Scholarship:
ಎಜುಕೇಶನ್ ಎನ್ನುವುದು ವ್ಯಕ್ತಿಯೋರ್ವನ ಮೂಲಭೂತ ಅವಶ್ಯಕತೆ. ವಿದ್ಯೆ ಇಲ್ಲದ ವ್ಯಕ್ತಿಯು ಈಗಿನ ಕಾಲದಲ್ಲಿ ಏನನ್ನು ಸಾಧಿಸುವುದಕೊಕೂ ಸಾಧ್ಯವಿಲ್ಲ ಮತ್ತು ಆತನ ಜೀವನವೇ ಕಷ್ಟವಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ವಿದ್ಯಾಭ್ಯಾಸ ಪಡೆದಿರಲೇಬೇಕು. ಅವರು ಉದ್ಯೋಗವನ್ನೇ ಮಾಡಲಿ ಅಥವಾ ಉದ್ಯಮವನ್ನೇ ಆರಂಭಿಸಲಿ ಅಥವಾ ಏನನ್ನು ಮಾಡದೇ ಇರಲಿ ಪದವಿವರೆಗೆ ವಿದ್ಯಾಭ್ಯಾಸ ಮಾಡಿದ್ದೆ ಆದಲ್ಲಿ ಅವರ ಬದುಕಿಗೆ ಬೇಕಾದ ತಿಳುವಳಿಕೆ ಬಂದಿರುತ್ತದೆ.
ಹಾಗಾಗಿ ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರಗಳು ಕೂಡ ಸರ್ಕಾರಿ ಶಾಲಾ ಕಾಲೇಜುಗಳ ಮೂಲಕ ಉಚಿತವಾಗಿ ಶಿಕ್ಷಣ ನೀಡುತ್ತಿವೆ ಇದರೊಂದಿಗೆ ಖಾಸಗಿ ಶಾಲೆಗಳಿಗೂ ಕೂಡ ಅನುದಾನಗಳು ಎಲ್ಲಾ ವಿದ್ಯಾರ್ಥಿಗಳಿಗೋಸ್ಕರ ಇನ್ನು ಮುಂತಾದ ಸಾಕಷ್ಟು ಯೋಜನೆಗಳನ್ನು ವಿದ್ಯಾರ್ಥಿಗಳ ಭವಿಷ್ಯವನ್ನು ಗುಡಿಯಾಗಿಸಿಟ್ಟುಕೊಂಡೆ ರೂಪಿಸಿ ಜಾರಿಗೆ ತರಲಾಗಿದೆ.
ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು ಎನ್ನುವ ಧ್ಯೇಯದ ಮೇಲೆ ಸರ್ಕಾರ ಕೂಡ ಫಲವಾಗಿ ನಂಬಿಕೆ ಇರಿಸಿದ್ದು ಭಾರತದ ಭವ್ಯ ಭವಿಷ್ಯಕ್ಕಾಗಿ ಇಂದಿನಿಂದಲೇ ಯುವ ಜನತೆಯನ್ನು ಶಿಕ್ಷಣ ಎನ್ನುವ ನೀಡಿ ಸಿದ್ಧಗೊಳಿಸುತ್ತಿದೆ. ಸರ್ಕಾರಿ ಶಾಲಾ ಕಾಲೇಜು ಹೊರತುಪಡಿಸಿ ಖಾಸಗಿ ಶಾಲೆಯಲ್ಲಿಯೇ ಓದಬೇಕಾದ ಅನಿವಾರ್ಯತೆ ಅನೇಕ ಸಂದರ್ಭದಲ್ಲಿ ಎದುರಾಗುತ್ತದೆ ಆದರೆ ಇಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲ ಕುಟುಂಬಗಳು ಕೂಡ ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂದು ಹೇಳಲು ಬರುವುದಿಲ್ಲ.
ಈಗಿನ ಕಾಲದಲ್ಲಿ ಸಾಲ ಸೋಲ ಮಾಡಿ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿರುತ್ತಾರೆ. ಅಡ್ಮಿಶನ್ ಮಾಡಿಸುವುದೇ ಸಾಕಾಗಿರುವಂತಹ ಸಂದರ್ಭದಲ್ಲಿ ವರ್ಷ ಪೂರ್ತಿ ಶೈಕ್ಷಣಿಕ ಚಟುವಟಿಕೆಗಳಿಗೆ ಬೇಕಾದ ಹಣಕಾಸು ಹೊಂದಿಸುವುದು, ದೊಡ್ಡ ಸವಾಲಿನ ಕೆಲಸವೇ ಹಾಗಾಗಿ ಸ್ಕಾಲರ್ಶಿಪ್ ಗಳನ್ನು ನೀಡುವ ಮೂಲಕ ಸರ್ಕಾರ ಮತ್ತು ಸರ್ಕಾರೇತರವಾದ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಮತ್ತು NGO ಗಳು ವಿದ್ಯಾರ್ಥಿಗಳ ಕೈ ಹಿಡಿಯುತ್ತಿವೆ.
ಇಂತಹ ಸಂಸ್ಥೆಗಳಲ್ಲಿ ಒಂದಾದ ಇವೈ ಗ್ಲೋಬಲ್ ಡೆಲಿವರಿ ಸರ್ವಿಸಸ್ ಸಂಸ್ಥೆಯು (EY GDS) ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. 10ನೇ ತರಗತಿಯನ್ನು ಉತ್ತೀರ್ಣಗೊಳಿಸಿ 11ನೇ ತರಗತಿ ದಾಖಲಾಗಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಪಡೆಯಲು ಅರ್ಹರಾಗಿರುತ್ತಾರೆ NexGen edu ಸ್ಕಾಲರ್ಶಿಪ್ ಎಂದು ಕರೆಯಲಾಗುವ ಈ ಸ್ಕಾಲರ್ಶಿಪ್ ಪಡೆಯಲು ಇರುವ ಇನ್ನಿತರ ಕಂಡಿಷನ್ ಗಳು ಏನು? ಬೇಕಾಗುವ ದಾಖಲೆಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವುದರ ಪೂರ್ತಿ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಇರುವ ಕಂಡಿಷನ್ ಗಳು:-
* ಈ ಮೇಲೆ ತಿಳಿಸಿದಂತೆ 10ನೇ ತರಗತಿ ಉತ್ತೀರ್ಣರಾಗಿ 11ನೇ ತರಗತಿ ದಾಖಲಾಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಫಲಿತಾಂಶದಲ್ಲಿ ಶೇಕಡ 60% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ.3 ಲಕ್ಷಗಳನ್ನು ಮೀರಿರಬಾರದು
* ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ರಾಜ್ಯದ ವಿದ್ಯಾರ್ಥಿಗಳಿಗೆ ಮೊದಲ ಅವಕಾಶವಿರುತ್ತದೆ
* ಏಕ ಪೋಷಕರ ಮಕ್ಕಳು, ಅನಾಥರು, ವಿಶೇಷ ಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಮುಂತಾದ ವರ್ಗಕ್ಕೆ ಮೊದಲ ಆದ್ಯತೆ ಇರುತ್ತದೆ.
ಸಿಗುವ ನೆರವು:-
PUC ವಿದ್ಯಾಭ್ಯಾಸ ಮುಗಿಯುವವರೆಗೂ ಪ್ರತಿ ವರ್ಷ ರೂ. 15,000ದವರೆಗೆ ವಿದ್ಯಾರ್ಥಿ ವೇತನವು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರ
* ವಿದ್ಯಾರ್ಥಿಯ 10ನೇ ತರಗತಿ ಅಂಕಪಟ್ಟಿ
* 11ನೇ ತರಗತಿಗೆ ದಾಖಲಾಗಿರುವ ಬಗ್ಗೆ ಕಾಲೇಜಿನಿಂದ ಪಡೆದ ಐಡಿ ಕಾರ್ಡ್ ಅಥವಾ ಶುಲ್ಕ ಪಾವತಿಸಿರುವ ರಸೀದಿ
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಇತ್ತೀಚಿನ ಭಾವಚಿತ್ರಗಳು
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಮೊದಲಿಗೆ https://www.buddy4study.com/register ಈ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆ ಮೂಲಕ ವಿದ್ಯಾರ್ಥಿಗಳು ನೋಂದಣಿ ಆಗಬೇಕು
* ನೋಂದಣಿ ಆದ ಮೇಲೆ ಈ ಕೆಳಕಂಡ ವೆಬ್ಸೈಟ್ ಗೆ ಭೇಟಿ ಕೊಡಿ
https://www.buddy4study.com/page/nextgen-edu-scholarship
* ಅರ್ಜಿ ಸಲ್ಲಿಕೆ ಫಾರಂ ಲಿಂಕ್ ಕಾಣುತ್ತಿದೆ ಕ್ಲಿಕ್ ಮಾಡಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸಬ್ಮಿಟ್ ಕೊಡಿ ನಿಮ್ಮ ಅರ್ಜಿ ಅನುಮೋದನೆಯಾದರೆ ಸಂಬಂಧಿಸಿದ ಎಲ್ಲಾ ಸಂದೇಶಗಳು ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ (RMN) ಬರುತ್ತದೆ.