Scholarship: HDFC ಬ್ಯಾಂಕ್‌ನಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್.!

Scholarship

ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್‌(HDFC Bank Parivartan) ಶೈಕ್ಷಣಿಕ ಬಿಕ್ಕಟ್ಟಿನ ವಿದ್ಯಾರ್ಥಿವೇತನ ಬೆಂಬಲ (Academic Crisis Scholarship Support – ಇಸಿಎಸ್‌ಎಸ್) ಕಾರ್ಯಕ್ರಮದಡಿ 2024-25ನೇ ಶೈಕ್ಷಣಿಕ ಸಾಲಿನ 1ನೇ ತರಗತಿಯಿಂದ ವೃತ್ತಿಪರ ಸ್ನಾತಕೋತ್ತರ ಪದವಿನ ತನಕ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ(Scholarship) ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಸುದ್ದಿ ಓದಿ:- SSC Recruitment : SSC ಕಡೆಯಿಂದ 50,000 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಆಸಕ್ತರು ಅರ್ಜಿ ಹಾಕಿ ವೇತನ:-₹69,100/-

ಇದು ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ(Talented) ಮತ್ತು ಅಗತ್ಯವಿರುವ ಎಲ್ಲಾ ವಿದ್ಯಾರ್ಥಿಗಳನ್ನು(students) ಬೆಂಬಲಿಸುವ ಗುರಿಯಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ ವಿದ್ಯಾರ್ಥಿವೇತನ(HDFC Bank Parivartan Scholarship)ಕ್ಕೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.

WhatsApp Group Join Now
Telegram Group Join Now

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ಸೆಪ್ಟೆಂಬರ್​​ 4 ಆಗಿದೆ. ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಮೂರು ರೀತಿಯ ಕಾರ್ಯಕ್ರಮಗಳು ಚಾಲನೆಯಲ್ಲಿವೆ. ಶಾಲಾ ವಿದ್ಯಾರ್ಥಿಗಳಿಗೆ, ಪದವಿ ಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿವೇತನ ಸಿಗಲಿದೆ.

ಯಾರಿಗೆಷ್ಟು ವಿದ್ಯಾರ್ಥಿವೇತನ?

– 1 ರಿಂದ 6ನೇ ತರಗತಿಗೆ – 15,000 ರೂಪಾಯಿ ವಿದ್ಯಾರ್ಥಿ ವೇತನ
– 7 ರಿಂದ 12 ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್​ ವಿದ್ಯಾರ್ಥಿಗಳಿಗೆ – 18,000 ರೂಪಾಯಿ.

ವಿದ್ಯಾರ್ಥಿ ವೇತನ

– ಸಾಮಾನ್ಯ ಪದವಿಪೂರ್ವ ಕೋರ್ಸ್‌ಗಳಿಗೆ – 30,000 ರೂಪಾಯಿ ವಿದ್ಯಾರ್ಥಿ ವೇತನ
– ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳಿಗೆ – 50,000 ರೂಪಾಯಿ ವಿದ್ಯಾರ್ಥಿ ವೇತನ
– ಸಾಮಾನ್ಯ ಸ್ನಾತಕೋತ್ತರ ಕೋರ್ಸ್‌ಗಳಿಗೆ – 35,000 ರೂಪಾಯಿ ವಿದ್ಯಾರ್ಥಿ ವೇತನ
– ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ಗಳಿಗೆ – 75,000 ರೂಪಾಯಿ ವಿದ್ಯಾರ್ಥಿ ವೇತನ

ಯಾವೆಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು?

– ಪ್ರಸ್ತುತ 1 ರಿಂದ 12ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರು. ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರಬೇಕು.
– ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ, ಬಿಟೆಕ್ (ಸಾಮಾನ್ಯ ಕೋರ್ಸ್​ಗಳು) – ಎಂಬಿಬಿಎಸ್, ಎಲ್​ಎಲ್​ಬಿ, ಅರ್ಕಿಟೆಕ್ಟ್, ನರ್ಸಿಂಗ್ (ವೃತ್ತಿಪರ ಕೋರ್ಸ್​​ಗಳು).

ವಿದ್ಯಾರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರಬೇಕು.
– ವಿದ್ಯಾರ್ಥಿಗಳು ಭಾರತದ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು (ಸಾಮಾನ್ಯ ಕೋರ್ಸ್‌ಗಳು – ಎಂಕಾಮ್, ಎಂಎ ಇತ್ಯಾದಿ ಮತ್ತು ವೃತ್ತಿಪರ ಕೋರ್ಸ್‌ಗಳು – ಎಂಟೆಕ್, ಎಂಬಿಎ ಇತ್ಯಾದಿ) ಓದುತ್ತಿರಬೇಕು.

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

– ಭಾರತೀಯ ಶಾಲೆಗಳು ಅಥವಾ ಕಾಲೇಜುಗಳಲ್ಲಿ ಓದುತ್ತಿರಬೇಕು.
– ಕಳೆದ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಹೆಚ್ಚಿರಬಾರದು.
– ಕಳೆದ 3 ವರ್ಷಗಳಲ್ಲಿ ಸಂಭವಿಸಿದ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಅರ್ಜಿದಾರರಿಗೆ ಆದ್ಯತೆ

ಏನೆಲ್ಲಾ ದಾಖಲೆಗಳು ಬೇಕು?

– ಪಾಸ್​​ಪೋರ್ಟ್ ಸೈಜ್ ಫೋಟೋ
– ಕಳೆದ ವರ್ಷದ ಅಂಕಪಟ್ಟಿ (2023-24)
– ಅರ್ಜಿದಾರರ ವಿಳಾಸ-ಐಡೆಂಟಿಟಿ ಫ್ರೂಫ್ (ಆಧಾರ್ ಕಾರ್ಡ್/ವೋಟರ್ ಐಡಿ/ಚಾಲನಾ ಪರವಾನಗಿ)
– ಪ್ರಸಕ್ತ ವರ್ಷದ ಪ್ರವೇಶ ಪತ್ರ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಐಡಿ ಕಾರ್ಡ್) (2024-25)

– ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್
– ಆದಾಯ ಪ್ರಮಾಣ ಪತ್ರ (2.5 ಲಕ್ಷಕ್ಕಿಂತ ಕಡಿಮೆ ಆದಾಯ ಇರಬೇಕು)
– ಕುಟುಂಬ/ವೈಯಕ್ತಿಕ ಬಿಕ್ಕಟ್ಟು ಪ್ರಮಾಣ ಪತ್ರ (ಉದಾ: ಲೋನ್ ಪಡೆದಿದ್ದರೆ ಅದರ ಸ್ಕ್ಯಾನ್ ಪ್ರತಿ, ಆಸ್ಪತ್ರೆಗೆ ಅಡ್ಮಿಷನ್ ಆಗಿರುವ ದಾಖಲೆಗಳು)

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದೇಗೆ?

– ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಹೆಚ್​ಡಿಎಫ್​ಸಿ ಬ್ಯಾಂಕ್‌ನ ಈ ಲಿಂಕ್ (https://www.hdfcbankecss.com/) ಕ್ಲಿಕ್ ಮಾಡಿ. ಅಥವಾ (https://www.buddy4study.com/page/hdfc-bank-parivartans-ecss-programme) ಈ ಲಿಂಕ್ ಓಪನ್ ಮಾಡಿ.
– ನೀವು ಹೊಸ ಪುಟವನ್ನು ತಲುಪಿದ ನಂತರ ಅಲ್ಲಿ ಅಪ್ಲಿಕೇಶನ್ ಐಡಿ ಮತ್ತು ಪಾಸ್‌ವರ್ಡ್ ರಚಿಸಬೇಕು. ಮತ್ತು ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಆಗಬೇಕು.

– ರಿಜಿಸ್ಟರ್​ ಆದ ಬಳಿಕ ನಿಮ್ಮನ್ನು ‘ಎಚ್​ಡಿಎಫ್​ಸಿ ಬ್ಯಾಂಕ್ ಪರಿವರ್ತನ್‌ನ ECSS ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25’ ಅರ್ಜಿ ಫಾರ್ಮ್​ ಪುಟ ಓಪನ್ ಮಾಡಿ.
– ತದನಂತರ ಸ್ಟಾರ್ಟ್ ಅಪ್ಲಿಕೇಷನ್ (Start Application) ಮೇಲೆ ಕ್ಲಿಕ್ ಮಾಡಿ.
– ಈಗ ಅದಕ್ಕೆ ಅನುಗುಣವಾಗಿ ನಿಮ್ಮ ಶೈಕ್ಷಣಿಕ ಮಾಹಿತಿಯನ್ನು ಫಿಲ್ ಮಾಡಬೇಕು.

ಈ ಸುದ್ದಿ ಓದಿ:- Loan: ಸಾಲದ ನಿರೀಕ್ಷೆಯಲ್ಲಿ ಇದ್ದವರಿಗೆ ಗುಡ್ ನ್ಯೂಸ್.! UPI ಮಾದರಿಯಲ್ಲಿ ಹೊಸ ಸಾಲ ವ್ಯವಸ್ಥೆ ULI ಜಾರಿ.! ಇನ್ಮುಂದೆ ಸಾಲ ಪಡೆಯುವುದು ಬಹಳ ಸುಲಭ!

ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ.
– ‘ನಿಯಮಗಳು ಮತ್ತು ಷರತ್ತುಗಳನ್ನು’ ಒಪ್ಪಿಕೊಳ್ಳಿ ಮತ್ತು ‘ಪೂರ್ವವೀಕ್ಷಣೆ’ ಮೇಲೆ ಕ್ಲಿಕ್ ಮಾಡಿ.
ಅಪ್ಲಿಕೇಶನ್‌ ಭರ್ತಿ ಮಾಡಿದ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಸರಿಯಾಗಿದೆಯೇ ಎಂದು ಚೆಕ್ ಮಾಡಿ. ಅಪ್ಲಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಲು ‘ಅಪ್ಲೈ’ ಬಟನ್ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment