Scholorship: ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು 15,000 ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಿ.!

Scholarship:

ಈಗಿನ ಕಾಲದಲ್ಲಿ ವಿದ್ಯಾಭ್ಯಾಸ ಮುಗಿಸಿದ ತಕ್ಷಣ ಅಥವಾ ವಿದ್ಯಾಭ್ಯಾಸ ಮಾಡುತ್ತಲೇ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಾರೆ. ಒಂದು ವೇಳೆ ಕಾಲೇಜು ಅಭ್ಯಾಸ ಮುಗಿದ ನಂತರ ಇದಕ್ಕಾಗಿ ಸಮಯ ಮೀಸಲಿಟ್ಟು ಗುರಿ ಸಾಧನೆಗಾಗಿ ಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೆ ಕುಟುಂಬ ಹಾಗೂ ಸಮಾಜದ ಮತ್ತು ಸರ್ಕಾರದ ಸಹಕಾರವು ಇರಬೇಕು.

ಸಾಮಾನ್ಯವಾಗಿ ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗಕ್ಕೆ ಸೇರುತ್ತಾರೆ ಎನ್ನುವ ನಿರೀಕ್ಷೆ ಇರುತ್ತದೆ ಇದರ ಬದಲು ಮತ್ತೆ ಅಭ್ಯಾಸದತ್ತ ಮುಖ ಮಾಡುವ ವಿದ್ಯಾರ್ಥಿಗಳಿಗೆ ದೈನಂದಿನ ಅಗತ್ಯತೆಗಳಿಗೆ ಹಣಕಾಸಿನ ಕೊರತೆ ಉಂಟಾಗುತ್ತದೆ. ಇದು ಅವರ ಅಭ್ಯಾಸದ ಮೇಲೆ ದುಷ್ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕಾಗಿ ಈ ರೀತಿ IAS/IPS/IRS ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ SC/ST ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರವೇ ಸಹಾಯಧನ ನೀಡುತ್ತಿದೆ.

WhatsApp Group Join Now
Telegram Group Join Now

ಇದುವರೆಗೂ ರೂ.10,000 ಸಹಾಯಧನ ನೀಡಲಾಗುತ್ತಿತ್ತು ಇನ್ನು ಮುಂದೆ ಅದನ್ನು 5,000 ಹೆಚ್ಚಿಗೆ ಮಾಡಿ ಪ್ರತಿ ತಿಂಗಳು ರೂ.15000 ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿಗಳು ಇತ್ತೀಚೆಗೆ ನಡೆದ ಪರಿಷತ್ ಸಭೆಯಲ್ಲಿ ಘೋಷಿಸಿದ್ದಾರೆ ಈ ವಿಚಾರದೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆದು ಶಾಸಕರ ಹಲವು ಚಿಂತನೆಗಳ ಸಾಧಕ ಬಾದಕಗಳನ್ನು ಚರ್ಚಿಸಿ ಕೆಲವನ್ನು ಅಳವಡಿಸಿಕೊಳ್ಳಲಾಗಿದೆ.

ಇದೇ ಸಮಯದಲ್ಲಿ ಇಂತಹ ಚಟುವಟಿಕೆಗಳಲ್ಲಿ ವ್ಯವಹಾರ ನಡೆಸುವಂತಹ ಅಧಿಕಾರಿಗಳಿಗೆ ಮುಲಾಜಿಲ್ಲದೇ ಸಸ್ಪೆಂಡ್ ಮಾಡುವ ಖಡಕ್ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ ಇದರ ಕುರಿತ ವಿವರ ಹೀಗಿದೆ ನೋಡಿ. SCSP/TSP ಪರೀಷತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಉಳಿದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ SC/ST ವರ್ಗದ ವಿದ್ಯಾರ್ಥಿಗಳಿಗೆ.

ಹೈಟೆಕ್ ಲೈಬ್ರರಿ ಜೊತೆಗೆ ಇನ್ನಷ್ಟು ಸವಲತ್ತುಗಳುಳ್ಳ ಅತ್ಯುತ್ತಮ ದರ್ಜೆಯ ಹಾಸ್ಟೆಲ್ ಗಳನ್ನು ಕಟ್ಟಿಸುವ ಜೊತೆಗೆ ಇನ್ನು ಮುಂದೆ ಅವರಿಗೆ ರೂ.15,000 ಪ್ರೋತ್ಸಾಹ ಧನ ನೀಡಲಾಗುವುದು.ಈ ಕಾರ್ಯಕ್ಕಾಗಿ 2024-25ನೇ ಸಾಲಿಗೆ SCSP/TSP ನಲ್ಲಿ ಲಭ್ಯವಿರುವ ಹಣವನ್ನೇ ಖರ್ಚು ಮಾಡಲು actionplan ಅನುಮೋದನೆ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ಆಯವ್ಯವು ಈ ಸಾಲಿನಲ್ಲಿ ರೂ.1,60,000 ಕೋಟಿ ಇದೆ.

ಇದರಲ್ಲಿ SCSP/TSP ಗೆ ಸುಮಾರು ರೂ.39,121.46 ಕೋಟಿ ಮೀಸಲಿಟ್ಟು ಇದರಡಿಯಲ್ಲಿ ಬರುವಂತಹ 34 ಇಲಾಖೆ ಹಂಚಿಕೆ ಮಾಡಲು ಆಕ್ಷನ್ ಪ್ಲಾನ್ ಸಿದ್ಧವಾಗಿದೆ ಇದರಲ್ಲಿ ಕಳೆದ ವರ್ಷ ಉಳಿದಿದ್ದ 97.81 ಕೋಟಿ ಸೇರ್ಪಡೆ ಆಗಿರಲಿದೆ ಎಂದಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚುವರಿಯಾಗಿ ಹಣ ಹಂಚಿಕೆಯಾಗಿದೆ ಆದರೆ ಇದೆಲ್ಲವೂ ಕೂಡ ಸದ್ಬಳಕೆ ಆಗಬೇಕು ಎಂದರೆ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿಗಮಗಳು ಕಾಯ್ದೆಯ ಉದ್ದೇಶಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಿ 100% ಪ್ಲಾನ್ ಅಚೀವ್ ಆಗಬೇಕು.

ಇದರಲ್ಲಿ ನಿರ್ಲಕ್ಷ ಮಾಡಿದವರಿಗೆ ಅಥವಾ ಅವ್ಯವಹಾರ ನಡೆಸಿದವರಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆ ಮಾತುಗಳನ್ನು ಕೂಡ ಹೇಳಿದ್ದಾರೆ. ಹೋಬಳಿ ಮಟ್ಟದಲ್ಲಿ ಮುರಾರ್ಜಿ ದೇಸಾಯಿ ಶಾಲೆಗಳನ್ನು ತೆರೆಯುವುದು ಹಾಗೂ ಅದರ ನಿರ್ವಹಣೆ ಸರಿಯಾಗಿ ಆಗುತ್ತಿದೆ ಎನ್ನುವುದನ್ನು ಅಧಿಕಾರಿಗಳು ಗಮನಿಸಿ ವರದಿ ಸಲ್ಲಿಸುವುದು ಇತ್ಯಾದಿಗಳು ಕೂಡ ನ್ಯೂನತೆ ಇಲ್ಲದೆ ನಡೆಯಬೇಕು.

ಹತ್ತು ವರ್ಷಗಳಲ್ಲಿ ಇದೆಲ್ಲ ಯೋಜನೆ ಪರಿಣಾಮಗಳು ಸಮುದಾಯದ ಕುಟುಂಬದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಮೌಲ್ಯಮಾಪನ ಕೂಡ ಮಾಡಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷತ್ ಸಭೆ ನಡೆಸಲಾಗುತ್ತದೆ ಯಾರಿಂದ ಲೋಪ ಆಗಿದೆ ಎಂದು ತಿಳಿದು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment