ಕೃಷಿಕ್ ಸರ್ವೋದಯ ಫೌಂಡೇಶನ್,
ನಂ.15, ಎರಡನೇ ಮಹಡಿ,
ಗಾಲ್ಫ್ ಅವಿನ್ಯೂ ರಸ್ತೆ,
ಕೊಡಿಗೆಹಳ್ಳಿ,
ಬೆಂಗಳೂರು – 560008.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 31 ಅಕ್ಟೋಬರ್ 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30 ನವೆಂಬರ್, 2024.
ಬೇಕಾಗುವ ದಾಖಲೆಗಳು:-
* ಅರ್ಜಿದಾರನ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಕನ್ನಡ ಮಾಧ್ಯಮ ಪ್ರಮಾಣ ಪತ್ರ
* ಪ್ರಸಕ್ತ ಸಾಲಿನಲ್ಲಿ ಶಾಲೆಗೆ ದಾಖಲಾಗಿರುವ ಬಗ್ಗೆ ಐಡಿ ಕಾರ್ಡ್ ಅಥವಾ ಶುಲ್ಕ ಪಾವತಿಸಿರುವ ರಸೀದಿ
* ಆದಾಯ ಪ್ರಮಾಣ ಪತ್ರ
* ಜಮೀನಿನ RTC
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
* ಇತ್ತೀಚಿನ ಭಾವಚಿತ್ರ
* ಇನ್ನಿತರ ಪ್ರಮುಖ ದಾಖಲೆಗಳು