7th pay commission
ರಾಜ್ಯ ಸರ್ಕಾರದ ನೌಕರರ (state government employees) ಬಹುದಿನಗಳ ಬೇಡಿಕೆ ಆಗಿದ್ದ ಏಳನೇ ವೇತನ ಆಯೋಗ (7th pay commission) ಜಾರಿ ಕೋರಿಕೆಗೆ ಕೊನೆಗೂ ಸರ್ಕಾರ ಆದೇಶ ಶಿಫಾರಸ್ಸು ಮಾಡುವ ಮೂಲಕ ಎಲ್ಲಾ ನೌಕರರ ಪಾಲಿಕೆ ಸಿಹಿ ಸುದ್ದಿ ನೀಡಿದೆ. ಆಗಸ್ಟ್ 1 ರಿಂದಲೇ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಸರ್ಕಾರ ತೀರ್ಮಾನಿಸಿದೆ.
7ನೇ ವೇತನ ಆಯೋಗದ ಜಾರಿ ವಿಚಾರದ ಕುರಿತಾಗಿ ನೌಕರರ ಕಡೆಯಿಂದ ಕೋರಿಕೆ ಹೆಚ್ಚುತ್ತಾ ಹೋದಂತೆ ಸಿಎಂ ಸಿದ್ದರಾಮಯ್ಯನವರು (C.M Siddaramaiah) ಹಣಕಾಸು ಹೊಂದಾಣಿಕೆ ಪರಿಸ್ಥಿತಿ ಬಗ್ಗೆ ಹಣಕಾಸು ಇಲಾಖೆಯಿಂದ ವರದಿ ಕೇಳಿದ್ದರು. ಮಾಜಿ ಕಾರ್ಯದರ್ಶಿ ಕೆ.ಸುಧಾಕರ್ (K Sudhakar Committee) ನೇತೃತ್ವದ ತಂಡವು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾರ್ಚ್ 16, 2024 ರಲ್ಲಿ ಅಂತಿಮ ವರದಿ ಸಲ್ಲಿಸಿತ್ತು.
ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಈ ಬಗ್ಗೆ ಹೊಸ ಘೋಷಣೆಯಾಗಿದೆ ಇನ್ನು ಆಯೋಗದ ವರದಿಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಗಮನಹರಿಸುವುದಾದರೆ, ಈ ಹಿಂದೆ ಇದ್ದ ಸರ್ಕಾರದಲ್ಲಿ ಬಸವರಾಜು ಬೊಮ್ಮಾಯಿ (Basavaraj Bommai) ರವರು ಮುಖ್ಯಮಂತ್ರಿಗಳಾಗಿದ್ದಾಗಲೇ BJP ಸರ್ಕಾರವು ರಾಜ್ಯ ಸರ್ಕಾರಿ ನೌಕರರ ವೇತನವನ್ನು 17% ವೇತನವನ್ನು ಹೆಚ್ಚಿಸಲು ಶಿಫಾರಸ್ಸು ಮಾಡಿದ್ದರು.
ಈ ಸುದ್ದಿ ಓದಿ:- One Nation One Rate: ಆಭರಣಪ್ರಿಯರಿಗೆ ಗುಡ್ ನ್ಯೂಸ್ ದೇಶಾದ್ಯಂತ ಚಿನ್ನಕ್ಕೆ ಒಂದೇ ದರ ನಿಗದಿ ಹೊಸ ನಿಯಮ ಜಾರಿ.!
ಇದಕ್ಕೆ ಶೇ. 10.5% ಸೇರಿಸಿ ಒಟ್ಟು 27. 5% ರಷ್ಟು ಆಗುವಂತೆ ಸರ್ಕಾರಿ ನೌಕರರ ವೇತನ ಹೆಚ್ಚು ಮಾಡಲಾಗಿದೆ. ಅದರಂತೆ ಜಾರಿಯಾಗಿರುವ ನೂತನ ವೇತನ ನೀತಿಯ ಪ್ರಕಾರವಾಗಿ ವೇತನ ಎಷ್ಟು ಬದಲಾಗಿದೆ? ಎಂಬುದರ ವಿವರ ಹೀಗಿದೆ ನೂತನ ವೇತನ ನೀತಿಯ ಪ್ರಕಾರವಾಗಿ A ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ C & D ದರ್ಜೆಯಲ್ಲಿ ಬರುವ ನೌಕರರು ರೂ.39,945 ವೇತನ ಪಡೆಯಲ್ಲಿದ್ದಾರೆ.
ಇದುವರೆಗೂ ಜಾರಿಯಲ್ಲಿದ್ದ 6ನೇ ವೇತನ ಆಯೋಗದ (01 ಜುಲೈ 2022 ರಿಂದ) ಪ್ರಕಾರವಾಗಿ ಪಡೆಯುತ್ತಿದ್ದ ವೇತನವು ರೂ.26,945 ಆಗಿತ್ತು. ಇದರಲ್ಲಿ ಮೂಲ ವೇತನ ರೂ.17,000, ತುಟ್ಟಿಭತ್ಯೆ ಶೇ.31ರ ಪ್ರಕಾರ ರೂ.5,270 ಮತ್ತು ರೂ.4675 ಫಿಟ್ಮೆಂಟ್ ಆಗಿತ್ತು. ಆದರೆ ಈಗ 2024ರ ಪರಿಷ್ಕೃತ ಪಟ್ಟಿಯ ಪ್ರಕಾರವಾಗಿ ಮೂಲವೇತನವು ರೂ.27,000, ಅಂದಾಜು ತುಟ್ಟಿ ಭತ್ಯೆ ಶೇ.8.5% ರೂ.2295, ಮನೆ ಬಾಡಿಗೆ ಭತ್ಯೆ ರೂ.5,400 ವೈದ್ಯಕೀಯ ರೂ.500 ಮತ್ತು CCA ಅಂದರೆ ನಗರ ಪರಿಹಾರ ಬಗ್ಗೆ ರೂ.750 ಸೇರಿ ರೂ.35,945 ಸಿಗುತ್ತಿದೆ.
ಈ ಸುದ್ದಿ ಓದಿ:- PF Amount: ಉದ್ಯೋಗಿಗಳ ‘PF’ ಖಾತೆಗೆ ‘ಬಡ್ಡಿ ಹಣ’ ಜಮಾ.! ನಿಮ್ಮ ಖಾತೆಗೆ ಜಮೆ ಆಗಿದಿಯೇ ತಿಳಿಯಲು ಹೀಗೆ ಚೆಕ್ ಮಾಡಿ.!
A ಮತ್ತು B ದರ್ಜೆಯ ನೌಕರರಿಗೆ ಸಹ ಇದುವರೆಗೂ 2022 ರ ಜುಲೈ 1ರಿಂದ ಜಾರಿಯಲ್ಲಿದ 6ನೇ ವೇತನ ಆಯೋಗದ ಪ್ರಕಾರವಾಗಿ ರೂ.26945 (ಮಊಲಭತ್ಯಎ ರೂ.17,000+ ತುಟ್ಟಿ ಭತ್ಯೆ ರೂ.5,270 + ಫಿಟ್ ಮೆಂಟ್ 4) ಸಿಗುತ್ತಿತ್ತು. ಈಗ 7ನೇ ವೇತನ ಆಯೋಗದ ವರದಿಯಲ್ಲಿ A ಮತ್ತು B ದರ್ಜೆಯ ನೌಕರರಿಗೆ ಮೂಲ ವೇತನವೇ ರೂ.27,000 ಹೆಚ್ಚಳವಾಗಿ ತುಟ್ಟಿ ಭತ್ಯೆ ರೂ.2,298 ಮನೆ ಬಾಡಿಗೆ ರೂ.5,400 ನಗರ ಪರಿಹಾರ ಭತ್ಯೆ (CCA) ರೂ.900 ಸೇರಿ ರೂ.35,595 ಸಿಗುತ್ತಿದೆ. ಹೊಸ ವೇತನ ನೀತಿಯ ಪ್ರಕಾರವಾಗಿ ಈಗ ರೂ.8050 ಹೆಚ್ಚಿನ ವೇತನ ಸಿಗುತ್ತಿದೆ.